ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಅವಾಂತರದಿಂದಾಗಿ ರಾಜ್ಯ ಹೆದ್ದಾರಿ ಅಣಶಿ ಘಾಟನಲ್ಲಿ 34ರಲ್ಲಿ ಗುಡ್ಡ ಕುಸಿತ ರಾತ್ರಿ ವೇಳೆ ಸಂಚಾರ ಬಂದ್ ಮಾಡಲಾಗಿದೆ.
ರಾಜ್ಯ ಹೆದ್ದಾರಿ ಅಣಶಿ ಘಾಟನಲ್ಲಿ 34ರಲ್ಲಿ ಗುಡ್ಡ ಕುಸಿತ ರಾತ್ರಿ ವೇಳೆ ಸಂಚಾರ ಬಂದ್ ಆಗಿದೆ. ಚತುಷ್ಪಥ ರಾಷ್ಟ್ರೀಯ ಹೆದ್ದಾರಿ 63ರ ಕರಾವಳಿ ತಾಲೂಕಿನಾದ್ಯಂತ ಗುಡ್ಡ ಕುಸಿಯುವ ಅತಂಕದಲ್ಲಿದೆ. ಭಾರೀ ಮಳೆಯಿಂದಾಗಿ ನೂರಾರು ಏಕರೆಯಲ್ಲಿ ಕೊಚ್ಚಿ ಹೋಗಿರುವ ಭೀತ್ತನೆ ಬೀಜ. ಗದ್ದೆ ನಾಟಿ ಸಂದರ್ಭದಲ್ಲಿ ಭಾರೀ ಮಳೆಯಿಂದ ಕೃಷಿ ಕಾರ್ಯಕ್ಕೆ ಹಿನ್ನಡೆ ಉಂಟಾಗಿದೆ.
ಇನ್ನು, ರಾಷ್ಟೀಯ ಹೆದ್ದಾರಿ 63 ರಲ್ಲಿ ಗುಡ್ಡ ಕುಸಿಯುವ ಭೀತಿಯಲ್ಲಿದ್ದು, ಅಂಕೋಲಾ ಹುಬ್ಬಳ್ಳಿ ಸಂಪರ್ಕ ಕಲ್ಪಿಸುವ ರಾಷ್ಟೀಯ ಹೆದ್ದಾರಿ 63ರಲ್ಲಿ ಗುಡ್ಡ ಕುಸಿಯುವ ಆತಂಕ ಉಂಟಾಗಿದೆ. ಮಳೆ ಪ್ರಮಾಣ ನೋಡಿ ಶಾಲಾ- ಕಾಲೇಜುಗಳಿಗೆ ರಜೆ ನೀಡುವ ಬಗ್ಗೆ ಆಯಾ ತಾಲೂಕಿನ ಶಿಕ್ಷಣ ಅಧಿಕಾರಿಗಳಿಗೆ ಡಿಸಿ ಜವಾಬ್ದಾರಿ ನೀಡಿದ್ದಾರೆ.
ಅದಲ್ಲದೇ, ಭಾರೀ ಮಳೆಯಾಗುತ್ತಿರುವ ಹಿನ್ನಲೆ ಜಿಲ್ಲೆಯಲ್ಲಿ ಬಿಡು ಬಿಟ್ಟಿರುವ ಎಸ್ ಡಿಆರ್ ಎಫ್ ತಂಡಗಳು, ಮುಂಜಾಗ್ರತಾ ಕ್ರಮವಾಗಿ ಕುಮಟ, ಅಂಕೋಲಾದಲ್ಲಿ ಪ್ರತ್ಯೇಕ ಎರಡು ಎರಡು ಎಸ್ ಡಿಆರ್ ಎಫ್ ತಂಡ ನಿಯೋಜನೆ ಮಾಡಿದ್ದು, ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು ಸಹ ರೆಡ್ ಅರ್ಲಟ್ ಘೋಷಣೆ ಮಾಡಿದ್ದಾರೆ. ಇದು ವರೆಗೂ ಕುಮಟ ತಾಲೂಕಿನಲ್ಲಿ ಶಾಲಾ -ಕಾಲೇಜು ಆರಂಭದ ಬಗ್ಗೆ ಸ್ಪಷ್ಟನೆ ನೀಡದ ಬಿಇಓ. ಶಾಲೆ ಆರಂಭದ ಬಗ್ಗೆ ಸರಿಯಾಗಿ ಮಾಹಿತಿ ನೀಡದ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾಗಿದ್ದಾರೆ.