Wednesday, January 22, 2025

ಪ್ರೀ ರಿಲೀಸ್ ಬ್ಯುಸಿನೆಸ್ನಲ್ಲಿ ಏಜೆಂಟ್ ಅಖಿಲ್ ರೆಕಾರ್ಡ್

ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಒಂಥರಾ ನಿರೀಕ್ಷೆಗೂ ಮೀರಿ ವರ್ಕೌಟ್ ಆಗ್ತಿದೆ. ಅದ್ರಲ್ಲೂ ನಮ್ಮ ಸೌತ್ ಮೂವಿಗಳು ಬಾಲಿವುಡ್ ಅಂಗಳದಲ್ಲೂ ಸಿಕ್ಕಾಪಟ್ಟೆ ಸದ್ದು ಮಾಡ್ತಿವೆ. ಇದೀಗ ಕಿಂಗ್ ನಾಗಾರ್ಜುನ್ ಕಿರಿಯ ಪುತ್ರ ಅಖಿಲ್ ಕೂಡ ಸಿನಿಮಾ ರಿಲೀಸ್​ಗೂ ಮೊದ್ಲೇ ಹೊಸತೊಂದು ದಾಖಲೆ ಬರೆದಿದ್ದಾರೆ. ಅದೇನು ಅನ್ನೋದ್ರ ಗಮ್ಮತ್ತಿನ ಸ್ಟೋರಿ ನಿಮಗಾಗಿ.

  • 70 ಕೋಟಿ ಬ್ಯುಸಿನೆಸ್​ನಿಂದ ನಾಗಾರ್ಜುನ್ ತನಯ ಅಚ್ಚರಿ
  • ಕಿಕ್, ರೇಸ್ ಗುರ್ರಂ ಸಾರಥಿಯ ನಿರೀಕ್ಷಿತ ಚಿತ್ರ ಏಜೆಂಟ್
  • ಬ್ಯಾಚಲರ್​ನಿಂದ ಬದಲಾಯ್ತು ಅಖಿಲ್ ಅಕ್ಕಿನೇನಿ ಲಕ್..!

ಎಷ್ಟೇ ದೊಡ್ಡ ಬ್ಯಾಗ್ರೌಂಡ್, ಆಸ್ತಿ- ಅಂತಸ್ತು ಇದ್ರೂ ಸಹ ಎಳ್ಳಷ್ಟು ಅದೃಷ್ಟ ಕೈಹಿಡಿಯಲಿಲ್ಲ ಅಂದ್ರೆ ಯಾವುದೇ ಕಲಾವಿದ ಸಕ್ಸಸ್ ಆಗಲ್ಲ. ಅದೇ ರೀತಿ ಟಾಲಿವುಡ್​ನ ಅಕ್ಕಿನೇನಿ ಕುಟುಂಬದ ಮೂರನೇ ತಲೆಮಾರಿನ ಪ್ರತಿಭೆ ಅಖಿಲ್ ಅಕ್ಕಿನೇನಿ ಕೂಡ ಸಿಕ್ಕಾಪಟ್ಟೆ ಸೈಕಲ್ ಹೊಡೆದ್ರು. ಬಾಲನಟನಾಗಿಯೇ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟರೂ ಸಹ ಕಲಾದೇವಿ ಅವ್ರನ್ನ ಕೈಹಿಡಿಯೋಕೆ ಸಾಕಷ್ಟು ಕಾಲಾವಕಾಶ ತೆಗೆದುಕೊಂಡಿತು.

ಅಖಿಲ್, ಹೆಲೋ, ಮಿಸ್ಟರ್ ಮಜ್ನು ಹೀಗೆ ಮೂರು ಸಿನಿಮಾಗಳು ಮಾಡಿದ್ರೂ ಸಹ ನಿರೀಕ್ಷಿತ ಗೆಲುವು ಪಡೆಯಲಿಲ್ಲ ಕಿಂಗ್ ನಾಗಾರ್ಜುನ್​ರ ಪುತ್ರ ಅಖಿಲ್. ಆದ್ರೆ ಕಳೆದ ವರ್ಷ ತೆರೆಕಂಡ ಮೋಸ್ಟ್ ಎಲಿಜಿಬಲ್ ಬ್ಯಾಚಲರ್ ಸಿನಿಮಾ ಅವ್ರ ಸಿನಿಕರಿಯರ್​ಗೆ ಬಿಗ್ ಟ್ವಿಸ್ಟ್ ನೀಡಿತು. 21 ಕೋಟಿಯಲ್ಲಿ ತಯಾರಾದ ಈ ಚಿತ್ರ 50 ಕೋಟಿ ಕ್ಲಬ್ ಸೇರಿ ಆಡಿಕೊಂಡೋರ ಬಾಯಿ ಮುಚ್ಚಿಸಿತು. ಪೂಜಾ ಜೊತೆಗಿನ ಫಲ ಸಿದ್ದಿಸಿತ್ತು. ಲೆಹೆರಾಯೀ ಅಂತ ಎಲ್ರೂ ಅಖಿಲ್​ನ ಒಪ್ಪಿಕೊಂಡು, ಮೆಚ್ಚಿಕೊಂಡ್ರು.

ಇದೀಗ ಪ್ಯಾನ್ ಇಂಡಿಯಾ ಏಜೆಂಟ್ ಆಗಿ ಅಬ್ಬರಿಸೋಕೆ ಮತ್ತೊಂದು ಹೊಸ ಅವತಾರದಲ್ಲಿ ಬರ್ತಿದ್ದಾರೆ ಅಖಿಲ್ ಅಕ್ಕಿನೇನಿ. ಪಕ್ಕಾ ಆ್ಯಕ್ಷನ್ ವೆಂಚರ್ ಇದಾಗಲಿದ್ದು, ರೇಸ್ ಗುರ್ರಂ, ಕಿಕ್, ಧ್ರುವ ಸೇರಿದಂತೆ ಸಾಲು ಸಾಲು ಬ್ಲಾಕ್ ಬಸ್ಟರ್ ಹಿಟ್ಸ್ ನೀಡಿರೋ ಸುರೇಂದರ್ ರೆಡ್ಡಿ ಏಜೆಂಟ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಅಖಿಲ್​ರ ಒಂದೊಂದು ಸ್ಟಿಲ್ ಕೂಡ ಸಖತ್ ಇಂಪ್ರೆಸ್ಸೀವ್ ಆಗಿದ್ದು, ಸಿನಿಮಾಗಾಗಿ ಹಲ್ಕ್ ರೀತಿ ವರ್ಕೌಟ್ ಮಾಡಿ ಮೈಯನ್ನ ಹುರಿಗಟ್ಟಿಸಿದ್ದಾರೆ.

ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ ಕೂಡ ಪ್ರಮುಖ ಪಾತ್ರ ಪೋಷಿಸಿದ್ದು, ಇದೀಗ ಈ ಸಿನಿಮಾ ತೆಲುಗಿನ ಜೊತೆ ಇಂಡಿಯಾದ ಉಳಿದ ನಾಲ್ಕು ಮುಖ್ಯ ಭಾಷೆಗಳಲ್ಲಿ ತೆರೆಗಪ್ಪಳಿಸೋಕೆ ಸಜ್ಜಾಗ್ತಿದೆ. ಅಂದಹಾಗೆ ಈ ಸಿನಿಮಾ ರಿಲೀಸ್​ಗೂ ಮೊದಲೇ ಮೇಕಿಂಗ್ ಹಂತದಲ್ಲೇ ಇಂಡಸ್ಟ್ರಿಯಲ್ಲಿ ದೊಡ್ಡ ಬಜ್ ಕ್ರಿಯೇಟ್ ಮಾಡಿದೆ. ಮೂಲಗಳ ಪ್ರಕಾರ 70 ಕೋಟಿ ಪ್ರೀ ರಿಲೀಸ್ ಬ್ಯುಸಿನೆಸ್ ಮಾಡಿ ಎಲ್ಲರ ಹುಬ್ಬೇರಿಸಿದೆ.

ಸೆಕೆಂಡ್ ಟಯರ್ ಹೀರೋಗಳ ಸಾಲಿನಲ್ಲಿ ಅಖಿಲ್, ತಮ್ಮ ಐದನೇ ಸಿನಿಮಾದಿಂದ ಇಷ್ಟು ದೊಡ್ಡ ಹೈಪ್ ಕ್ರಿಯೇಟ್ ಮಾಡಿರೋದು ಇದೇ ಮೊದಲು. ಇದು ಅಖಿಲ್, ತಂದೆ ನಟ ನಾಗಾರ್ಜುನ್ ಹಾಗೂ ಸಹೋದರ ನಾಗಚೈತನ್ಯ ಸೇರಿದಂತೆ ಇಡೀ ಕುಟುಂಬ ಹಾಗೂ ಅಕ್ಕಿನೇನಿ ಫ್ಯಾನ್ಸ್​ಗೆ ಎಲ್ಲಿಲ್ಲದ ಖುಷಿ ಕೊಟ್ಟಿದೆ. ಆಗಸ್ಟ್ 12ಕ್ಕೆ ಸಿನಿಮಾ ತೆರೆಗಪ್ಪಳಿಸಲಿದ್ದು, ಭಾರತೀಯ ಚಿತ್ರರಂಗಕ್ಕೆ ಅಖಿಲ್ ಅನ್ನೋ ಪ್ಯಾನ್ ಇಂಡಿಯಾ ಸ್ಟಾರ್ ಇಂಟ್ರಡ್ಯೂಸ್ ಆಗ್ತಿದ್ದಾರೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES