Friday, May 17, 2024

ಫುಡ್ ಪ್ರಿಯರಿಗೆ ಗುಡ್ ನ್ಯೂಸ್ ಕೊಡಲು ಮುಂದಾದ BBMP

ಬೆಂಗಳೂರು : ಆನ್ ಲೈನ್ ಫುಡ್ ಡೆಲಿವರಿ ಪಡೆಯೋ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದ್ದು, ಇನ್ಮುಂದೆ ಬೀದಿ ಬದಿ ವ್ಯಾಪಾರಿಗಳಿಂದಲೂ ಸ್ವಿಗ್ಗಿ, ಜೊಮ್ಯಾಟೋದಿಂದ ಆರ್ಡರ್ ಮಾಡಬಹುದು.

ನೀವು ನಿರೀಕ್ಷೆ ಮಾಡಿದಕ್ಕಿಂತ ಕಡಿಮೆ ದರದಲ್ಲಿ ಫುಡ್​ ಸಿಗುತ್ತಿದ್ದು, ಅಚ್ಚರಿ ಅನ್ಸಿದ್ರೂ ಇದು ನೂರಕ್ಕೆ ನೂರರಷ್ಟು ಸತ್ಯ ! ಫುಡ್ ಪ್ರಿಯರಿಗೆ ಗುಡ್ ನ್ಯೂಸ್ ಕೊಡಲು ಮುಂದಾದ ಬಿಬಿಎಂಪಿ. ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗೆ ಬಿಬಿಎಂಪಿ ಸಾಥ್ ನೀಡಿದೆ.

ಇನ್ನು, ಫುಡ್ ಪ್ರಿಯರಿಗೂ ಕೇಂದ್ರದ ಯೋಜನೆಗೂ ಏನು ಸಂಬಂಧ ಅಂತೀರಾ..? ಗುಣಮಟ್ಟದ ಆಹಾರ ಕಡಿಮೆ ದರದಲ್ಲಿ ಬೇಕು ಅನ್ನೋರಿಗೆ ಬೀದಿ ಬದಿ ವ್ಯಾಪಾರಿಗಳಿಂದಲೂ ಸ್ವಿಗ್ಗಿ, ಜೊಮ್ಯಾಟೋದಿಂದ ಆರ್ಡರ್ ಮಾಡಬಹುದು. ಬೀದಿ ಬದಿ ವ್ಯಾಪಾರಿಗಳಿಗೆ ಹೊಸ ಯೋಜನೆ ಜಾರಿಗೆ ತರಲು ಮುಂದಾದ ಬಿಬಿಎಂಪಿ. 3,250 ರೂ ನಂತೆ ಪ್ರತಿಯೊಬ್ಬರಿಗೆ ತರಬೇತಿ ನೀಡುತ್ತಿದ್ದಾರೆ. ಬಿಬಿಎಂಪಿಯ 8 ವಲಯದ ಬೀದಿ ಬದಿ ವ್ಯಾಪಾರಿಗಳಿಗೆ ತರಬೇತಿ ನೀಡಲಾಗುತ್ತಿದ್ದು, FSSAI ನುರಿತ ಬಾಣಸಿಗರಿಂದ ತರಬೇತಿ ನೀಡುವ ಯೋಜನೆ ಇದಾಗಿದೆ.
ಅದಲ್ಲದೇ, ಇನ್ಮುಂದೆ ಬೀದಿ ಬದಿಯ ಆಹಾರ ಅಂತ ಮೂಗು ಮುರಿಯುವಂತಿಲ್ಲ. ತರಬೇತಿ ಬಳಿಕ ಸರ್ಟಿಫಿಕೇಟ್ ನೀಡುವ ಯೋಜನೆ ಇದಾಗಿದ್ದು, ತರಬೇತಿ ಕೊಟ್ಟು ಸರ್ಟಿಫಿಕೇಟ್ ಕೊಟ್ಟು ಸಾಲವನ್ನೂ ಕೊಡುವ ಬಿಬಿಎಂಪಿ. ಸಾಲ ನೀಡಿದ ನಂತರ ವ್ಯಾಪಾರಕ್ಕೆ ನಿರ್ದಿಷ್ಟ ಜಾಗ ಗುರ್ತಿಸಿ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ.

ಏನಿದು ಯೋಜನೆ !

– ಬೀದಿ ಬದಿ ವ್ಯಾಪಾರಿಗಳಿಗೆ ತರಬೇತಿ ನೀಡುವುದು
– ಪ್ರತಿಯೊಬ್ಬರಿಗೆ 3,250 ರೂ ಕೇಂದ್ರ ಹಣ ವ್ಯಯಮಾಡುತ್ತೆ
– FSSAI ಮೂಲಕ ತರಬೇತಿ ನೀಡುವುದು
– ಒಂದು ವಾರದ ತರಬೇತಿ ನೀಡುವ ಯೋಜನೆ
– ಗುಣಮಟ್ಟದ, ರುಚಿಯಾದ ಆಹಾರ ತಯಾರು ಮಾಡುವ ಕುರಿತಂತೆ ತರಬೇತಿ
– ಈಗಾಗಲೇ ಬೇರೆ ರಾಜ್ಯದಲ್ಲಿ ತರಬೇತಿ ನೀಡಲಾಗಿದೆ
– ತರಬೇತಿ ನೀಡಿದ ವ್ಯಾಪಾರಿಗಳಿಗೆ ಪಾಲಿಕೆ ನಿರ್ದಿಷ್ಟ ಜಾಗ ಗುರ್ತಿಸುತ್ತೆ
– ಬಿಬಿಎಂಪಿ ಗುರ್ತಿಸಿದ ಜಾಗದಲ್ಲಿಯೇ ಆಹಾರ ಸಿದ್ದಪಡಿಸಬೇಕು
– ಸ್ವಿಗ್ಗಿ, ಝೋಮ್ಯಾಟೋ ಸೇರಿದಂತೆ ಆನ್ ಲೈನ್ ಫುಡ್ ಡೆಲವರಿ ಆಪ್ ಗಳ ಜತೆ ಟೈಯಪ್
– ಯಾರಾದರೂ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಆಹಾರ ಬೇಕು ಅಂದ್ರೆ ಇಲ್ಲಿಂದ ಪೂರೈಕೆ
– ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 30 ಸಾವಿರ ವ್ಯಾಪಾರಿಗಳಿಗೆ ತರಬೇತಿ ನೀಡಲಾಗುತ್ತಿದೆ. ಆದರೆ ಈಗಾಗಲೇ 2000 ವ್ಯಾಪಾರಿಗಳಿಗೆ ಪಾಲಿಕೆ ತರಬೇತಿ ನೀಡಿದ್ದಾರೆ.

RELATED ARTICLES

Related Articles

TRENDING ARTICLES