Monday, December 23, 2024

ಉಡ್ತಾ ಪಂಜಾಬ್‌ ರೀತಿ ಉಡ್ತಾ ಬೆಂಗಳೂರು ಆಗ್ತಿದೆಯಾ ಸಿಲಿಕಾನ್‌ ಸಿಟಿ?

ಬೆಂಗಳೂರು: ಇದು ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ” ದಿ ಪಾರ್ಕ್ ” ಹೋಟೆಲ್. ಈ ಹೋಟೆಲ್ ಮೇಲೆ ಕಳೆದ ರಾತ್ರಿ ಹಲಸೂರು ಪೊಲೀಸ್ ಇನ್ಸ್‌ಪೆಕ್ಟರ್‌ ಮಂಜುನಾಥ್ ನೇತೃತ್ವದ ತಂಡ ದಿಢೀರ್ ‌ಅಂತ ದಾಳಿ‌ ಮಾಡ್ತು. ಹೋಟೆಲ್‌ನಲ್ಲಿ ಡ್ರಗ್ಸ್ ಪಾರ್ಟಿ ನಡೀತಾ ಇದೆ ಅನ್ನೋ ಮಾಹಿತಿ ತಿಳಿದ ಪೊಲೀಸರು ಏಕಾಏಕಿ ದಾಳಿ‌ ಮಾಡಿದ್ರು. ಈ ದಾಳಿ ವೇಳೆ ಬಾಲಿವುಡ್‌ನ ಹೆಸರಾಂತ ನಟ ಶಕ್ತಿ ಕಪೂರ್ ಮಗ ಹಾಗೂ ಶ್ರದ್ಧಾ ಕಪೂರ್ ಸಹೋದರ ಸಿದ್ಧಾಂತ್ ಕಪೂರ್ ಲಾಕ್ ಆಗಿದ್ದಾನೆ.

ಗೋವಾ, ಮಂಗಳೂರು, ಬೆಂಗಳೂರಿನ ದೊಡ್ಡ ದೊಡ್ಡ ರೇವ್ ಪಾರ್ಟಿಗಳ ಮೇಲೆ ದಾಳಿ ಆದಾಗ ಸುಲಭವಾಗಿ ಸ್ಟಾರ್ ಸೆಲೆಬ್ರಿಟಿಗಳೇ ಸಿಕ್ಕು ಬೀಳ್ತಾರೆ. ಸಮಾಜದಲ್ಲಿ ದೊಡ್ಡ ಫ್ಯಾಮಿಲಿಯೆಂದು ಗುರುತಿಸಿಕೊಂಡ ಸೆಲೆಬ್ರಿಟಿ ಮಕ್ಕಳೆ ಈ ಮಾಯಾಜಾಲದಲ್ಲಿ ಸಿಲುಕಿರುತ್ತಾರೆ. ನೆನ್ನೆ ಮೊನ್ನೆ ಸ್ಯಾಂಡಲ್ವುಡ್ನಲ್ಲಿ ವ್ಯಾಪಕವಾಗಿ ಸೌಂಡ್ ಮಾಡಿದ್ದ ಡ್ರಗ್ಸ್ ಜಾಲ, ಬಾಲಿವುಡ್ಗೂ ವ್ಯಾಪಿಸಿತ್ತು. ಇದೀಗ ಬಾಲಿವುಡ್ನ ಮತ್ತೊಬ್ಬ ಸ್ಟಾರ್ ನಟನ ಮಗ ಸಿಕ್ಕಿಬಿದ್ದು ಸುದ್ದಿಯಲ್ಲಿದ್ದಾರೆ.

‘ದಿ ಪಾರ್ಕ್’ ಹೋಟೆಲ್​ನಲ್ಲಿ ನಡೆದ ಹೈಫೈ ಡ್ರಗ್ಸ್‌ ಪಾರ್ಟಿಯಲ್ಲಿದ್ದ ಸಿದ್ಧಾಂತ್​ ಕಪೂರ್ ಜೊತೆ ಅಖಿಲ್ ಸೋನಿ, ಪಂಜಾಬ್‌ ಮೂಲದ ಅರ್ಜೋತ್ ಸಿಂಗ್, ಹನಿ, ದರ್ಶನ್, ಸುರೇಶ್ ಎಂಬುವರನ್ನು ಬಂಧಿಸಲಾಗಿದೆ.drug
ಡ್ರಗ್ಸ್ ಪಾರ್ಟಿ ಮಾಡಲೆಂದೇ ಬೆಂಗಳೂರಿಗೆ ಬಂದಿದ್ರು ಈ ಸ್ನೇಹಿತರು. ಒಟ್ಟು 35 ಜನರನ್ನು ಪೊಲೀಸರು ತಪಾಸಣೆ ಮಾಡಿದ್ದಾರೆ. ಡ್ರಗ್ಸ್‌ ಪತ್ತೆ ಪರೀಕ್ಷೆಯಲ್ಲಿ ಐವರು ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದೆ. 14 ಯುವತಿಯರು, 26 ಯುವಕರು ಪಾರ್ಟಿಯಲ್ಲಿ ಭಾಗಿಯಾಗಿದ್ರು

ಹಲಸೂರು ಪೊಲೀಸರು ಸಿದ್ಧಾಂತ್‌ ಕಪೂರ್ ಸೇರಿ ಐವರನ್ನ ಬಂಧಿಸಿದ್ದಾರೆ. ಬಂಧಿತರ ಮೇಲೆ 22a, 22b ಹಾಗೂ NDP’s ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಿದ್ದಾರೆ. ಇನ್ನು ಇದೊಂದು ಓಪನ್ ಫಾರ್ ಪಬ್ಲಿಕ್ ಪಾರ್ಟಿ ಆಗಿದೆ. ಇಲ್ಲಿ ಯಾರು ಬೇಕಾದರೂ ಬರಬಹುದಾಗಿತ್ತು. ಸದ್ಯ ಈ ಪ್ರಕರಣವನ್ನು ಹಲಸೂರು ಪೊಲೀಸರು ಗಂಭೀರವಾಗಿ ತೆಗೆದುಕೊಂಡು ಮತ್ತಷ್ಟು ತನಿಖೆ ಮುಂದುವರೆಸಿದ್ದಾರೆ.

RELATED ARTICLES

Related Articles

TRENDING ARTICLES