ಸ್ಯಾಂಡಲ್ವುಡ್ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.
39ನೇ ವಸಂತಕ್ಕೆ ಕಾಲಿಟ್ಟಿರುವ ರಕ್ಷಿತ್ ನಟನೆಗೂ ಸೈ ನಿರ್ಮಾಪಕನ ಜವಾಬ್ದಾರಿಗೂ ಸೈ. ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ, ಕಿರಿಕ್ ಪಾರ್ಟಿ, ಅವನೇ ಶ್ರೀಮನ್ನಾರಾಯಣ, ರಿಕ್ಕಿ, ಉಳಿದವರು ಕಂಡಂತೆ, ವಾಸ್ತು ಪ್ರಕಾರ, ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದವರು. ಇದೀಗ ಜೂನ್ 10ಕ್ಕೆ ಬಿಡುಗಡೆಗೆ ಸಜ್ಜಾಗಿರುವ ಮೋಸ್ಟ್ ಅವೇಟೆಡ್ ಸಿನಿಮಾ 777 ಚಾರ್ಲಿಗೆ ಸಿನಿಪ್ರೇಕ್ಷಕರು ರಕ್ಷಿತ್ರನ್ನ ದೊಡ್ಡ ಪರದೆ ಮೇಲೆ ನೋಡಲು ಹಂಬಲಿಸುತ್ತಿದ್ದಾರೆ.
ಈಗಾಗಲೇ ದೇಶದ 21 ಮಹಾನಗರಗಳ ಪೈಕಿ ದೆಹಲಿ, ಅಮೃತ್ಸರ, ಲಕ್ನೋದಲ್ಲಿ ಪ್ರೀಮಿಯರ್ ಶೋ ನಡೆಯುತ್ತಿದೆ. ಈ ಬಾರಿ ರಕ್ಷಿತ್ಗೆ 777 ಚಾರ್ಲಿಯ ಪ್ರೇಕ್ಷಕರು ಸಿನಿಮಾ ಗೆಲ್ಲಿಸೋದರ ಮೂಲಕ ಬಿಗ್ ಗಿಫ್ಟ್ ಕೊಡಲಿದ್ದಾರೆ.