Thursday, January 23, 2025

ಎಲ್ಲೆಂದರಲ್ಲಿ ಕಸ ಹಾಕುವವರನ್ನು ಹಿಡಿದುಕೊಟ್ಟರೆ BBMPಯಿಂದ ಪುರಸ್ಕಾರ

ಬೆಂಗಳೂರು: ನಗರದಲ್ಲಿ ನಿತ್ಯವೂ ಕಸದ ತಾಣಗಳಾಗುವ ಸ್ಥಳಗಳನ್ನು ಕಸರಹಿತವನ್ನಾಗಿಸಲು ಬಿಬಿಎಂಪಿ ಹೊಸ ಯೋಜನೆ ರೂಪಿಸಿದೆ. ಇದರಲ್ಲಿ ನಾಗರಿಕರೂ ಭಾಗವಹಿಸಿದರೆ ಅವರಿಗೆ ‘ಪರಿಸರ ಹಿತೈಷಿ’ ಎಂಬ ಗೌರವವೂ ಸಿಗಲಿದೆ.

ರಸ್ತೆಗಳಲ್ಲಿ ಕಸ ಸಂಗ್ರಹವಾಗುತ್ತಿರುವ ತಾಣಗಳನ್ನು ಗುರುತಿಸಿರುವ ಬಿಬಿಎಂಪಿ, ಆ ಸ್ಥಳಗಳಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಲು ನಿರ್ಧರಿಸಿದೆ. ಇಂತಹ ತಾಣಗಳ ಸಮೀಪದ ಮನೆ ಅಥವಾ ವಾಣಿಜ್ಯ ಅಂಗಡಿಗಳಲ್ಲಿ ಅಳವಡಿಸಿ, ಅದರ ‘ಮಾನಿಟರ್‌’ ಅನ್ನು ಇರಿಸಲಿದೆ. ಕಸವನ್ನು ಯಾರು ಹಾಕುತ್ತಾರೆ ಎಂಬ ಮಾಹಿತಿಯನ್ನು ಅವರು ಬಿಬಿಎಂಪಿಗೆ ನೀಡಬೇಕು. ಅದರ ಆಧಾರದಲ್ಲಿ ದಂಡ ವಿಧಿಸುವ, ಪ್ರಕರಣ ದಾಖಲಿಸುವ ಪ್ರಕ್ರಿಯೆಯನ್ನು ಅಧಿಕಾರಿಗಳು ನಿರ್ವಹಿಸಲಿದ್ದಾರೆ.

ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಿಕೊಂಡು, ಮಾಹಿತಿ ನೀಡಿ ಕಸರಹಿತ ತಾಣವನ್ನಾಗಿಸಲು ಸಹಕರಿಸಿದ ಇಂತಹ ನಾಗರಿಕರಿಗೆ ‘ಪರಿಸರ ಹಿತೈಷಿ’ ಎಂಬ ಪ್ರಮಾಣಪತ್ರ ನೀಡಿ ಮುಖ್ಯ ಆಯುಕ್ತರು ಗೌರವಿಸಲಿದ್ದಾರೆ. ಮಾಹಿತಿ ಒದಗಿಸುವ ನಾಗರಿಕರ ಹೆಸರನ್ನು ಗೋಪ್ಯವಾಗಿರಿಸಲಾಗುತ್ತದೆ.=ದರಲ್ಲಿ 68 ತಾಣಗಳು ಶಾಶ್ವತ ತಾಣಗಳು. ಅಂದರೆ, ಈ ತಾಣಗಳಲ್ಲೇ ನಿತ್ಯವೂ ತ್ಯಾಜ್ಯ ಶೇಖರಣೆಯಾಗುತ್ತದೆ. ಕಸ ಎಸೆಯುವುದರಿಂದಾಗುವ ಆರೋಗ್ಯ ಸಮಸ್ಯೆ, ಪರಿಣಾಮಗಳನ್ನು ತಿಳಿಸಿ, ಅದನ್ನು ನಿಲ್ಲಿಸಿ ಎಂಬ ಪ್ರಚಾರವನ್ನೂ ಕೈಗೊಳ್ಳಲಿದೆ. ನಗರದಲ್ಲಿ ಎಲ್ಲೆಂದರಲ್ಲಿ ಕಸವನ್ನು ಎಸೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಬಿಬಿಎಂಪಿ ನಿರ್ಧರಿಸಿದೆ.

RELATED ARTICLES

Related Articles

TRENDING ARTICLES