Monday, December 23, 2024

ದೇಶದೆಲ್ಲೆಡೆ ಇಂದಿನಿಂದ ಜಿಎಸ್​​ಟಿ ದರ ಹೆಚ್ಚಳ

ಬೆಂಗಳೂರು : ಇಂದಿನಿಂದ ಜನ್ರ ಮೇಲೆ ಕೇಂದ್ರ ಸರ್ಕಾರ ತೆರಿಗೆ ಬರೆ ಹಾಕ್ತಿದೆ. ದೇಶದೆಲ್ಲೆಡೆ ಇವತ್ತಿನಿಂದ ಕೇಂದ್ರ ನೂತನ ಜಿಎಸ್ಟಿ ನೀತಿ ಜಾರಿಯಾಗ್ತಿದೆ.

ದಿನಬಳಕೆ ಹಲವು ವಸ್ತುಗಳ ಹಾಗೂ ಆಹಾರ ವಸ್ತುಗಳ ಮೇಲೆ ಜೆಎಸ್ಟಿ ಜಾಸ್ತಿಯಾಗುತ್ತಿದ್ದು, ಇಂದಿನಿಂದ ಯಾವದಕ್ಕೆಲ್ಲಾ ಜಿಎಸ್ಟಿ ..ಯಾವುದೆಲ್ಲಾ ದುಬಾರಿ ಗೊತ್ತಾ..?

-ಪ್ಯಾಕ್ ಮಾಡಿರುವ ಬ್ರ್ಯಾಂಡ್ ಆಹಾರ ಪದಾರ್ಥಗಳು ಮೇಲೆ – 5% GST
-ಮೊಸರು, ಲಸ್ಸಿ, ಬೆಣ್ಣೆ, ಹಪ್ಪಳ, ಜೇನುತುಪ್ಪ , ಉಪ್ಪಿನಕಾಯಿ – 5% GST
-ಪನ್ನೀರ್, ಒಣಕಾಳು, ತರಕಾರಿ, ಮಾಂಸ, ಮೀನು – 5% GST
-ಭೂಪಟ ಮತ್ತು ಅಟ್ಲಾಸ್ – 12% GST
-ಚೆಕ್ ಬುಕ್, ಆರ್‌ಬಿಐ, ಐಆರ್‌ಡಿಐ, ಸೆಬಿ ಸೇವೆಗಳು – 18% GST
-ಸೋಲಾರ್ ವಾಟರ್ ಹೀಟರ್, ಲೆದರ್ ಸಾಮಗ್ರಿ  – 5% to 12% GST
-ಚಾಕು, ಬ್ಲೇಡ್, ಚಮಚ, ಫೋರ್ಕ್ – 12% to 18% GST
-ಪೆಟ್ರೋಲಿಯಂ, ಕಲ್ಲಿದ್ದಲು, ವೈಜ್ಞಾನಿಕ ಯಂತ್ರಗಳು – 12% to 18% GST
-ಇಂಕ್, ಮೆಂಡರ್, ಬ್ಲೇಡ್, ಸೌಟು, ಜಾಲರಿ ಸೌಟು, – 12% to 18% GST
-ವಿದ್ಯುತ್ ಚಾಲಿತ ವಾಟರ್ ಪಂಪ್, ಬೈಸಿಕಲ್ ಪಂಪ್ – 12% to 18% GST
-ಟರ್ಬೈನ್ ಪಂಪ್, ಸಬ್ಮರ್ಸಿಬಲ್ ಪಂಪ್ – 12% to 18% GST
-ಡೈರಿ ಉದ್ಯಮದ ಯಂತ್ರಗಳು, ರುಬ್ಬುವ ಯಂತ್ರ – 12% to 18% GST
-ಧಾನ್ಯ ವಿಂಗಡಿಸುವ ಗ್ರೇಡಿಂಗ್ ಯಂತ್ರ – 12% to 18% GST
-₹1000 ಗಿಂತ ಕಡಿಮೆ ಇರೋ -ಹೋಟೆಲ್ ರೂಂ – 0 to 12% GST
-₹5000 ಹೆಚ್ಚು ಶುಲ್ಕ ಇರೋ ಆಸ್ಪತ್ರೆಯ ಸ್ಪೆಷಲ್ ವಾರ್ಡ್ – 0 to 5% GST ಹೆಚ್ಚಾಗಲಿದೆ.

RELATED ARTICLES

Related Articles

TRENDING ARTICLES