Friday, May 17, 2024

ಹೆಬ್ಬಾಳ ಜಂಕ್ಷನ್​ನಲ್ಲಿ ಸಂಚಾರ ದಟ್ಟನೆಗೆ ಇಂದಿನಿಂದ ಹೊಸ ಕ್ರಮ

ಬೆಂಗಳೂರು : ಸರ್ವೀಸ್ ರಸ್ತೆಯಲ್ಲಿ ಬರುವ ವಾಹನಗಳಿಗೆ ಇಂದಿನಿಂದ ಹೆಬ್ಬಾಳ ಫ್ಲೈಓವರ್​ನಲ್ಲಿ ವಾಹನ ಸಂಚಾರದಲ್ಲಿ ಭಾರಿ ಬದಲಾವಣೆ ಉಂಟಾಗಿದೆ.

ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆಯ ಹೊಸ ನಿಯಮದ ಪ್ರಕಾರ ಇಂದು ಬೆಳಗ್ಗೆ 6 ಗಂಟೆಯಿಂದಲೇ  ಹೆಬ್ಬಾಳ ಜಂಕ್ಷನ್​​ನಲ್ಲಿ ಸಂಚಾರ ಬದಲಾವಣೆಗೊಂಡಿದೆ. ಯಲಹಂಕ, ಬ್ಯಾಟರಾಯನಪುರ,ಕೊಡಿಹಳ್ಳಿ ಅಮೃತಹಳ್ಳಿ ಕಡೆಯಿಂದ ಬರುವರು ಲೂಪ್ ಫ್ಲೈಓವರ್ ಬಳಿಸಿ ನಗರ ಪ್ರವೇಶಕ್ಕೆ ಅವಕಾಶವನ್ನು ನೀಡಲಾಗಿದೆ.

ಸಂಚಾರ ಬದಲಾವಣೆ ಹೀಗಿದೆ.

ಯಲಹಂಕ, ಕೊಡಿಗೇಹಳ್ಳಿ, ಜಕ್ಕೂರು ಇತ್ಯಾದಿ ಕಡೆಗಳಿಂದ ಸರ್ವಿಸ್‌ ರಸ್ತೆಯ ಮೂಲಕ ನಗರಕ್ಕೆ ಹೋಗುವ ವಾಹನಗಳು ಹೆಬ್ಬಾಳ ಫ್ಲೈಓವರ್‌ಗೆ ನೇರವಾಗಿ ಪ್ರವೇಶಿಸುವಂತಿಲ್ಲ. ಹೆಬ್ಬಾಳ ಸರ್ಕಲ್‌ನಲ್ಲಿರುವ ಲೂಪ್‌ ರ್ಯಾಂಪ್‌ ಬಳಸಿ ನಗರಕ್ಕೆ ಬರಬೇಕು.

ವಿಮಾನ ನಿಲ್ದಾಣದ ಎಲಿವೇಟೆಡ್‌ ಕಾರಿಡಾರ್‌ನಿಂದ ಬೆಂಗಳೂರು ಕಡೆಗೆ ಬರುವ ಬಸ್‌ಗಳು ಹೆಬ್ಬಾಳ ಸರ್ಕಲ್‌ನಲ್ಲಿ ಬಸ್‌ ಪ್ರಯಾಣಿಕರನ್ನು ನಿಗದಿಪಡಿಸಿದ ಬಸ್‌ ವೇನಲ್ಲಿ ಲೂಪ್‌ ರ್ಯಾಂಪ್‌ಗಿಂತ ಮುಂಚಿತವಾಗಿ ಹತ್ತಿಸಿಕೊಳ್ಳಬೇಕು.

ಏರ್‌ಪೋರ್ಟ್‌ ಎಕ್ಸ್‌ಪ್ರೆಸ್‌ ಹೆದ್ದಾರಿಯಿಂದ ನಗರಕ್ಕೆ ಚಲಿಸುವ ವಾಹನಗಳು ಮೊದಲಿನಿಂದ ಹೆಬ್ಬಾಳ ಫ್ಲೇ ಓವರ್‌ ಮೂಲಕ ನಗರ ಪ್ರವೇಶಿಸಬೇಕು.

ಏರ್‌ಪೋರ್ಟ್‌ ಎಕ್ಸ್‌ಪ್ರೆಸ್‌ ಹೆದ್ದಾರಿ ಮೂಲಕ ಕೆಂಪಾಪುರಕ್ಕೆ ಹೋಗುವವರು ವಿದ್ಯಾಶಿಲ್ಪ, ಯಲಹಂಕ ಬೈಪಾಸ್‌ ಬಳಿ ಸರ್ವಿಸ್‌ ರಸ್ತೆ ಬಳಸಬೇಕು.

ಏರ್‌ಪೋರ್ಟ್‌ ಎಕ್ಸ್‌ಪ್ರೆಸ್‌ ಹೆದ್ದಾರಿಯಿಂದ ಕೆ.ಆರ್‌.ಪುರ, ತುಮಕೂರು ಕಡೆಗೆ ಚಲಿಸುವವರು ಮೊದಲಿನಂತೆ ಸವೀರ್ಸ್‌ ರಸ್ತೆ ಮೂಲಕ ಸಾಗಬೇಕು.

RELATED ARTICLES

Related Articles

TRENDING ARTICLES