Saturday, May 18, 2024

ಸರ್ಕಾರ ಉಳಿಸಿಕೊಳ್ಳಲು ಠಾಕ್ರೆ ಸರ್ಕಸ್

ಮಹರಾಷ್ಟ್ರ : ಮಹಾರಾಷ್ಟ್ರ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದು, ಅಘಾಡಿ ಸರ್ಕಾರ ಪತನ ಬಹುತೇಕ ನಿಶ್ಚಿತವಾಗಿದೆ.

ಗುಜರಾತ್​ನ ಸೂರತ್​ನಿಂದ ಅಸ್ಸಾಂನ ಗುವಾಹಟಿಗೆ MLAಗಳು ಶಿಫ್ಟ್ ಆಗಿದ್ದು, ಮಹಾರಾಷ್ಟ್ರ ಶಿವಸೇನೆ ಶಾಸಕರಿಗೆ ಅಸ್ಸಾಂನಲ್ಲಿ ರಾಜಾತಿಥ್ಯ ಶಾಸಕರನ್ನು ಗುವಾಹಟಿ ಏರ್​ಪೋರ್ಟ್​ನಲ್ಲಿ ಸ್ವಾಗತಿಸಿದ್ದಾರೆ. ಮಹಾ ಗೆಳೆಯರು ಬರುವ ಮುನ್ನವೇ ಅಸ್ಸಾಂ ಸಿಎಂ ಹೋಟೆಲ್​ಗೆ ಬಂದಿದ್ದಾರೆ.

ಮಧ್ಯ ಪ್ರದೇಶ, ಕರ್ನಾಟಕ ಬಳಿಕ ಇದೀಗ ಮಹಾರಾಷ್ಟ್ರ ಸರದಿಯಾಗಿದ್ದು, ಸರ್ಕಾರ ಉಳಿಸಿಕೊಳ್ಳಲು ಠಾಕ್ರೆ ಸರ್ಕಸ್ ಮಾಡಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಉದ್ಧವ್ ಠಾಕ್ರೆ ಕ್ಯಾಬಿನೆಟ್ ಸಭೆ ಕರೆದಿದ್ದಾರೆ. ಅತೃಪ್ತರನ್ನು ಮನವೊಲಿಸಲು ನಾನಾ ಪ್ರಯತ್ನ ಮಾಡಿದ್ದಾರೆ. ಅತೃಪ್ತರ ಗುಂಪಿನಿಂದ ಹೊರ ಬಂದ MLA. 6 ಶಾಸಕರ ಗುಂಪಿನಲ್ಲಿದ್ದ ಶಾಸಕರೊಬ್ಬರು ಮುಂಬೈ ವಾಪಸ್ ಆಗಿದ್ದಾರೆ. ಸೂರತ್​ನಿಂದ ವಾಪಸ್ ಬಂದ ಶಿವಸೇನೆ MLA ಉದ್ಧವ್ ಠಾಕ್ರೆಯನ್ನು ಭೇಟಿಯಾಗಿದ್ದಾರೆ. ಶಿಂಧೆ ಗುಂಪಿನಲ್ಲಿರುವ ಶಾಸಕರ ಬಗ್ಗೆ ಮಾಹಿತಿ ನೀಡಿದ್ದು, ಕೆಲವು ಅತೃಪ್ತರು ಮತ್ತೆ ಠಾಕ್ರೆ ಸಂಪರ್ಕಕ್ಕೆ ಬರಲು ಯತ್ನಿಸಿದ್ದಾರೆ.

RELATED ARTICLES

Related Articles

TRENDING ARTICLES