Wednesday, January 22, 2025

ರಾಕಿಭಾಯ್​​​ ಹಾದಿಯಲ್ಲಿ ತಮಿಳು ನಟ ವಿಶಾಲ್​ ದಿಟ್ಟ ಹೆಜ್ಜೆ

ತಮಿಳು ನಟ ವಿಶಾಲ್​​ ಅವ್ರ ಬಹುನಿರೀಕ್ಷಿತ ಸಿನಿಮಾ ಎನಿಮಿಯನ್ನು ಕಣ್ತುಂಬಿಕೊಳ್ಳಲು ಸಿನಿಪ್ರಿಯರು ಕಾಯ್ತಾ ಇರೋವಾಗ, ಪ್ಯಾನ್​ ಇಂಡಿಯಾ ಚಿತ್ರದ ಟೀಸರ್​ ರಿಲೀಸ್​ ಆಗಿ ಸರ್ಪ್ರೈಸ್​ ಕೊಟ್ಟಿದೆ. ಪಕ್ಕಾ ಆ್ಯಕ್ಷನ್​ ಥ್ರಿಲ್ಲರ್​ ಎನಿಮಿ ಸಿನಿಮಾ ನೋಡೋ ತವಕದಲ್ಲಿದ್ದ ಫ್ಯಾನ್ಸ್​​ ಫುಲ್​​ ಥ್ರಿಲ್​ ಆಗಿದ್ದಾರೆ. ರಾಕಿಭಾಯ್​​ ಗೆಳೆಯ ವಿಶಾಲ್ ಕೂಡ ​​ಯಶ್​​ ಹಾದಿಯಲ್ಲೇ ಸಾಗ್ತಿದ್ದಾರೆ.

ಲಾಠಿ ಹಿಡಿದ ಯಶ್ ಗೆಳೆಯ.. ಪ್ಯಾನ್ ಇಂಡಿಯಾ ಸದ್ದು

ನಮ್ಮ ರಾಕಿಭಾಯ್​​​ ಹಾದಿಯಲ್ಲಿ ನಟ ವಿಶಾಲ್​ ದಿಟ್ಟ ಹೆಜ್ಜೆ

ಲಾಠಿ ಚಾರ್ಜ್​​ಗೆ ಮಾಸ್ಟರ್​ಪೀಸ್​​​ ಯಶ್​​ ಸ್ಪೂರ್ತಿ

ಐದು ಭಾಷೆಗಳಲ್ಲಿ ಆ್ಯಕ್ಷನ್​​ ಪ್ಯಾಕ್ಡ್​​ ಮಾಸ್​ ಮಸಾಲ

ಕೆಜಿಎಫ್​​ ಸಿನಿಮಾದ ನಂತ್ರ ಸಾಲು ಸಾಲು ಸಿನಿಮಾಗಳು ಪ್ಯಾನ್​ ಇಂಡಿಯಾ ಲೆವೆಲ್​​​​ನಲ್ಲಿ ಅಬ್ಬರಿಸ್ತಾ ಇವೆ. ಪ್ರತಿ ಸಿನಿಮಾಗಳು ಕೂಡ ಕೆಜಿಎಫ್​ ಕರಿನೆರಳಿನಲ್ಲಿ ಮಂಕಾಗದೇ ಮತ್ತೊಮ್ಮೆ ಪುಟಿದು ಬಿಗ್​ ಬಜೆಟ್​ ಸಿನಿಮಾಗಳ ಮೂಲಕ ಭಾರತೀಯ ಚಿತ್ರರಂಗವನ್ನು ನೆಕ್ಸ್ಟ್​​ ಲೆವೆಲ್​​ಗೆ ತೆಗೆದುಕೊಂಡು ಹೋಗ್ತಿವೆ. ಇದೀಗ ಈ ಸಾಲಿನಲ್ಲಿ ಕನ್ನಡ ನೆಲದ ಕುಡಿ, ಮನೆಮಗ, ರಾಕಿಭಾಯ್​​ ಗೆಳೆಯ, ತಮಿಳಿನ ಸೂಪರ್​ ಸ್ಟಾರ್​ ವಿಶಾಲ್​ ಕೂಡ ಸೇರಿದ್ದಾರೆ.

ಕೋಲಾರದ ಜಿಕೆ ಗ್ರಾನೈಟ್ಸ್​ ಉದ್ಯಮಿ, ಜಿಕೆ ರೆಡ್ಡಿ ಫ್ಯಾಮಿಲಿಯ ಸ್ಟಾರ್​ ನಟ ವಿಶಾಲ್​​ ಬಗ್ಗೆ ಇಂಟ್ರಡಕ್ಷನ್​ ಕೊಡಬೇಕಾಗಿಲ್ಲ. ಇವರ ಸೂಪರ್​ ಹಿಟ್​ ಸಿನಿಮಾಗಳೆ ಇವರ ಸ್ಟಾರ್​ಡಮ್​ಗೆ ಹಿಡಿದ ಕೈಗನ್ನಡಿ. ಕೇವಲ ತಮಿಳು ಮಾತ್ರವಲ್ಲದೆ ತೆಲುಗು ಭಾಷೆಯಲ್ಲೂ ಕೂಡ ಜನಪ್ರಿಯರಾಗಿರುವ ವಿಶಾಲ್​ ಕೇವಲ ನಟನೆಯಲ್ಲಿ ಮಾತ್ರವಲ್ಲದೇ ಸಿನಿಮಾ ನಿರ್ಮಾಪಕರಾಗಿಯೂ ಕೂಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಇದೀಗ ಮೊಟ್ಟ ಮೊದಲ ಬಾರಿಗೆ ಪ್ಯಾನ್​​ ಇಂಡಿಯಾ ಸಿನಿಮಾಗೆ ಕೈ ಹಾಕಿದ್ದಾರೆ.

ಆಳೆತ್ತರದ ಮೋಸ್ಟ್​ ಹ್ಯಾಂಡ್ಸಮ್​ ನಟ ವಿಶಾಲ್​ ರಾಕಿಭಾಯ್​ ಯಶ್​ಗೆ ಆತ್ಮೀಯ ಗೆಳೆಯ ಕೂಡ ಹೌದು. ಇವರಿಬ್ರ ಒಡನಾಟ, ಸ್ನೇಹದ ಬಗ್ಗೆ ಹೆಚ್ಚು ಹೇಳಬೇಕಾಗಿಲ್ಲ. ಇದೀಗ ಮೊದಲ ಬಾರಿಗೆ ವಿಶಾಲ್​ ಪ್ಯಾನ್​ ಇಂಡಿಯಾ ಚಿತ್ರದಲ್ಲಿ ಆ್ಯಕ್ಟ್​ ಮಾಡೋಕೆ ಯಶ್​ ಅವರೆ ಕಾರಣ ಅನ್ನೋ ಟಾಕ್​ ಓಡಾಡ್ತಿದೆ. ಯಶ್​ ಮ್ಯಾನರಿಸಂ, ಅವರ ಸಾಧನೆಯನ್ನು ಬಹುವಾಗಿ ಮೆಚ್ಚಿಕೊಳ್ಳೋ ವಿಶಾಲ್​ ರಾಕಿಭಾಯ್​​ ಅವರ ಸ್ಪೂರ್ತಿಯಿಂದಲೇ ಈ ಸಿನಿಮಾಗೆ ಒಪ್ಪಿಕೊಂಡಿದ್ದಾರೆ ಎನ್ನಲಾಗ್ತಿದೆ. ಜೊತೆಗೆ ಸಿನಿಮಾಗೆ ವಿಶಾಲ್​ ಫೋಟೋ ಶೂಟ್​ ಮಾಡಿಸಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ.

ಸದ್ಯ ಲಾಠಿ ​​ ಚಿತ್ರದ ಟೀಸರ್​ ರಿಲೀಸ್​ ಆಗಿದ್ದು ಸಖತ್​ ಇಂಪ್ರೆಸ್ಸಿವ್​ ಆಗಿದೆ. ಕನ್ನಡ ಸೇರಿದಂತೆ ಒಟ್ಟು ಐದು ಭಾಷೆಗಳಲ್ಲಿ ಈ ಸಿನಿಮಾ ತಯಾರಾಗ್ತಿದೆ. ರಾಣಾ ಪ್ರೊಡಕ್ಷನ್​ ಅಡಿಯಲ್ಲಿ ಈ ಸಿನಿಮಾ ನಿರ್ಮಾಣ ಆಗ್ತಿದ್ದು, ಬಹುಕೋಟಿ ವೆಚ್ಚದಲ್ಲಿ ಅದ್ಧೂರಿಯಾಗಿ ಮೂಡಿಬರೋ ಪ್ಲಾನ್​ ಮಾಡಿಕೊಂಡಿದೆ. ಎ ವಿನೋಥ್​​ಕುಮಾರ್​​ ನಿರ್ದೇಶನದಲ್ಲಿ ರಮಣ ಹಾಗೂ ನಂದಾ ಸಾರಥ್ಯದಲ್ಲಿ ತೆರೆಗೆ ಬರಲಿದೆ.

ಲಾಠಿ ಚಿತ್ರದ ಟೀಸರ್​ನಲ್ಲಿ ಮನೆಯ ಮಹಡಿ ಮೇಲೆ ನೇತು ಹಾಕಿರುವ ಶರ್ಟ್​​ಗಳನ್ನು  ತೋರಿಸಿದ್ದಾರೆ. ಶರ್ಟಿನ ಬಟನ್​​ಗಳ ಮೂಲಕ ಕಾಕಿಯ ಖದರ್​ ಅಧ್ಬುತವಾಗಿ ತೋರಿಸಲಾಗಿದೆ. ಎಸ್​ ,ಮುರುಳಿಕೃಷ್ಣ ಅನ್ನೋ ಖಡಕ್​ ಪೊಲೀಸ್​ ಅಧಿಕಾರಿಯಾಗಿ ನಟ ವಿಶಾಲ್​ ಮಿಂಚಲಿದ್ದಾರೆ. ಅನ್ಯಾಯ, ಮೋಸದ ವಿರುದ್ಧ ಹೋರಾಡುತ್ತಾ ರೌಡಿಗಳ ಹುಟ್ಟಡಗಿಸೋ ಕಾಕಿಯ ಖದರ್​​ ನೋಡೋಕೆ ಇನ್ನು ಸ್ವಲ್ಪ ದಿನ ಕಾಯಲೇಬೇಕು.

ವಿಶಾಲ್​ಗೆ ನಾಯಕಿಯಾಗಿ ಸುನೈನಾ ಕಾಣಿಸಿಕೊಳ್ಳಲಿದ್ದಾರೆ. ಹಿರಿಯ ನಟ ಪ್ರಭು ಕೂಡ ಸಿನಿಮಾದ ಲೀಡ್​ ರೋಲ್​ನಲ್ಲಿ ಅಭಿನಯಿಸಿದ್ದಾರೆ. ಈಗಾಗ್ಲೇ ಎರಡು ಶೆಡ್ಯೂಲ್​​ ಶೂಟಿಂಗ್​ ಕಂಪ್ಲೀಟ್​ ಮಾಡಿದ್ದು, ಕೊಯಮತ್ತೂರಿನಲ್ಲಿ ಉಳಿದ ಶೆಡ್ಯೂಲ್​ ಕಂಪ್ಲೀಟ್​ ಮಾಡಲಿದೆ. ಏನೇ ಅಗಲಿ ರಾಕಿಭಾಯ್​​ ಗೆಳೆಯ ಮೊದಲ ಬಾರಿಗೆ ಪೊಲೀಸ್​ ಡ್ರೆಸ್​ನಲ್ಲಿ ಸಿಂಗಂ ಅವತಾರ ತಾಳಿ ಬೀದಿಪುಂಡರ ಮೈ ಚಳಿ ಬಿಡಿಸಲಿದ್ದಾರೆ.

ರಾಕೇಶ್​ ಅರುಂಡಿ , ಫಿಲ್ಮ್​ ಬ್ಯೂರೋ ಪವರ್​ ಟಿವಿ

RELATED ARTICLES

Related Articles

TRENDING ARTICLES