Thursday, January 23, 2025

ಬಿಜೆಪಿ ವಿರುದ್ಧ ಬಿ.ಕೆ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರು : ದೇಶ ಭಕ್ತಿಯ ಬಗ್ಗೆ ನಕಲಿ ದೇಶಭಕ್ತರು ನಮಗೆ ಹೇಳಿ ಕೊಡುತ್ತಿದ್ದಾರೆ. ದ್ವೇಷ ಭಕ್ತರಿಗೆ ದೇಶದಲ್ಲಿ ಜಾಗವಿಲ್ಲ ಎಂದು ಬಿಜೆಪಿ ವಿರುದ್ಧ ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದರು.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಕ್ವಿಂಟ್ ಇಂಡಿಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟದಲ್ಲಿ ಯಾವ ಆರ್‌ಎಸ್‌ಎಸ್, ಬಿಜೆಪಿಯವರು ಇರಲಿಲ್ಲ.ಸಂಪೂರ್ಣ ಸ್ವಾತಂತ್ರ್ಯ ಹೋರಾಟಕ್ಕೆ ಕಾಂಗ್ರೆಸ್ ಪಕ್ಷದ ಕೊಡುಗೆ ಇದೆ ಎಂದರು. ಮೋದಿ ಭಕ್ತರು ದೇಶಕ್ಕೆ 2014ರಲ್ಲಿ ಸ್ವಾತಂತ್ರ್ಯ ಸಿಕ್ಕಿದೆಯೆಂದು ಪರೋಕ್ಷವಾಗಿ ಹೇಳಿದ್ದಾರೆ. ಇವರು ನಮಗೆ ತ್ರಿವರ್ಣ ಧ್ವಜದ ಬಗ್ಗೆ ಹೇಳುತ್ತಾರೆ. ಬಿಜೆಪಿಯವರು ಭಗವಾಧ್ವಜ ಇಟ್ಕೊಂಡಿದ್ದಾರೆ ಹೊರತು ತ್ರಿವರ್ಣ ಧ್ವಜವಲ್ಲ. ಇವರು ಸಂವಿಧಾನಕ್ಕೆ ಯಾವುದೇ ಕೊಡುಗೆ ನೀಡದವರು. ನಮಗೆ ದೇಶಭಕ್ತಿಯ ಪಾಠ ಮಾಡುತ್ತಿದ್ದಾರೆ ಎಂದು ಹರಿಪ್ರಸಾದ್ ಕಿಡಿಕಾರಿದರು.
=

RELATED ARTICLES

Related Articles

TRENDING ARTICLES