Tuesday, November 26, 2024

ಮೋದಿಯ 8 ವರ್ಷಗಳ ಆಡಳಿತ ಜಾತಕ ಬಿಚ್ಚಿಟ್ಟ ಸಿದ್ದರಾಮಯ್ಯ

ಬೆಂಗಳೂರು: ಚುನಾವಣೆ ಹತ್ತಿರ ಬರ್ತಿದ್ದ ಹಾಗೆ ವಿರೋಧ ಪಕ್ಷ ಕಾಂಗ್ರೆಸ್ ಫುಲ್​​ ಆಕ್ಟೀವ್ ಆಗಿದೆ. ರಾಜ್ಯ ಮತ್ತು ಕೇಂದ್ರ ಬಿಜೆಪಿ ಸರ್ಕಾರದ ಯಾವುದೇ ವೈಫಲ್ಯ ಕಾಣಿಸಿದ್ರೂ ಕೂಡ ಅದರ ವಿರುದ್ಧ ಧ್ವನಿ ಎತ್ತುತ್ತಿದೆ. ಮೋದಿ ಎಂಟು ವರ್ಷದ ಆಡಳಿತ ವೈಖರಿಯ ಜಾತಕ ಬಿಚ್ಚಿಟ್ಟು ಸಿದ್ದರಾಮಯ್ಯ ಗುಡುಗಿದ್ದಾರೆ.

ಚುನಾವಣೆಗಳು ಹತ್ತಿರವಾಗುತ್ತಿದ್ದಂತೆಯೇ ಎಲ್ಲಾ ರಾಜಕೀಯ ಪಕ್ಷಗಳು ಆಕ್ಟೀವ್ ಆಗಿವೆ. ಅದರಲ್ಲೂ ವಿರೋಧ ಪಕ್ಷ ಕಾಂಗ್ರೆಸ್, ಆಡಳಿತ ಪಕ್ಷದ ಪ್ರತಿಯೊಂದು ವೈಫಲ್ಯದ ವಿರುದ್ಧ ಧ್ವನಿ ಎತ್ತುವ ಕೆಲಸ ಮಾಡುತ್ತಿದೆ. ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ‌ಕುಟುಕಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿದ್ದರಾಮಯ್ಯ ಅವರು, 8 ವರ್ಷಗಳ ಆಡಳಿತದ ಜಾತಕವನ್ನು ಬಿಚ್ಚಿಟ್ಟರು. ಮೋದಿ ಬಂದ ಮೇಲೆ ಬಡವರ ಬದಕು ದುಸ್ತರವಾಗಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ಕಂಗಾಲಾಗಿದ್ದಾರೆ. ಮೋದಿ‌ ಕೇವಲ ಭರವಸೆ ಕೊಟ್ರೆ ಹೊರತು, ಈಡೇರಿಸುವ ಕೆಲಸ ಎಂದಿಗೂ ಮಾಡಿಲ್ಲ ಎಂದು ಕಿಡಿಕಾರಿದ್ರು. ನರೇಂದ್ರ ಮೋದಿಯವರ 8 ವರ್ಷಗಳ ವೈಫಲ್ಯದ ಕುರಿತು ಕಿರುಹೊತ್ತಿಗೆ ಬಿಡುಗಡೆ ಮಾಡಿ ವಾಗ್ದಾಳಿ ನಡೆಸಿದ್ರು.

ಮೋದಿ ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ದೇಶದ ಜನರಿಗೆ ಹಲವು ಭರವಸೆಯನ್ನು ನೀಡಿದ್ರು. ಆದ್ರೆ ಭರವಸೆ ಈಡೇರಿಸುವ ಬದಲಾಗಿ, ಬೆಲೆ ಏರಿಕೆಯ ಸಂಕಷ್ಟದಲ್ಲಿ ಜನರು ಬದುಕುವಂತೆ ಮಾಡಿದ್ದಾರೆ. ಆರ್ಥಿಕ ನಿರ್ವಹಣೆಯಲ್ಲೂ ಮೋದಿ ವಿಫಲವಾಗಿದ್ದು, ರಾಜ್ಯದಿಂದ ಅಧಿಕ ತೆರಿಗೆ ಹಣ ಪಡೆದ್ರು ಕೂಡ ನಮ್ಮ ಪಾಲು ಸರಿಯಾಗಿ ಕೊಡುತ್ತಿಲ್ಲ ಅಂತ ವಾಗ್ದಾಳಿ ನಡೆಸಿದ್ರು.

ಮೋದಿ ಆಡಳಿತದ ವಿರುದ್ಧ ಸದಾ ಧ್ವನಿ ಎತ್ತುವ ಸಿದ್ದರಾಮಯ್ಯ ಇವತ್ತು ಕೂಡ ವಾಗ್ದಾಳಿ ಮುಂದುವರೆಸಿದ್ರು. ಮೋದಿ ಕೆಟ್ಟ ಆರ್ಥಿಕ ‌ನೀತಿಯಿಂದಾಗಿ ದೇಶ ಸಾಲದ ಸುಳಿಗೆ ಸಿಲುಕುತ್ತಿದೆ. ಹಾಗಾಗಿ ಬಿಜೆಪಿ ಸರ್ಕಾರಗಳ‌ ವೈಪಲ್ಯಗಳ ಬಗ್ಗೆ ಜನರಿಗೆ ಮುಟ್ಟಿಸುವ ಪ್ರಯತ್ನ ಮಾಡಲು ಕಾಂಗ್ರೆಸ್ ತಯಾರಿ ನಡೆಸಿದೆ. ಈ ಮೂಲಕ ಮುಂದಿನ ಚುನಾವಣೆಗೆ ಬಿಜೆಪಿ ಕಟ್ಟಿ ಹಾಕುವ ಸಾಹಸಕ್ಕೆ ‘ಕೈ’ ಹಾಕಿದೆ.

ಬಸವರಾಜ್ ಚರಂತಿಮಠ್ ಪೊಲಿಟಿಕಲ್ ಬ್ಯೂರೊ ಪವರ್ ಟಿವಿ ಬೆಂಗಳೂರು.

RELATED ARTICLES

Related Articles

TRENDING ARTICLES