Sunday, December 22, 2024

15 ರಂದು ಹೊಸ ವಂದೇ ಮಾತರಂ ಹಾಡು ಬಿಡುಗಡೆ

ಬೆಂಗಳೂರು : ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಸ್ಯಾಂಡಲ್‌ವುಡ್‌ನ ನಟರು ಅಭಿನಯ ಮಾಡಿರುವ ಹೊಸ ವಂದೇ ಮಾತರಂ ಹಾಡು ಬಿಡುಗಡೆ ಮಾಡಿದ್ದಾರೆ.

ಖ್ಯಾತ ನಿರ್ದೇಶಕ ಆನಂದ್ ಸಂತೋಷ್‌ರಾಮ್ ನಿರ್ದೇಶನದಲ್ಲಿ ಹಾಡಿನ ಚಿತ್ರೀಕರಣ ಮಾಲಾಗಿದ್ದು, ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ಹಾಡಿನ ಚಿತ್ರೀಕರಣ ಮಾಡಲಾಗಿದೆ. ಆಂದಾಜು 7 ಲಕ್ಷ ರೂಪಾಯಿಯಲ್ಲಿ ಹಾಡಿನ ಚಿತ್ರೀಕರಣ ಮಾಡಲಾಗಿದ್ದು, ಹರ್ ಘರ್ ತಿರಂಗಾ ಅಭಿಯಾನದ ಹಿನ್ನೆಲೆಯಲ್ಲಿ, ಖ್ಯಾತ ನಟರಿಂದ ರಾಷ್ಟ್ರಧ್ವಜಕ್ಕೆ ಗೌರವ ನೀಡುವ ಈ ಹಾಡಿನಲ್ಲಿ ಹಾಡಿನಲ್ಲಿ ಡಾ.ವಿ.ರವಿಚಂದ್ರನ್, ಅನಂತ್‌ನಾಗ್, ರಮೇಶ್ ಅರವಿಂದ್, ಜಗ್ಗೇಶ್, ರಿಷಬ್ ಶೆಟ್ಟಿ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಆಗಸ್ಟ್ 15 ರಂದು ವಂದೇ ಮಾತರಂ ಹಾಡು ಬಿಡುಗಡೆಯಾಗಲಿದೆ.

RELATED ARTICLES

Related Articles

TRENDING ARTICLES