Monday, December 23, 2024

ಟಗರು ಮಾಸ್ತಿ ಲೇಖನಿಯಲ್ಲಿ ಶಿವಣ್ಣ ಮಾಸ್ ಡೈಲಾಗ್ಸ್

ವಿಜಯ್ ಬೀಸ್ಟ್ ಆದ್ಮೇಲೆ ಈಗೇನಿದ್ರೂ ಶಿವಣ್ಣನ ಘೋಸ್ಟ್​ದೇ ಸದ್ದು. ಯೆಸ್.. ಸಿನಿಮಾ ಅನೌನ್ಸ್ ಮಾಡಿದ್ದೇ ತಡ, ಫ್ಯಾನ್ ಮೇಡ್ ಪೋಸ್ಟರ್​ಗಳ ಅಬ್ಬರ, ಆಡಂಬರ ಶುರುವಾಗಿದೆ. ಬೀರ್​ಬಲ್ ಡೈರೆಕ್ಟರ್ ಶ್ರೀನಿ ಚಿತ್ರದ ಟೆಕ್ನಿಷಿಯನ್ಸ್​​ನ ರಿವೀಲ್ ಮಾಡ್ತಾ ಹೋಗ್ತಿದ್ದಾರೆ. ಇದೆಲ್ಲಾ ಒಂದ್ಕಡೆ ಆದ್ರೆ, ಶಿವಣ್ಣ ಜೊತೆ ಹ್ಯಾಟ್ರಿಕ್ ಹಿಟ್​ನ ನಿರೀಕ್ಷೆಯಲ್ಲಿದ್ದಾರೆ ರೈಟರ್ ಮಾಸ್ತಿ. ಯೆಸ್ ಟಗರು ನಂತ್ರ ಮಾಸ್ತಿ ಮಾಸ್ & ಕಲ್ಟ್ ಡೈಲಾಗ್ಸ್ ಹೊಡೆಯಲಿದ್ದಾರೆ ಶಿವಣ್ಣ.

ಅಂದು ವಿಜಯ್ ಬೀಸ್ಟ್.. ಇಂದು ಶಿವಣ್ಣನ ಘೋಸ್ಟ್..!

ಟೋಪಿವಾಲ ಶ್ರೀನಿ ಕಲ್ಪನೆಯ ಹೈ ವೋಲ್ಟೇಜ್ ವೆಂಚರ್

ಟಗರು ಮಾಸ್ತಿ ಲೇಖನಿಯಲ್ಲಿ ಶಿವಣ್ಣ ಮಾಸ್ ಡೈಲಾಗ್ಸ್

ಶಿವಣ್ಣ ಜೊತೆ ಹ್ಯಾಟ್ರಿಕ್ ಹಿಟ್​ನ ನಿರೀಕ್ಷೆಯಲ್ಲಿ ಮಾಸ್ತಿ..!

ಸ್ಯಾಂಡಲ್​ವುಡ್​ನ ಎನರ್ಜಿ ಹೌಸ್, ಸನ್ ಆಫ್ ಬಂಗಾರದ ಮನುಷ್ಯ, ಡಾ ಶಿವರಾಜ್​ಕುಮಾರ್ ಸಿನಿಮಾಗಳು ಅಂದ್ರೆ ಫ್ಯಾನ್ಸ್​ಗಷ್ಟೇ ಅಲ್ಲ, ಎಲ್ಲಾ ಸ್ಟಾರ್ ಫ್ಯಾನ್ಸ್​ಗೂ ಅಚ್ಚುಮೆಚ್ಚು. ಸಿನಿರಸಿಕರ ಜೊತೆ ಎಲ್ಲರೂ ಹಬ್ಬದಂತೆ ಅವುಗಳನ್ನ ಸೆಲೆಬ್ರೇಟ್ ಮಾಡ್ತಾರೆ. ವೇದ ಸಿನಿಮಾದಿಂದ 125 ಸಿನಿಮಾಗಳನ್ನ ಪೂರೈಸುತ್ತಿರೋ ಸ್ಯಾಂಡಲ್​ವುಡ್ ಲೀಡರ್ ಶಿವಣ್ಣ ಇದೀಗ ಘೋಸ್ಟ್ ಅವತಾರ ತಾಳೋದು ಪಕ್ಕಾ ಆಗಿದೆ.

ದಳಪತಿ ವಿಜಯ್​ರ ಬೀಸ್ಟ್ ಸೌಂಡ್ ಮಾಡಿದಂತೆ ಶಿವಣ್ಣನ ಘೋಸ್ಟ್ ಇನ್ನೂ ಸೆಟ್ಟೇರೋಕೂ ಮೊದಲೇ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ಅಂದಹಾಗೆ ಇದೊಂದು ಹೈ ವೋಲ್ಟೇಜ್ ಮಾಸ್ ವೆಂಚರ್. ಆ್ಯಕ್ಷನ್ ಪ್ರಿಯರಿಗೆ ಮಸ್ತ್ ಕಿಕ್ ಕೊಡಲಿರೋ ಘೋಸ್ಟ್ ಸದ್ಯ ಪ್ರೀ ಪ್ರೊಡಕ್ಷನ್ ಕಾರ್ಯಗಳನ್ನು ಆರಂಭಿಸಿದೆ. ಅದ್ರಲ್ಲೂ ಇದು ಮಾಸ್ತಿ ರೈಟಿಂಗ್​ನಿಂದ ಮತ್ತೆ ಮ್ಯಾಜಿಕ್ ಮಾಡೋ ಸೂಚನೆ ನೀಡಿದೆ.

ಕಡ್ಡಿಪುಡಿ, ಟಗರು ಸಿನಿಮಾಗಳ ಬಳಿಕ ಶಿವಣ್ಣ- ಮಾಸ್ತಿ ಕಾಂಬೋನ ಮೂರನೇ ಸಿನಿಮಾ ಇದು. ಹಾಗಾಗಿ ಈ ಸಿನಿಮಾದ ಮೇಲೆ ನಿರೀಕ್ಷೆಗಳು ಸಹಜವಾಗಿಯೇ ದೊಡ್ಡ ಮಟ್ಟಕ್ಕಿವೆ. ಕಡ್ಡಿಪುಡಿ ಹಾಗೂ ಟಗರು ಎರಡೂ ಚಿತ್ರ ಕಲ್ಟ್ ಮೂವಿಗಳಾಗಿದ್ದವು. ಅವುಗಳ ಕಥೆ, ಪಾತ್ರಗಳು, ಶಿವಣ್ಣನ ರೋಲ್, ಅಲ್ಲಿನ ಮಾಸ್ ಡೈಲಾಗ್ಸ್ ನೋಡುಗರಿಗೆ ಹೊಸ ಫೀಲ್ ಕೊಟ್ಟಿದ್ದವು.

ಕಡ್ಡಿಪುಡಿ ಸಿನಿಮಾ ಆದ ಬಹಳ ದಿನಗಳ ನಂತ್ರ ಮಾಸ್ತಿ ಅವ್ರು ಟಗರು ಚಿತ್ರದ ಮುಖೇನ ಶಿವಣ್ಣ ಜೊತೆ ಕೆಲಸ ಮಾಡಿದ್ರು. ಮಾಸ್ತಿಯ ಬರಹಕ್ಕೆ ಫಿದಾ ಆಗಿರೋ ಶಿವಣ್ಣ ಇದೀಗ ಘೋಸ್ಟ್​ಗೂ ಇವ್ರ ಬಳಿಯೇ ಬರಿಸೋಕೆ ಹೇಳಿದ್ದಾರೆ. ಹಾಗಾಗಿಯೇ ಹತ್ತಾರು ಸಿನಿಮಾಗಳಲ್ಲಿ ಬ್ಯುಸಿ ಇದ್ರೂ ಸಹ, ಮಾಸ್ತಿಯಿಂದಲೇ ಘೋಸ್ಟ್  ಚಿತ್ರದ ಸಂಭಾಷಣೆ ಬರಿಸೋಕೆ ಮುಂದಾಗಿದ್ದಾರೆ ನಿರ್ದೇಶಕ ಶ್ರೀನಿ.

ಟಗರು, ಸಲಗ ಸೇರಿದಂತೆ ಮಾಸ್ತಿ ಬರೆದ ಸಿನಿಮಾಗಳೆಲ್ಲಾ ಬಾಕ್ಸ್ ಅಫೀಸ್ ಚಿಂದಿ ಉಡಾಯಿಸ್ತಿರೋದು ಕೂಡ ಇದಕ್ಕೆ ಮುಖ್ಯ ಕಾರಣ ಆಗಿದೆ. ಇನ್ನು ಶ್ರೀನಿ ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್. ಬರಹಗಾರನಾಗಿ, ನಿರ್ದೇಶಕನಾಗಿ ಇದೀಗ ನಟ, ನಿರ್ಮಾಪಕನಾಗಿಯೂ ಸದ್ದು ಮಾಡಿದವ್ರು. ಉಪ್ಪಿಯ ಟೋಪಿವಾಲ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ ಬಳಿಕ ಶ್ರೀನಿವಾಸ ಕಲ್ಯಾಣ, ಬೀರ್​ಬಲ್, ಓಲ್ಡ್ ಮಾಂಕ್ ಹೀಗೆ ಸಾಕಷ್ಟು ಹಿಟ್ ಸಿನಿಮಾಗಳನ್ನ ನೀಡಿದ್ರು.

ಇದೀಗ ಪ್ರೀ ಪ್ರೊಡಕ್ಷನ್ ಹಂತದಲ್ಲಿರೋ ಘೋಸ್ಟ್ ಸಿನಿಮಾಗೆ ಸಂಬಂಧಿಸಿದಂತೆ ಟೆಕ್ನಿಷಿಯನ್ಸ್​ನ ರಿವೀಲ್ ಮಾಡ್ತಿದ್ದಾರೆ ಶ್ರೀನಿ. ಅರ್ಜುನ್ ಜನ್ಯಾ ಸಂಗೀತ, ಮಹೇನ್ ಸಿಂಹ ಸಿನಿಮಾಟೋಗ್ರಫಿ ಇರಲಿದ್ದು, ಇವರಿಬ್ಬರೂ ಆನ್​ಬೋರ್ಡ್​ನಲ್ಲಿದ್ದು ಕಾರ್ಯಗಳು ಶುಭಾರಂಭಿಸಿದ್ದಾರೆ. ಇನ್ನು ಕಥೆ ಜೊತೆ ಡೈಲಾಗ್ಸ್ ಕೂಡ ಬರೆಯೋಕೆ ಮಾಸ್ತಿ ಮಾಸ್ಟರ್​ಪ್ಲಾನ್ ಮಾಡ್ತಿದ್ದು, ಶಿಳ್ಳೆ ಚಪ್ಪಾಳೆ ಗಿಟ್ಟಿಸೋ ಮಜಭೂತಾದ ಮಸ್ತ್ ಡೈಲಾಗ್ಸ್ ಇಲ್ಲಿ ಸದ್ದು ಮಾಡಲಿವೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ 

RELATED ARTICLES

Related Articles

TRENDING ARTICLES