ಹುಬ್ಬಳ್ಳಿ : ಈದ್ಗಾ ಮೈದಾನದಲ್ಲಿ ಗಣೆಶೋತ್ಸವ ಆಚರಣೆಗೆ ಗಡುವು ವಿಚಾರವಾಗಿ ಹಿಂದೂ ಸಂಘಟನೆಗಳು ತೀವ್ರ ಸ್ವರೂಪದ ಹೋರಾಟ ನಡೆಸುತ್ತಿದ್ದಾರೆ.
ಶ್ರೀರಾಮಸೇನೆ ಮುಖಂಡ ಪ್ರಮೋದ ಮುತಾಲಿಕ್ ಹೇಳಿಕೆ ನೀಡಿದ್ದಾರೆ. ಗಣೇಶೋತ್ಸವಕ್ಕೆ ಸರ್ಕಾರ ಹಾಗೂ ಪಾಲಿಕೆ ಮೀನಾ ಮೇಷ ಎಣಿಸುತ್ತಿದ್ದು, ಮೈದಾನವೇನೂ ನಿಮ್ಮಪ್ಪನ ಸ್ವತ್ತಲ್ಲ, ಅದು ಸಾರ್ವಜನಿಕ ಸ್ವತ್ತು. ಅಲ್ಲಿ ಮುಸ್ಲಿಂ ಪ್ರಾರ್ಥನೆಗೆ ಅವಕಾಶ ನೀಡ್ತಾರೆ, ಆದ್ರೆ ಗಣೇಶೋತ್ಸವಕ್ಕೆ ಯಾಕೆ ಅವಕಾಶ ನೀಡ್ತಿಲ್ಲ. ಪಾಲಿಕೆಗೆ ಇದು ಕೊನೆಯ ಗಡವು, ಈ ಗಡುವು ಮೀರಿದ್ರೆ ನಾವು ಗಣೇಶ ಆಚರಣೆ ಮಾಡೇ ಮಾಡ್ತೀವಿ. ಅನುಮತಿ ಕೊಟ್ಟರೂ ಸರಿ, ಕೊಡದಿದ್ದರೂ ಸರಿ ಸಾವಿರಾರು ಕಾರ್ಯಕರ್ತರ ನೇತೃತ್ವದಲ್ಲಿ ಗಣೇಶೋತ್ಸವ ಆಚರಣೆ ಮಾಡೇ ಮಾಡ್ತೀವಿ ಎಂದರು.
ಗಣೇಶ ಪ್ರತಿಷ್ಠಾಪನೆ ಅವಕಾಶ ಕೊಡಬೇಕು, ಅವಕಾಶ ಕೊಡದೆ ಇದ್ದರೆ ಇದೇ 26 ರಂದು ಜಗದೀಶ್ ಶೆಟ್ಟರ್ ಮನೆ ಮುಂದೆ ಪ್ರತಿಭಟನೆ ಮಾಡುತ್ತೇವೆ. ತಾಕತ್ ಇದ್ರೆ ಅದೇನ್ ಮಾಡ್ಕೋತಿರೋ ನಾವು ನೋಡ್ತೀವಿ ಎಂದು ಪಾಲಿಕೆ ಅಧಿಕಾರಿಗಳಿಗೆ ಹಾಗೂ ಸರ್ಕಾರಕ್ಕೆ ಪ್ರಮೋದ್ ಮುತಾಲಿಕ್ ಎಚ್ಚರಿಕೆ ಸಂದೇಶ ನೀಡಿದ್ದಾರೆ.