Wednesday, January 22, 2025

ಕಸ ಹಾಕುವ ವಿಚಾರಕ್ಕೆ ಗಲಾಟೆ: ತಲವಾರ್‌ನಿಂದ ಕೊಚ್ಚಿ ಯುವಕನ ಕೊಲೆ

ಕಲಬುರಗಿ : ಆತ ದೂರದ ದುಬೈನಲ್ಲಿ ಪೈಂಟಿಂಗ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ.. ಕೆಲ ತಿಂಗಳ ಹಿಂದಷ್ಟೆ ಕುಟುಂಬಸ್ಥರನ್ನ ಭೇಟಿ ಮಾಡಲು ಊರಿಗೆ ಬಂದಿದ್ದ. ಆದರೆ ತನ್ನ ಕುಟುಂಬ ಮತ್ತು ಸಹೋದರ ಸಂಬಂಧಿಗಳ ನಡುವಿನ ಅದೊಂದು ಸಣ್ಣ ಜಗಳಕ್ಕೆ ಆತ ಮಸಣ ಸೇರಿದ್ದಾನೆ. ಅಷ್ಟಕ್ಕೂ ದುಬೈ ಪೈಂಟರ್ ಸಾವಿಗೆ ಕಾರಣವಾದ ಆ ವಿಷಯವಾದ್ರೂ ಏನೂ ಅಂತಿರಾ..?

ದಯಾನಂದ (26 ). ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಶುಕ್ರವಾಡಿ ಗ್ರಾಮದವರು. ಕಳೆದ ಕೆಲ ವರ್ಷಗಳಿಂದ ಜೀವನ ಅರಸಿ ದುಬೈಗೆ ತೆರಳಿದ್ದ‌. ಅಲ್ಲಿ ಪೆಂಟಿಂಗ್ ಕೆಲಸ ಮಾಡಿಕೊಂಡು ಲೈಫ್ ಸೆಟಲ್ ಮಾಡಿಕೊಂಡಿದ್ದರು. ಕಳೆದ ನಾಲ್ಕೈದು ತಿಂಗಳ ಹಿಂದೆ ಹುಟ್ಟೂರು ಶುಕ್ರವಾಡಿ ಗ್ರಾಮಕ್ಕೆ ಬಂದಿದ್ದ.

ದಯಾನಂದನ ಮನೆಯ ಸ್ಥಳದಲ್ಲಿ ಸಹೋದರ ಸಂಬಂಧಿಗಳಾದ ಹಣಮಂತ ಮತ್ತು ಸುನೀಲ್ ಸೇರಿಕೊಂಡು ಕಸ ಹಾಕುತ್ತಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ಮಧ್ಯೆ ಸಾಕಷ್ಟು ಬಾರಿ ಜಗಳ ಕೂಡ ನಡೆದಿತ್ತು. ಜಗಳ ಬೆಳೆಯುತ್ತ ಇಬ್ಬರ ಮಧ್ಯೆ ಹಗೆತನಕ್ಕೆ ಕಾರಣವಾಗಿತ್ತು. ಆದರೆ ದಯಾನಂದ ಮರಳಿ ದುಬೈಗೆ ಹೋಗುವುದಕ್ಕಾಗಿ ಪಾಸ್‌ಪೋರ್ಟ್ ರಿನಿವಲ್ ಮಾಡಿಸುವುದಕ್ಕಾಗಿ ಕಲಬುರಗಿಗೆ ಬಂದಿದ್ದಾನೆ.

ಈ ವೇಳೆ ಸಹೋದರ ಸಂಬಂಧಿಗಳಾದ ಸುನೀಲ್, ಅನೀಲ್, ಹಣಮಂತ ಸೇರಿದಂತೆ ನಾಲ್ಕೈದು ಜನ ಸೇರಿಕೊಂಡು ದಯಾನಂದನನ್ನ ಕಲಬುರಗಿ ನಗರದ ಜೇವರ್ಗಿ ರಸ್ತೆಯಲ್ಲಿರುವ ವಾಜಪೇಯಿ ಬಡಾವಣೆಯ ನಿರ್ಜನ ಪ್ರದೇಶಕ್ಕೆ ಕರೆದ್ಯೊಯ್ದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಅಂತಾ ಕುಟುಂಬಸ್ಥರು ಆರೋಪಿಸಿದ್ದಾರೆ.

ಇನ್ನೂ ಕೊಲೆಯಾದ ದಯಾನಂದನ ಸಹೋದರ ಇಬ್ಬರು ಕೂಡ ದುಬೈನಲ್ಲೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಮನೆ ಮಧ್ಯೆ ಕಸ ಚೆಲ್ಲುತ್ತಿರುವ ವಿಚಾರಕ್ಕೆ ಆರಂಭವಾದ ಜಗಳ ಎರಡು ಕುಟುಂಬದ ಮಧ್ಯೆ ದೊಡ್ಡ ಕಂದಕವೇ ಸೃಷ್ಟಿಯಾಗಿತ್ತು. ಹೀಗಾಗಿ ದಯಾನಂದನನ್ನ ಹೇಗಾದರೂ ಮಾಡಿ ಮುಗಿಸಬೇಕು ಅಂತಾ ಸುನೀಲ್ ಮತ್ತು ಅನೀಲ್ ಸೇರಿದಂತೆ ಇನ್ನಿತರರು ಸ್ಕೇಚ್ ಹಾಕಿದ್ದರು. ಈ ವೇಳೆ ಮತ್ತೊಂದು ಸುತ್ತಿನ ಮಾತಿನ ಚಕಮಕಿ ನಡೆದಿದೆ. ವೇಳೆ ತಲವಾರ್‌ನಿಂದ ಕುತ್ತಿಗೆ ಮತ್ತು ದೇಹದ ಇತರೇ ಭಾಗಕ್ಕೆ ಮನಬಂದಂತೆ ಇರಿದು ಕೊಲೆ ಮಾಡಲಾಗಿದೆ.

ಅದೆನೇ ಇರಲಿ ನೂರಾರು ಕನಸುಗಳನ್ನ ಕಟ್ಟಿಕೊಂಡು ದುಬೈನಲ್ಲಿ ಕೆಲಸ ಮಾಡಿಕೊಂಡು ಇರುತ್ತಿದ್ದ ದಯಾನಂದನನ್ನ ಬರ್ಬರವಾಗಿ ಹತ್ಯೆ ಮಾಡಿದ್ದು ದುರಂತವೇ ಸರಿ.

ಅನಿಲ್‌ಸ್ವಾಮಿ ಪವರ್ ಟಿವಿ ಕಲಬುರಗಿ

RELATED ARTICLES

Related Articles

TRENDING ARTICLES