Thursday, December 5, 2024

ಮದುವೆ ಬಗ್ಗೆ ಮನಬಿಚ್ಚಿ ಮಾತಾಡಿದ ಬಿಗ್​ ಬಾಸ್​ ಸ್ಪರ್ಧಿ ಧರ್ಮ ಕೀರ್ತಿರಾಜ್​

ಕನ್ನಡ ಚಿತ್ರರಂಗದ ಹಿರಿಯ ನಟ ಕೀರ್ತಿರಾಜ್ ಅವರ ಪುತ್ರ ಧರ್ಮ ಕೀರ್ತಿರಾಜ್ ಈಗಾಗಲೇ ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ದರ್ಶನ್ ನಟಿಸಿದ ‘ನವಗ್ರಹ’ ಸಿನಿಮಾದ ಮೂಲಕ ಧರ್ಮ ಕೀರ್ತಿರಾಜ್ ಸ್ಯಾಂಡಲ್‌ವುಡ್‌ನಲ್ಲಿ ಚಾಕೊಲೇಟ್ ಬಾಯ್ ಅಂತಲೇ ಗುರುತಿಸಿಕೊಂಡಿದ್ದಾರೆ. ಈಗ ಬಿಗ್‌ಬಾಸ್ ಮೂಲಕ ಮತ್ತೆ ಸಿನಿಪ್ರಿಯರಿಗೆ ಹತ್ತಿರ ಆಗಿದ್ದಾರೆ.

ಬಿಗ್​ ಬಾಸ್ ಮನೆಯಲ್ಲಿ ತುಂಬಾ ಸೌಮ್ಯ ಸ್ವಭಾವದ ಹುಡುಗ ಧರ್ಮ ಕೀರ್ತಿರಾಜ್​. ಸದ್ಯ ಈ ವಾರ ಅವರು ಎಲಿಮೆನೇಟ್ ಆಗಿ ಈ ಬಾರಿ ಮನೆಯಿಂದ ಹೊರ ಬಂದಿದ್ದಾರೆ. ಮನೆಯೊಳಗೆ ಇದ್ದಾಗ ಸ್ಪರ್ಧಿಗಳಾಗಿದ್ದ ಅನುಷಾ ರೈ ಹಾಗೂ ಐಶ್ವರ್ಯಾ ಸಿಂಧೋಗಿ ಅವರ ಜೊತೆ ಇವರ ಹೆಸರು ತಳುಕು ಹಾಕಿಕೊಂಡಿದ್ದೇ ಹೆಚ್ಚು. ಆದರೆ, ಧರ್ಮ ಕೀರ್ತಿರಾಜ್ ಈ ಹಿಂದೆನೇ ಮದುವೆ ಫಿಕ್ಸ್ ಆಗಿತ್ತು. ಆದರೆ, ಅದು ಮುರಿದು ಬಿದ್ದಿತ್ತು. ಬಿಗ್ ಬಾಸ್‌ನಿಂದ ಹೊರ ಬಂದ ಬಳಿಕ ಆ ಸಂಗತಿಯನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.

ಧರ್ಮ ಕೀರ್ತಿರಾಜ್ ಇತ್ತೀಚೆಗೆ ಖಾಸಗಿ ಚಾನಲ್​ನವೊಂದಕ್ಕೆ ನೀಡಿದ ಸಂದರ್ಶನದ ವೇಳೆ ತಮ್ಮ ಮದುವೆ ಈ ಹಿಂದೇನೆ ಆಗಬೇಕಿತ್ತು ಎಂದು ಹೇಳಿಕೊಂಡಿದ್ದಾರೆ. “ಎರಡು ಮೂರು ವರ್ಷಗಳ ಹಿಂದೇನೆ ನನಗೆ ಮದುವೆ ಆಗಬೇಕಿತ್ತು. ಅದಕ್ಕೆ ಬೇಕಿರುವ ಎಲ್ಲಾ ಸಿದ್ಧತೆಗಳು ನಡೆದಿದ್ದವು. ಮದುವೆ ತುಂಬಾನೇ ಹತ್ತಿರ ಬಂದು ಕೆಲವು ಕಾರಣಗಳಿಂದಾಗಿ ಅದು ನಡೆಯಲಿಲ್ಲ. ಕೊನೆ ಕ್ಷಣದಲ್ಲಿ ಮದುವೆ ನಡೆಯಲಿಲ್ಲ” ಎಂದು ಧರ್ಮ ಕೀರ್ತಿರಾಜ್ ಹೇಳಿಕೊಂಡಿದ್ದಾರೆ.

ಇದೇ ವೇಳೆ ಅನುಷಾ ರೈ ಬಗ್ಗೆ ಮಾತಾಡಿದ ಧರ್ಮ ಅವರು, ಅನುಷಾ ರೈ ಜೊತೆಗೆ ಹೆಚ್ಚು ಸಿನಿಮಾ ಮಾಡಿದ್ದರಿಂದ ಗೆಳೆತನ ಬೆಳೆದಿದೆ. ಪ್ರೀತಿ – ಪ್ರೇಮ ಅಂತೇನು ಇಲ್ಲ. ಎಲ್ಲರೂ ಮದುವೆ ಆಗಬೇಕು. ನಮಗಾಗಿ ಒಂದು ಹೆಗಲು ಅಂತ ಬೇಕು. ಮುಂದೆ ಮದುವೆ ಆಗುತ್ತೇನೆ. ಸದ್ಯಕ್ಕೆ ಮದುವೆ ಆಗುವ ಪ್ಲ್ಯಾನ್ ಏನೂ ಇಲ್ಲ. ಸಿನಿಮಾಗಳ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES