Sunday, December 22, 2024

ಮಳೆಗಾಲದಲ್ಲಿ ಸೌಂದರ್ಯ ಆರೈಕೆ ಹೀಗಿರಲಿ

ಮಳೆಗಾಲ ಶುರುವಾಗಿದೆ, ನಾನಾ ಬಗೆಯ ರೋಗರುಜಿನಗಳ ಜೊತೆ ಚರ್ಮದ ಸೊಂಕು ಕೂಡ ಈ ಋತುವಿನಲ್ಲಿ ಬಾಧಿಸುವುದು ಸಾಮಾನ್ಯ. ಹಾಗಾಗಿ ಇಂತಹ ಸಮಯದಲ್ಲಿ ರಾಸಾಯನಿಕಗಳಿರುವ ಮೇಕಪ್ ಬಳಕೆಯನ್ನು ಕಡಿಮೆ ಮಾಡಿ ನೈಸರ್ಗಿಕ ವಿಧಾನವನ್ನು ನಿಮ್ಮದಾಗಿಸಿಕೊಂಡು ಸೌಂದರ್ಯವನ್ನು ವರ್ಧಿಸಬಹುದು.

ತ್ವಚೆ ಆರೈಕೆ:


ಮಳೆಗಾಲದಲ್ಲಿ ತೇವಾಂಶ ಅಧಿಕವಿರುವುದರಿಂದ ತ್ವಚೆ ಸಮಸ್ಯೆ ಹೆಚ್ಚಾಗಿಯೇ ಕಂಡು ಬರುತ್ತದೆ. ಮಳೆಗಾಲದಲ್ಲಿ ತ್ವಚೆ ಆರೈಕೆಗೆ ದುಬಾರಿ ವಾಟರ್‌ ಫ್ರೂಫ್ ಮೇಕಪ್‌ಗಳ ಅಗತ್ಯವಿಲ್ಲ, ಮನೆಯಲ್ಲಿ ದೊರೆಯುವ ಈ ವಸ್ತುಗಳೇ ಸಾಕು ತ್ವಚೆ ಸಮಸ್ಯೆ ಗುಣಪಡಿಸಲು ಅಂತಾರೆ ಈ ಆಯುರ್ವೇದ ವೈದ್ಯರು.

ಎಣ್ಣೆ ತ್ವಚೆಯವರು ಮೊಡವೆ ಸಮಸ್ಯೆ ಹೆಚ್ಚಾಗಬಹುದು. ಆಯಿಲ್‌ ಬೇಸ್ಡ್ ಬ್ಯೂಟಿ ಪ್ರಾಡೆಕ್ಟ್‌ ಬಳಸಬೇಡಿ. ಮ್ಯಾಟ್‌ ಸನ್‌ಸ್ಕ್ರೀನ್‌ ಲೋಷನ್ ಬಳಸುವುದು ಒಳ್ಳೆಯದು. ಇದು ಮುಖಕ್ಕೆ ಶೈನ್‌ ನೀಡುತ್ತದೆ. ಮಾನ್ಸೂನ್ ಮೇಕಪ್‌ ಕಿಟ್‌ ಬಳಸುವುದು ಉತ್ತಮ.

ಸಾಕಷ್ಟು ನೀರು ಕುಡಿಯಿರಿ:


ಈ ಋತುವಿನಲ್ಲಿ ಒಣ ಚರ್ಮವು ಸಾಮಾನ್ಯವಾಗಿರುವುದರಿಂದ ಮಾನ್ಸೂನ್ ಸಮಯದಲ್ಲಿ ನಿಮ್ಮ ದೇಹವನ್ನು ಹೈಡ್ರೀಕರಿಸುವುದು ಬಹಳ ಮುಖ್ಯ. ಹೀಗಾಗಿ, ನಿಮ್ಮ ಚರ್ಮವನ್ನು ಹೈಡ್ರೀಕರಿಸುವುದಕ್ಕಾಗಿ ಮತ್ತು ವಿಷವನ್ನು ಹೊರಹಾಕಲು ಬಹಳಷ್ಟು ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಹಣ್ಣುಗಳನ್ನು ಸೇವಿಸುವುದನ್ನು ಹೊರತುಪಡಿಸಿ ಕನಿಷ್ಠ 7-8 ಗ್ಲಾಸ್ಗಳನ್ನು ಕುಡಿಯಿರಿ. ಅವು ನಿಮ್ಮ ದೇಹವನ್ನು ರೋಗಗಳಿಗೆ ನಿರೋಧಕವಾಗಿರಿಸುವುದರ ಜೊತೆಗೆ ನಿಮಗೆ ಹೊಳಪನ್ನು ನೀಡುತ್ತದೆ.

ಮಲಗುವ ಮುನ್ನ ಮೇಕಪ್ ತೆಗೆಯಿರಿ:


ಮಲಗುವ ಮುನ್ನ ಮೇಕಪ್ ತೆಗೆದುಹಾಕುವುದು ಅತ್ಯಂತ ಅವಶ್ಯಕವಾಗಿದೆ ಏಕೆಂದರೆ ಇದು ರಾತ್ರಿಯ ಸಮಯದಲ್ಲಿ ಚರ್ಮಕ್ಕೆ ವ್ಯಾಪಕ ಹಾನಿಯನ್ನುಂಟು ಮಾಡುತ್ತದೆ. ನೀವು ವಿಶ್ರಾಂತಿ ಪಡೆಯುವಾಗ ಚರ್ಮವು ಪುನಃಸ್ಥಾಪನೆಯಾಗುತ್ತದೆ, ಆ ಸಮಯದಲ್ಲಿ ನೀವು ಸೌಂದರ್ಯವರ್ಧಕಗಳನ್ನು ಬಿಟ್ಟಾಗ, ಈ ಪ್ರಕ್ರಿಯೆಗೆ ಅಡ್ಡಿಯಾಗುವುದು. ಆಗ ಚರ್ಮವು ಉಸಿರಾಡುವುದನ್ನು ನಿಲ್ಲಿಸುವುದು. ಇದರಿಂದ ಆಯಾಸದ ಚಿಹ್ನೆಗಳು ಶೀಘ್ರದಲ್ಲೇ ಕಾಣಿಸಿಕೊಳ್ಳುತ್ತವೆ ಮತ್ತು ಮೊಡವೆಗಳಿಗೆ ಕಾರಣವಾಗಬಹುದು.

ಮಳೆಗಾಲದಲ್ಲಿ ಕೂದಲಿನ ಆರೈಕೆ:


ಕೂದಲು ಸರಿಯಾಗಿ ಒಣಗಿದ್ದರೆ ಕೂದಲು ಉದುರುವ ಸಮಸ್ಯೆ ಉಂಟಾಗುವುದು. ಮಳೆಯಲ್ಲಿ ಓಡಾಡುವಾಗ ಕೂದಲು ಒದ್ದೆಯಾಗದಂತೆ ನೋಡಿಕೊಳ್ಳಿ, ಒಂದು ವೇಳೆ ಒದ್ದೆಯಾದರೆ ಚೆನ್ನಾಗಿ ಒರೆಸಿ, ಒಣಗಿಸಿ. ವಾರದಲ್ಲಿ 2-3 ಬಾರಿ ತಲೆಗೆ ಕಂಡೀಷನರ್‌ ಹಾಕಿ ತೊಳೆಯಬೇಕು. ಹೀಗೆ ಮಾಡುವುದರಿಂದ ಕೂದಲು ಮೃದುವಾಗಿ ಇರುವುದು.

ಲೀನಾಶ್ರೀ

RELATED ARTICLES

Related Articles

TRENDING ARTICLES