ಟಗರು ಡಾಲಿ ರೆಟ್ರೋ ಸ್ಟೈಲ್ಗೆ ಪ್ರೇಕ್ಷಕರು ಮಾರು ಹೋದ್ರೇ, ರಚ್ಚು ಸ್ಯಾರಿಯಲ್ಲಿ ಗ್ಲಾಮರಸ್ ಆಗಿ ಕಂಡು ಪಡ್ಡೆ ಹೈಕಳ ನಿದ್ದೆಗೆಡಿಸಿದ್ದಾರೆ. ಇತ್ತ ಕರಾವಳಿಯ ಮಳೆ ಹಾಡಿಗೆ ಮಿಂದ ಚಿತ್ರರಸಿಕರು ಮಾನ್ಸೂನ್ ರಾಗಕ್ಕೆ ತಲೆದೂಗುತ್ತಿದ್ದಾರೆ. ಇದೆಲ್ಲಾ ಡಾಲಿ, ರಚ್ಚು ಸಿನಿಮಾದ ಹವಾ. ಇನ್ನೂ, ಮಾನ್ಸೂನ್ ರಾಗ ಚಿತ್ರತಂಡದ ಡಿಫರೆಂಟ್ ಪ್ರೊಮೋಷನ್ಸ್ ಹೇಗಿದೆ ಗೊತ್ತಾ..?
ಡಾಲಿ ಜೊತೆ ರಚ್ಚುಗೂ ಬೀಳಲಿವೆ ‘ಮಾನ್ಸೂನ್’ ಕಟೌಟ್ಸ್..!
ಕರ್ನಾಟಕದಲ್ಲಿ ಡಾಲಿ ಗುಡುಗು ಸಿಡಿಲು ಆರ್ಭಟಕ್ಕೆ ಚಾಲನೆ
ನೂರು ಕಟೌಟ್ಗಳಲ್ಲಿ ರಾಜ್ಯಾದ್ಯಂತ ರಚ್ಚು, ಡಾಲಿ ಮಿಂಚು
ಕುಂಬಳಕಾಯಿ ಹೊಡೆದು, ದೀಪ ಹಚ್ಚಿ ಪ್ರೊಮೋಷನ್ಸ್ ಸ್ಟಾರ್ಟ್
ಸಾಲು ಸಾಲು ಸಿನಿಮಾಗಳಲ್ಲಿ ಸಖತ್ ಬ್ಯುಸಿ ಇರೋ ಟಗರು ಡಾಲಿಯ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ ಮಾನ್ಸೂನ್ ರಾಗ. ಇಡೀ ರಾಜ್ಯವೇ ಮಾನ್ಸೂನ್ ಮುಂಗಾರಿಗೆ ಥಂಡಾ ಹೊಡೆದಿದೆ. ಎಲ್ಲ ಕಡೆ ಮಾನ್ಸೂನ್ ಮಳೆಯ ಹವಾ ಜೋರಾಗಿದ್ರೆ, ಇತ್ತ ಡಾಲಿ, ರಚ್ಚು ಕಾಂಬಿನೇಷನ್ನ ಮಾನ್ಸೂನ್ ರಾಗ ಚಿತ್ರದ ಹವಾ ಅದಕ್ಕಿಂತ ಡಬಲ್ ಆಗಿದೆ. ಡಾಲಿ ಧನಂಜಯ ರೆಟ್ರೋ ಸ್ಟೈಲ್ನಲ್ಲಿ ಕರಾವಳಿ ಸೀಮೆಯ 60ರ ದಶಕದ ಕಥೆ ಹೇಳೋಕೆ ಹೊರಟಿದ್ದಾರೆ.
ಮಾನ್ಸೂನ್ ರಾಗ ಚಿತ್ರ ಆಗಸ್ಟ್ 19ಕ್ಕೆ ತೆರೆಗೆ ಬರೋಕೆ ತುದಿಗಾಲಲ್ಲಿ ನಿಂತಿದೆ. ಮುಂಬೈ, ಹೈದರಾಬಾದ್ನಲ್ಲಿ ಮಳೆ, ಕೊಚ್ಚಿನ್, ಚೆನ್ನೈನಲ್ಲಿ ಸೈಕ್ಲೋನ್ ಎದ್ದಿದ್ಯಾಕೆ ಅಂತಾ ಯಾರನ್ನೇ ಕೇಳಿದ್ರು, ಕಟ್ಟೆ ಬೆಂಗಳೂರಲ್ಲಿ ಗುಡುಗ್ತಾ ಇದಾನೆ ಅದಕ್ಕೆ ಅಂತಾನೆ ಹೇಳ್ತಾರೆ. ಮಾನ್ಸೂನ್ ರಾಗ ಚಿತ್ರದಲ್ಲಿ ಧನಂಜಯನ ವರುಣಾರ್ಭಟ ಬಲು ಜೋರಾಗಿದೆ. ಪ್ರೊಮೋಷನ್ ವಿಚಾರದಲ್ಲೂ ಡಾಲಿಯ ಸದ್ದು ದುಪ್ಪಟ್ಟಾಗಿದೆ. ಡಾಲಿ, ರಚ್ಚು ಕಟೌಟ್ಗಳು ರಾಜ್ಯಾದ್ಯಾಂತ ರಾರಾಜಿಸಲಿವೆ. ರಾಶಿ ಕಟೌಟ್ಗೆ ಆರ್ಡರ್ ಕೊಟ್ಟಿರೋ ಚಿತ್ರತಂಡ ಅದ್ಧೂರಿಯಾಗಿ ಚಾಲನೆ ನೀಡಿದೆ.
ಈ ಬಾರಿ ಮಾನ್ಸೂನ್ ರಾಗ ಚಿತ್ರದ ಕ್ರೇಜ್ಗೆ ಚಿತ್ರಪ್ರೇಮಿಗಳು ಕೂಡ ಥ್ರಿಲ್ ಆಗಿದ್ದಾರೆ. ಎಲ್ಲರೂ ತಿರುಗಿ ನೋಡುವಂತ ಕಟೌಟ್ಗಳು ಸಿದ್ಧವಾಗ್ತಿವೆ. ಒಟ್ಟು ನೂರು ಕಟೌಟ್ಗಳಿಗೆ ಆರ್ಡರ್ ಕೊಟ್ಟಿರೋ ಅಭಿಮಾನಿಗಳು ನೇರವಾಗಿ ಕಟೌಟ್ ಅಡ್ಡಾಗೆ ಎಂಟ್ರಿ ಕೊಟ್ಟಿದ್ರು. ಬಾಸ್ ಕಟೌಟ್ ಬೇಗ ರೆಡಿಯಾಗ್ಬೇಕು. ಲೇಟ್ ಆಗ್ಬಾರ್ದು ಅಂತಾ ವಾರ್ನಿಂಗ್ ಕೂಡ ಕೊಟ್ಟರು. ಎರಡು ಸ್ಯಾಂಪಲ್ ಕಟೌಟ್ಗಳಲ್ಲಿ ಒಂದನ್ನು ಫೈನಲ್ ಮಾಡಿದ್ರು. ಅಲ್ಲೇ ಕುಂಬಳಕಾಯಿ ಒಡೆದು, ಡಾಲಿ ರಚ್ಚುಗೆ ಹಾರ ಹಾಕಿ ದೀಪ ಬೆಳಗಿದ್ರು.
ಅಂತೂ ವಿಭಿನ್ನವಾಗಿ ಮಾನ್ಸೂನ್ ರಾಗ ಚಿತ್ರದ ಪ್ರೊಮೋಷನ್ಸ್ಗೆ ಚಾಲನೆ ನೀಡಲಾಗಿದೆ. ಚಿತ್ರದಲ್ಲಿ ಸ್ಯಾರಿ ತೊಟ್ಟು ಹಾಟ್ ಲುಕ್ನಲ್ಲಿ ರಚಿತಾ ಮಿಂಚಿದ್ರೆ, ಆಟ್ಟಿಟ್ಯೂಡ್ ಟಪೋರಿಯಾಗಿ ಯಶಾ ಶಿವಕುಮಾರ್ ಕಾಣಿಸಿದ್ದಾರೆ. ಈಗಾಗ್ಲೇ ಯಶಾ ಇಂಟ್ರಡಕ್ಷನ್ ಮ್ಯೂಸಿಕ್ ಡ್ಯಾನ್ಸ್ಗೆ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಎಲ್ಲರೂ ರೀಲ್ಸ್ ಮಾಡಿ ಎಂಜಾಯ್ ಮಾಡ್ತಿದ್ದಾರೆ. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಕವರ್ ಸಾಂಗ್ ಕೂಡ ಫ್ಯಾನ್ಸ್ ಮಾಡಿದ್ದಾರೆ. ಅಂತೂ ಡಾಲಿ ಮಾನ್ಸೂನ್ ಮಾರುತಕ್ಕೆ ಎಲ್ಲರೂ ನೆಂದು ತೊಪ್ಪೆಯಾಗೋದು ಪಕ್ಕಾ ಆಗಿದೆ.
ಸಿನಿಮಾದಲ್ಲಿ ಹಿಂದೆಂದೂ ಮಾಡೇ ಇರದ ಟಫ್ ಚಾಲೆಂಜಿಂಗ್ ರೋಲ್ನಲ್ಲಿ ರಚಿತಾ ಕಾಣಿಸಿದ್ದಾರೆ. ಈ ಪಾತ್ರಕ್ಕೆ ಅವರು ಒಪ್ಪಿದ್ದೆ ದೊಡ್ಡ ಸಾಹಸ ಎನ್ನಲಾಗ್ತಿದೆ. ರಮೇಶ್ ಅರವಿಂದ್ ನಟನೆಯ ಪುಷ್ಪಕ ವಿಮಾನ ಚಿತ್ರ ಮಾಡಿದ್ದ ನಿರ್ದೇಶಕ ಎಸ್. ರವೀಂದ್ರನಾಥ್ ಮತ್ತು ನಿರ್ಮಾಪಕ ವಿಖ್ಯಾತ್ ಎರಡನೇ ಬಾರಿ ಒಟ್ಟಾಗಿ ಸಿನಿಮಾ ಮಾಡುತ್ತಿದ್ದಾರೆ. ವಿಂಟೇಜ್ ಸಿನಿಮಾವಾಗಿರೋದ್ರಿಂದ ಎಲ್ಲಿಯೂ ಕಾಂಪ್ರಮೈಸ್ ಆಗದೆ ನಿರ್ಮಾಪಕ ವಿಖ್ಯಾತ್ ಬಂಡವಾಳ ಹೂಡಿದ್ದಾರೆ. ಪೋರ್ಚಗೀಸರ ಕಾಲದ ಸೆಟ್ ಹಾಕಿ 60ರ ದಶಕದ ನ್ಯಾಚುರಲ್ ಫೀಲ್ ಕೊಡಲಾಗಿದೆ. ಆಗಸ್ಟ್ 19ಕ್ಕೆ ವರ್ಲ್ಡ್ ವೈಡ್ ರಿಲೀಸ್ ಆಗ್ತಿರೋ ಮಾನ್ಸೂನ್ ರಾಗದ ಎಫೆಕ್ಟ್ ಹೇಗಿರುತ್ತೋ ಕಾದು ನೋಡ್ಬೇಕು.
ರಾಕೇಶ್ ಆರುಂಡಿ, ಫಿಲ್ಮ್ ಬ್ಯೂರೋ, ಪವರ್ ಟಿವಿ