Sunday, December 22, 2024

ಕಲ್ಲುಗಳಿಂದ ಜಜ್ಜಿ ಇಬ್ಬರು ವ್ಯಕ್ತಿಗಳ ಬರ್ಬರ ಹತ್ಯೆ

ಗದಗ : ಬಡಿಗೆ ಮತ್ತು ಕಲ್ಲುಗಳಿಂದ ಜಜ್ಜಿ ಇಬ್ಬರು ವ್ಯಕ್ತಿಗಳನ್ನು ಬರ್ಬರವಾಗಿ ಹತ್ಯೆ ಮಾಡಲಾದ ಘಟನೆ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಕೆರಳ್ಳಿ ಗ್ರಾಮದಲ್ಲಿ ನಡೆದಿದೆ.

ಮಹಾಂತೇಶ ಮಾಚೇನಹಳ್ಳಿ(28) ಹಾಗೂ ಫಕೀರೇಶ ಮಾಚೇನಹಳ್ಳಿ(17) ಮೃತ ದುರ್ದೈವಿಗಳಾಗಿದ್ದಾರೆ. ಮನೆಯಲ್ಲಿ ಕೆಲಸ ಮಾಡ್ತಿದ್ದ ಆಳು ಮಗನಿಂದ ಈ ಕೃತ್ಯ ನಡೆದಿದ್ದು, ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮನೆಯಲ್ಲಿ ಮಲಗಿದ್ದಾಗ ನಸುಕಿನ ಜಾವ ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಸದ್ಯ ಶಿರಹಟ್ಟಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES