Sunday, December 22, 2024

ಬಿಜೆಪಿ ಸರ್ಕಾರ ವಿರುದ್ಧ ಹರಿಹಾಯ್ದ ಶಾಸಕ ಎಚ್.ಕೆ.ಪಾಟೀಲ

ಗದಗ : ಬಿಜೆಪಿ ರಾಜಕೀಯ ದುರುದ್ದೇಶಗಳನ್ನ ಈಡೇರಿಸಿಕೊಳ್ಳುವ ಸಲುವಾಗಿ ಏನಬೇಕಾದರೂ ಮಾಡ್ತಿದೆ ಎಂದು ಗದಗನಲ್ಲಿ ಶಾಸಕ ಎಚ್.ಕೆ.ಪಾಟೀಲ ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಠ್ಯಕ್ರಮ ವಿಚಾರದಲ್ಲಿ ಸಾಕಷ್ಟು ಗೊಂದಲ ಸೃಷ್ಟಿ ಮಾಡಿದ್ದಾರೆ. ಬಿಜೆಪಿ ರಾಜಕೀಯ ದುರುದ್ದೇಶಗಳನ್ನ ಈಡೇರಿಸಿಕೊಳ್ಳುವ ಸಲುವಾಗಿ ಏನಬೇಕಾದರೂ ಮಾಡ್ತಿದೆ. ತಿರುಚಿದರೂ ನಡೆಯುತ್ತೆ ಅನ್ನೋದಕ್ಕೆ ನಮ್ಮ ಸಾರಸ್ವತ ಲೋಕ ಎದ್ದು ನಿಂತು ಬಡಿಗೆ ತೆಗೆದುಕೊಂಡಿದೆ. ಅದಕ್ಕಾಗಿ ಇವರಿಗೆ ಸ್ವಲ್ಪ ಬುದ್ಧಿ ಬಂದಿದೆ. ತಪ್ಪುಗಳು ಏನೋ‌ ಒಂದು‌ ಕಾರಣದಿಂದ ಆಗಿಲ್ಲ. ದುರುದ್ದೇಶದಿಂದ ಬಸವಣ್ಣ, ಅಂಬೇಡ್ಕರ್,ಕುವೆಂಪು ಇಂಥಹ ದೊಡ್ಡವರನ್ನು ತಿರುಚಿತ್ತೀರಿ ಎಂದು ಕಿಡಿಕಾಡಿದ್ದಾರೆ.

ಇನ್ನು ಸಣ್ಣ ಪುಟ್ಟ ಯಾವದನ್ನ ಬಿಡುತ್ತೀರಿ. ದೇಶದಲ್ಲಿ ಏನು ನಡೆದಿದೆ. ಇತಿಹಾಸ ತಿರುಚಿತ್ತೀರಿ, ಲಿಟ್ರೇಚರ್ ಬದಲಾಯಿಸುತ್ತೀರಿ, ಇನ್ನಾವ ಉದಾಹರಣೆ ಬೇಕು. ಬಸವಣ್ಣ, ಅಂಬೇಡ್ಕರ,ಬುದ್ಧ, ಕುವೆಂಪುವರ ಇತಿಹಾಸಗಳನ್ನೇ ಪಠ್ಯಪುಸ್ತಕದಲ್ಲಿ ತಿರುಚುವ ಕೆಲಸಗಳಾದ್ರೆ ಹೇಗೆ ಬಿಜೆಪಿಯವರು ಇನ್ನೇನು ಬಿಡುತ್ತೀರಿ ಹೇಳಿ ನೀವು..? ಟಿಪ್ಪುವಿನ ವಿಷಯದಲ್ಲಿ ಕೋಮುವಾದಿ ಬಣ್ಣ ಕೊಟ್ಟು‌ ಪಾರಾಗಿ ಹೋಗ್ತಿದ್ರಿ ಈಗ ಬಸವಣ್ಣನ ವಿಷಯದಲ್ಲಿ ಏನು ಹೇಳುತ್ತಿರಿ. ನಿಮ್ಮ ಹೊಟ್ಟೆಯಲ್ಲೀಯೇ ಇಷ್ಟು ಕೆಟ್ಟ ಇದೆ ಅನ್ನೋದನ್ನ ತೋರಿಸಿಕೊಡುತ್ತಿಲ್ಲ ಎಂದು ಗದಗನಲ್ಲಿ ಶಾಸಕ ಎಚ್.ಕೆ.ಪಾಟೀಲ ಕಿಡಿಕಾಡಿದ್ದಾರೆ.

RELATED ARTICLES

Related Articles

TRENDING ARTICLES