Friday, May 17, 2024

ಕೃಷ್ಣಾ ನದಿ ತೀರದ ಜಮೀನಿನಲ್ಲಿ ಗಜಗಾತ್ರದ ಮೊಸಳೆ ಪ್ರತ್ಯಕ್ಷ

ಯಾದಗಿರಿ: ಜಿಲ್ಲೆಯ ವಡಗೇರಾ ತಾಲೂಕಿನ ಅನಕಸೂಗೂರನಲ್ಲಿ ನದಿ ತೀರದಜಮೀನೊಂದರಲ್ಲಿ ಭಾರಿ ಗಾತ್ರದ ಮೊಸಳೆ ಒಂದು ಪ್ರತ್ಯಕ್ಷವಾಗಿದೆ.

ಕೃಷ್ಣಾ ನದಿ ತೀರದ ಜಮೀನಿನಲ್ಲಿ ಮೊಸಳೆ ಕಂಡು ಬಂದಿದ್ದು, ಮೊಸಳೆ ನೋಡಲು ಜನತೆ ಮುಗಿ ಬಿದ್ದಿದ್ದಾರೆ. ಮೊಸಳೆ ಹಿಡಿಯಲು ಹಗ್ಗ ಹಾಕಿ ಕಟ್ಟಲಾಯಿತು. ಬಳಿಕ ಮೊಸಳೆಯನ್ನ ರಣರೋಚಕವಾಗಿ ಹರಸಾಹಸ ಪಟ್ಟು ಗ್ರಾಮಸ್ಥರು ಸೆರೆ ಹಿಡಿದಿದ್ದಾರೆ.

ಇನ್ನು ಗ್ರಾಮಸ್ಥರು ಸೆರೆ ಹಿಡಿದ ಮೊಸಳೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕೊಂಡೊಯ್ದರು. ಈ ಘಟನೆ ಮತ್ತೆ ಮರುಕಳಿಸದಂತೆ ಅರಣ್ಯ ಇಲಾಖೆ ಮುನ್ನೆಚ್ಚರಿಕೆ ವಹಿಸಲು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಸ್ಥಳಕ್ಕೆ ತಹಶೀಲ್ದಾರ್ ಸುರೇಶ್ ಅಂಕಲಗಿ ಹಾಗೂ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಭಾರಿ ಮಳೆಯಿಂದ ಕೃಷ್ಣಾ ನದಿ ತುಂಬಿ ಹರಿಯುತ್ತಿರುವುದರಿಂದ ನದಿ ತಟದ ಜಮೀನುಗಳಲ್ಲಿ ಮೊಸಳೆ ಕಾಟ ಹೆಚ್ಚಾಗಿದೆ.

RELATED ARTICLES

Related Articles

TRENDING ARTICLES