Monday, December 23, 2024

ಅಮರನಾಥ್ ಗುಹೆ ಬಳಿ ಭಾರೀ ಸ್ಫೋಟ : ಇಬ್ಬರ ಮೃತ ದೇಹ ಪತ್ತೆ

ಜಮ್ಮು ಕಾಶ್ಮೀರ : ದಕ್ಷಿಣ ಕಾಶ್ಮೀರದ ಹಿಮಾಲಯದ ತಪ್ಪಲಿನಲ್ಲಿರುವ ಅಮರನಾಥ ಪವಿತ್ರ ಗುಹೆಯ ಬೇಸ್​ ಕ್ಯಾಂಪ್​ ಬಳಿಯಲ್ಲಿ ಇಂದು ಮೇಘಸ್ಪೋಟ ಸಂಭವಿಸಿದೆ.

ಇಲ್ಲಿಯವರೆಗೆ ರಕ್ಷಣಾ ಸಿಬ್ಬಂದಿ ಇಬ್ಬರು ಪ್ರವಾಸಿಗರ ಮೃತ ದೇಹಗಳನ್ನು ಹೊರ ತೆಗೆದಿದ್ದಾರೆ ಎಂದು ತಿಳಿದು ಬಂದಿದೆ. ಅಮರನಾಥ ಗುಹೆಯ ಕೆಳಭಾಗದಲ್ಲಿ ಸಂಜೆ 5:30ರ ಸುಮಾರಿಗೆ ಮೇಘ ಸ್ಫೋಟಕ್ಕೆ ಸಾಕ್ಷಿಯಾಗಿದೆ. ಘಟನೆಯಲ್ಲಿ ಐದಕ್ಕೂ ಅಧಿಕ ಯಾತ್ರಾರ್ಥಿಗಳು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಸ್ಥಳೀಯ ಅಧಿಕಾರಿಗಳು ಯಾವುದೇ ಸ್ಪಷ್ಟ ಮಾಹಿತಿಯನ್ನು ನೀಡಿಲ್ಲ

ಎನ್​ಡಿಆರ್​ಎಫ್​, ಎಸ್​ಡಿಆರ್​ಎಫ್​ ಸೇರಿದಂತೆ ವಿವಿಧ ರಕ್ಷಣಾ ತಂಡಗಳು ಪ್ರವಾಸಿಗರ ರಕ್ಷಣಾ ಕಾರ್ಯಚರಣೆಯನ್ನು ಭರದಿಂದ ನಡೆಸುತ್ತಿವೆ ಎಂದು ಜಂಟಿ ಪೊಲೀಸ್​ ನಿಯಂತ್ರಣ ಕೊಠಡಿ ಪಹಲ್ಗಾಮ್​ನಿಂದ ಮಾಹಿತಿ ನೀಡಲಾಗಿದೆ.

ಮೇಲ್ಭಾಗದಲ್ಲಿ ಭಾರೀ ಮಳೆ ಉಂಟಾದ ಹಿನ್ನೆಲೆಯಲ್ಲಿ ಗುಹೆಯ ಮೇಲಿನಿಂದ ನೀರು ಬಂದಿದೆ. ಸಧ್ಯಕ್ಕೆ ಈ ಭಾಗದಲ್ಲಿ ಮಳೆ ನಿಂತಿದೆ. ಮೇಘ ಸ್ಪೋಟದಿಂದಾಗಿ ಅಮರನಾಥ ದೇಗುಲದ ಲಂಗರ್​ಗಳು ಹಾಗೂ ಟೆಂಟ್​ಗಳು ಕೊಚ್ಚಿ ಹೋಗಿವೆ. ಗಾಯಾಳುಗಳನ್ನು ರಕ್ಷಣೆ ಮಾಡಲು ಹೆಲಿಕಾಪ್ಟರ್ ಕೂಡ ಆಗಮಿಸಿದೆ.

 

RELATED ARTICLES

Related Articles

TRENDING ARTICLES