Wednesday, January 22, 2025

ಪುಷ್ಪ-2  ಸ್ಟೋರಿ ಲೀಕ್.. ಮತ್ತೆ  ಕೆಜಿಎಫ್ ಕಾಪಿ ಪೇಸ್ಟ್..?

ಕೆಜಿಎಫ್ ಅಬ್ಬರಿಸಿ ಬೊಬ್ಬಿರಿದ ನಂತ್ರ ಸೌತ್ ಸಿನಿದುನಿಯಾದಲ್ಲಿ ಹೊಸ ದಾಖಲೆ ಬರೆದ ಚಿತ್ರ ಪುಷ್ಪ. ಟಾಲಿವುಡ್ ಸ್ಟೈಲಿಶ್ ಐಕಾನ್ ಮ್ಯಾನರಿಸಂಗೆ ಇಡೀ ಇಂಡಿಯಾ ಕ್ಲೀನ್ ಬೋಲ್ಡ್ ಆಗಿತ್ತು. ಇದೀಗ ಪುಷ್ಪ ಚಾಪ್ಟರ್ 2 ಸಿನಿಮಾದ ಕಥೆ ಲೀಕ್ ಆಗಿದೆ. ಶ್ರೀವಲ್ಲಿಯ ರೋಲ್ ಬಗ್ಗೆ, ಕೆಜಿಎಫ್ ಕಥೆಯ ಕಾಪಿ ಪೇಸ್ಟ್ ಬಗ್ಗೆ ಗುಸು ಗುಸು ಶುರುವಾಗಿದೆ. ಯೆಸ್.. ಹಾಗಾದ್ರೆ ಪುಷ್ಪರಾಜ್’ನ ಅಸಲಿ ಅವತಾರ ಹೇಗಿರುತ್ತೆ ಗೊತ್ತಾ..? ಈ ಸ್ಟೋರಿ ಓದಿ.

ಶ್ರೀವಲ್ಲಿ ಕಥೆ ಏನು..? ಗಲ್ಫ್ ರಾಷ್ಟ್ರಗಳ ಜೊತೆ ಪುಷ್ಪ ಸ್ಮಗ್ಲಿಂಗ್

ಇಡೀ ಇಂಡಿಯಾದಲ್ಲಿ ಸೌತ್ ಸಿನಿಮಾಗಳ ಅಬ್ಬರ ಶುರುವಾಗಿದ್ದೇ ಬಾಹುಬಲಿ, ಕೆಜಿಎಫ್, ತ್ರಿಬಲ್ ಆರ್, ಪುಷ್ಪ ಚಿತ್ರಗಳ ನಂತ್ರ. ವಿಶ್ವವೇ ಹೆಬ್ಬೇರಿಸುವಂತೆ ಮಾಡಿದ ಅದ್ಧೂರಿ ಸಿನಿಮಾಗಳಿವು.  ಸೀಕ್ವೆಲ್ ಕಥೆಯ ಮೂಲಕ ಎಲ್ಲರ ಅಟೆನ್ಷನ್ ಕ್ರಿಯೇಟ್ ಮಾಡಿದ ಅದ್ಭುತ ದೃಶ್ಯಕಾವ್ಯಗಳು. ಕೆಜಿಎಫ್ ಸಿನಿಮಾದ ನಂತ್ರ ತೆರೆಗೆ ಬಂದ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾ ಕೆಜಿಎಫ್ ಕಾಪಿ ಪೇಸ್ಟ್ ಅಂತ ಟ್ರೋಲ್ ಆಗಿತ್ತು. ಇದೀಗ ಪುಷ್ಪ 2 ಕೂಡ ಮತ್ತದೇ ಸುದ್ದಿಯಲ್ಲಿದೆ.

ಕೆಜಿಎಫ್  ಚಾಪ್ಟರ್ 1 ಹಾಗೂ ಪುಷ್ಪ ದಿ ರೈಸ್ ಸಿನಿಮಾ ನೋಡಿದವರು ಹೀಗೊಂದು ಸುದ್ದಿ ಹಬ್ಬಿಸಿ ಸಖತ್ ಟ್ರೋಲ್ ಮಾಡಿದ್ರು. ಪುಷ್ಪ ಸೇಮ್ ಟು ಸೇಮ್ ಕೆಜಿಎಫ್ ಚಿತ್ರದ ಕಥೆಯನ್ನು ಕದ್ದಿದೆ. ರಾಕಿಭಾಯ್ ಗೋಲ್ಡ್ ಸ್ಮಗ್ಲಿಂಗ್ ಮಾಡಿದ್ರೆ, ಪುಷ್ಪ ರಕ್ತಚಂದನ ಮರಗಳ ಸ್ಮಂಗ್ಲಿಂಗ್ ಮಾಡ್ತಾನೆ ಎಂದಿದ್ರು. ಆದ್ರೆ, ಯಾರು ಏನೇ ಮಾತಾಡಿದ್ರು ಬಾಕ್ಸ್ ಆಫೀಸ್  ಕಲೆಕ್ಷನ್ ವಿಚಾರದಲ್ಲಿ ಎರಡೂ ಸಿನಿಮಾಗಳು ಸಾವಿರ ಕೋಟಿ ಕ್ಲಬ್ ಸೇರಿ ದಾಖಲೆ ಬರೆದವು. ಇದೀಗ ಪುಷ್ಪ  ಸೀಕ್ವೆಲ್ ಸಿನಿಮಾದಲ್ಲಿ ಮರಗಳ ಸ್ಮಗ್ಲಿಂಗ್ ಮಾಡೋಕೆ ವಿದೇಶಕ್ಕೆ ಹಾರಲಿದ್ದಾನಂತೆ ಪುಷ್ಪರಾಜ್. ಈ ಕಥೆ ಕೇಳಿದ್ರೆ ಮತ್ತೆ ಕೆಜಿಎಫ್ ಸ್ಟೋರಿ ಕಾಪಿ ಪೇಸ್ಟ್ ಅಂತಿದೆ ಸಿನಿದುನಿಯಾ.

ಪುಪ್ಪ 2 ಚಿತ್ರದಲ್ಲಿ ಶ್ರೀವಲ್ಲಿಗೆ ಇಲ್ಲಾ ಜಾಸ್ತಿ ಸ್ಪೇಸ್..?

ಅಂತಾರಾಷ್ಟ್ರೀಯ ಮಟ್ಟದಲ್ಲಿ ಪುಷ್ಪ ಸ್ಮಗ್ಲಿಂಗ್ ಸ್ಟಾರ್ಟ್

ಪುಪ್ಪ ದಿ ರೈಸ್ ಸಿನಿಮಾ ಸಕ್ಸಸ್ ಕಾಣ್ತಿದ್ದ ಹಾಗೆ ಚಾಪ್ಟರ್ 2 ಬಗ್ಗೆ  ಎಲ್ಲರೂ ಹಗಲು ರಾತ್ರಿ ಕನಸು ಕಾಣ್ತಿದ್ದಾರೆ. ಚಾಪ್ಟರ್ 2 ಸಿನಿಮಾ ಹೇಗಿರಬಹುದು ಅಂತ ಕೂತಲ್ಲೇ ಬೆಟ್ಟಿಂಗ್ ಕಟ್ತಿದ್ದಾರೆ. ಅಲ್ಲು ಅರ್ಜುನ್ ಅಭಿಮಾನಿಗಳಂತೂ ಪುಷ್ಪ ಸಿನಿಮಾದ ಭಜನೆ ಮಾಡ್ತಿದ್ದಾರೆ.  ಈ ಚಿತ್ರ ಇಂಟರ್ ನ್ಯಾಷನಲ್ ಲೆವೆಲ್ ನಲ್ಲಿ ಬ್ಯುಸಿನೆಸ್ ಮಾಡಲಿದೆ. ಸ್ಮಗ್ಲಿಂಗ್ ಮಾಡೋಕೆ ವಿದೇಶಕ್ಕೆ ಹಾರಲಿದ್ದಾನೆ ಪುಷ್ಪ.

ನಿರ್ದೇಶಕ ಸುಕುಮಾರನ್ ಕೂಡ ಚಾಪ್ಟರ್ 2 ಬಗ್ಗೆ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿದ್ದಾರೆ. ಸಿನಿಮಾವನ್ನು ಮತ್ತೊಂದು ಲೆವೆಲ್ಗೆ ತೆಗೆದುಕೊಂಡು ಹೋಗೋಕೆ ಭರ್ಜರಿ ಪ್ಲ್ಯಾನ್ ಮಾಡಿಕೊಂಡಿದ್ದಾರಂತೆ. ಸ್ವಲ್ಪ ಎಮೋಷನಲ್ ಕಂಟೆಂಟ್​ಗಾಗಿ  ಶ್ರೀವಲ್ಲಿಯನ್ನು ಪಾರ್ಟ್ 2 ನಲ್ಲಿ ಸಾಯಿಸಲಾಗುತ್ತೆ ಅನ್ನೋ ಗಾಸಿಪ್ ಕೂಡ ಹರಿದಾಡ್ತಿದೆ. ಗಲ್ಫ್ ರಾಷ್ಟ್ರಗಳ ಜೊತೆ ಪುಷ್ಪನ ರಿಲೇಶನ್ ಡೆವಲಪ್ ಆಗಲಿದೆಯಂತೆ

ಪುಷ್ಫನಿಗೆ ಎದುರಾಗಲಿರೋ ವಿಲನ್ಸ್ ಜೊತೆ ಮಹಾ ಸಮರವೇ ನಡೆಯಲಿದೆ. ಹಾಗಾಗಿ ಚಾಪ್ಟರ್ 2ನಲ್ಲಿ ಶ್ರೀವಲ್ಲಿ ಪಾತ್ರಕ್ಕೆ ಕತ್ತರಿ ಹಾಕಿದ್ದಾರೆ ಎನ್ನಲಾಗ್ತಿದೆ. ಪೂರ್ತಿ ಮಾಸ್ ಎಲಿಮೆಂಟ್ಸ್ ಇಟ್ಟು ಕೆಜಿಎಫ್ 2 ರೀತಿ ರಿಚ್ ಆಗಿ ತೆರೆಗೆ ತರೋ ಪ್ಲ್ಯಾನ್ ಮಾಡಿಕೊಂಡಿದೆ ಚಿತ್ರತಂಡ. ರಾಕಿಭಾಯ್ ಕೂಡ ಗನ್ ತರೋಕೆ ವಿದೇಶಕ್ಕೆ ಹಾರಿದ್ದು. ವಿದೇಶಗಳ ಜೊತೆ ವ್ಯಾಪಾರ ಕುದುರಿಸಿದ್ದು ಗೊತ್ತೇ ಇದೆ. ಈಗ ಅದೇ ರೀತಿಯಲ್ಲಿ ಪುಷ್ಪ ಸಿನಿಮಾದ ಕಥೆ ಕೂಡ ಇರಲಿದೆ ಎನ್ನಲಾಗ್ರಿದೆ. ಎನಿವೇ ಸಿನಿಮಾ ತೆರೆಗೆ ಬಂದ ನಂತ್ರ  ಅಸಲಿ ಸತ್ಯ ಗೊತ್ತಾಗಲಿದೆ.

ರಾಕೇಶ್ ಅರುಂಡಿ, ಫಿಲ್ಮ್ ಬ್ಯುರೋ, ಪವರ್ ಟಿವಿ

RELATED ARTICLES

Related Articles

TRENDING ARTICLES