Friday, May 17, 2024

ತ್ರಿವಿಕ್ರಮ ಟೀಂ ಜೊತೆ ಶಿವಣ್ಣ ಫನ್ನಿ ಖಾರ ಬಾತ್​​​

ಮಮ್ಮಿ ಪ್ಲೀಸ್ ಮಮ್ಮಿ ಅಂತ ಡಾ. ಶಿವಣ್ಣ ಕೂಡ ಪಾರ್ವತಮ್ಮರನ್ನ ಅದೊಂದು ವಿಚಾರಕ್ಕೆ ಪ್ಲೀಸ್ ಮಾಡಿದ್ರಂತೆ. ಕ್ರೇಜಿ ತನಯ ತ್ರಿವಿಕ್ರಮನ ಎಂಟ್ರಿಗೆ ಓಂಕಾರ ಹಾಡಿದ ಸ್ಯಾಂಡಲ್​ವುಡ್ ಲೀಡರ್, ವಿಕ್ಕಿ ಜೊತೆ ಮಸ್ತ್ ಸ್ಟೆಪ್ ಹಾಕಿದ್ದಾರೆ. ಶಿವಣ್ಣನ ಅಡ್ಡಾದಲ್ಲಿ ಇದ್ರ ಹೊರತಾಗಿ ಏನೆಲ್ಲಾ ಹಂಗಾಮ ನಡೀತು ಅನ್ನೋದನ್ನ ನೀವೇ ಒಮ್ಮೆ ಕಣ್ತುಂಬಿಕೊಳ್ಳಿ.

  • ಶಿವಣ್ಣನ ಡ್ಯಾನ್ಸ್​ಗೆ ಫ್ಯಾನ್ಸ್​ ಫುಲ್ ದಿಲ್​​ಖುಷ್..!​​

ಕ್ರೇಜಿಸ್ಟಾರ್​ ರವಿಚಂದ್ರನ್​​ ಪುತ್ರ ವಿಕ್ರಮ್​​ ಅಭಿನಯದ ತ್ರಿವಿಕ್ರಮ​​ ಸಿನಿಮಾ ಸಖತ್​ ಹೈಪ್​ ಕ್ರಿಯೇಟ್ ಮಾಡಿದೆ. ವಿಕ್ರಮ್​​ ರವಿಚಂದ್ರನ್​ಗೆ ಇದು ಚೊಚ್ಚಲ ಸಿನಿಮಾ. ಅರ್ಥಾತ್ ಲಾಂಚ್ ಪ್ಯಾಡ್ ಎಂಟರ್​ಟೈನರ್. ಹಾಗಾಗಿ ಚಿತ್ರರಸಿಕರಿಗೆ ಅಪಾರ ನಿರೀಕ್ಷೆ ಇದೆ. ಸೌತ್​​ ಟು ನಾರ್ಥ್ ಅದ್ಭುತ ಲೊಕೇಷನ್ಸ್​​ನಲ್ಲಿ ಶೂಟಿಂಗ್​ ಮುಗಿಸಿ, ತೆರೆಗಪ್ಪಳಿಸೋಕೆ ತುದಿಗಾಲಲ್ಲಿ ನಿಂತಿದ್ದಾನೆ ತ್ರಿವಿಕ್ರಮ. ಹೊಚ್ಚ ಹೊಸ ಅಪ್ಡೇಟ್​​ ಜೊತೆ ಪ್ರೇಕ್ಷಕರಿಗೆ ಥ್ರಿಲ್ಲಿಂಗ್​ ಫೀಲ್​ ಕೊಡ್ತಿರೋ ತ್ರಿವಿಕ್ರಮ ತಂಡಕ್ಕೆ ಸೆಂಚುರಿ ಸ್ಟಾರ್​ ಶಿವಣ್ಣ ಆನೆಬಲ ತಂದಿದ್ದಾರೆ.

ಬೈರಾಗಿ, ವೇದ ಸಿನಿಮಾಗಳಲ್ಲಿ ಬ್ಯುಸಿ ಇರೋ ಶಿವಣ್ಣ, ಅಶ್ವತ್ಥಾಮನಾಗಿಯೂ ಪ್ಯಾನ್​ ಇಂಡಿಯಾ ಲೆವೆಲ್​​ನಲ್ಲಿ ಜಗಮಗಿಸಲಿದ್ದಾರೆ. ಇದ್ರ ಜೊತೆಗೆ ತ್ರಿವಿಕ್ರಮ ಚಿತ್ರದಲ್ಲಿ ಆ್ಯಕ್ಟ್​ ಮಾಡಿದ್ದಾರಾ ಅಂತ ಹುಬ್ಬೇರಿಸ್ಬೇಡಿ. ವಿಷ್ಯ ಏನಂದ್ರೆ, ತ್ರಿವಿಕ್ರಮ ಚಿತ್ರತಂಡದಿಂದ ಪ್ಲೀಸ್ ಮಮ್ಮಿ ವಿಡಿಯೋ ಸಾಂಗ್​ ರಿಲೀಸ್ ಆಗಿದೆ. ಈ ಸಾಂಗ್​​ನ ಖುದ್ದಾಗಿ ಶಿವಣ್ಣ  ಲಾಂಚ್​ ಮಾಡಿದ್ದಲ್ಲದೆ, ವಿಕ್ಕಿ​ ಜೊತೆ ಇಷ್ಟ ಪಟ್ಟು ಮಸ್ತ್​ ಸ್ಟೆಪ್​ ಹಾಕಿದ್ದಾರೆ.

  • ಅಮ್ಮ-ಮಗನ ಮನ್​ ಕೀ ಬಾತ್​ ಬಿಚ್ಚಿಟ್ರು ಶಿವಣ್ಣ
  • ಶಿವ ಮೆಚ್ಚಿದ ಕಣ್ಣಪ್ಪ ಮಾಡಲ್ಲ ಎಂದಿದ್ದ ಜೋಗಿ..!

ಸನ್​ ಆಫ್​ ಬಂಗಾರದ ಮನುಷ್ಯ ಶಿವಣ್ಣ ಹೃದಯವಂತ. ಕನ್ನಡದಲ್ಲಿ ಯಾರೇ ಹೊಸ ಪ್ರತಿಭೆಗಳು ಬಣ್ಣ ಹಚ್ಚಿದ್ರೂ ತುಂಬು ಹೃದಯದಿಂದ ಮನಸಾರೆ ಹಾರೈಸ್ತಾರೆ. ಇನ್ನು ಆತ್ಮೀಯ ಗೆಳೆಯ ರವಿಚಂದ್ರನ್​ ಮಗನ ಸಿನಿಮಾ ಅಂದ್ರೆ ಕೇಳ್ಬೇಕಾ..? ಪ್ಲೀಸ್​ ಮಮ್ಮಿ ಸಾಂಗ್​ ಕೇಳಿದ ಶಿವಣ್ಣ ಸಖತ್​​ ಇಂಪ್ರೆಸ್​​ ಆದ್ರು. ಜೊತೆಗೆ ತಾನು ಒಮ್ಮೆ ಅಮ್ಮನಿಗೆ ಪ್ಲೀಸ್ ಮಾಡಿದ್ದ ಪ್ರಸಂಗವನ್ನ ಮೆಲುಕು ಹಾಕಿದ್ರು. ಶಿವ ಮೆಚ್ಚಿದ ಕಣ್ಣಪ್ಪ ಚಿತ್ರದಲ್ಲಿ ಆ್ಯಕ್ಟ್​ ಮಾಡಲ್ಲ ಅಂದಾಗ ಅಮ್ಮನೇ ನಂಗೆ ಪ್ಲೀಸ್ ಮಗನೇ​  ಈ ಸಿನಿಮಾ ಮಾಡು ಅಂತ ತುಂಬಾನೇ ರಿಕ್ವೆಸ್ಟ್​ ಮಾಡಿಕೊಳ್ಳೋ ಪರಿಸ್ಥಿತಿ ಬಂದಿತ್ತಂತೆ.

ಇದಲ್ಲದೇ, ಸಿನಿಮಾ ರಿಲೀಸ್​ ಯಾಕೆ ಲೇಟ್ ಆಗ್ತಿದೆ ಎಂದ ಶಿವಣ್ಣ, ಕೊರೋನಾ ಪ್ರಾಬ್ಲಮ್ಮಾ ಅಥ್ವಾ ಕರೆನ್ಸಿ ಪ್ರಾಬ್ಲಮ್ಮಾ ಅಂತ ನಿರ್ದೇಶಕ ಸಹನಾ ಮೂರ್ತಿ ಜೊತೆ ತಮಾಷೆ ಮಾಡಿದ್ರು. ವಿಕ್ಕಿ ಇಂಪಾರ್ಟೆಂಟ್​ ಸಿನಿಮಾ ಇದು. ಯಾಕೆ ಲೇಟ್​​ ಮಾಡ್ತಾ ಇದೀರಾ ಅಂತಾ ನಿರ್ದೇಶಕರಿಗೆ ಪ್ರಶ್ನೆ ಮಾಡಿದ್ರು. ರವಿಚಂದ್ರನ್​ ಮಕ್ಕಳು ಅಂದ್ರೆ ತುಂಬಾ ಇಷ್ಟ. ವಿಕ್ಕಿ ನನ್ನ ಮಗನ ತರಹ. ಅಷ್ಟೇ ಯಾಕೆ ನನ್ನ ಯಂಗರ್ ವರ್ಷನ್ ಅಂತ ಕೊಂಡಾಡಿದ್ರು. ರಾ ಫೇಸ್​​​​​ ಜೊತೆ ಡ್ರೆಸ್ಸಿಂಗ್ ಸೆನ್ಸ್​​ ಎಲ್ಲಾ ನನ್ ತರಹಾನೇ ಎಂದ್ರು.

ಕೊನೆಯಲ್ಲಿ ವಿಕ್ಕಿ ಬಳಿ ಗರ್ಲ್​ ಫ್ರೆಂಡ್​ ವಿಷ್ಯ ಕೇಳಿದ ಶಿವಣ್ಣ, ಯಾರಾದ್ರು ಇದ್ರೆ ಹೇಳು ನಾನೇ ಮಾತಾಡ್ತೀನಿ ಅಂತ ಕಿಚಾಯಿಸಿದ್ರು. ತ್ರಿವಿಕ್ರಮ ಸಿನಿಮಾ, ಈ ಹಿಂದೆ ಮಾಸ್ ಲೀಡರ್ ಸಿನಿಮಾನ ಶಿವಣ್ಣಗೆ ಆ್ಯಕ್ಷನ್​ ಕಟ್ ಹೇಳಿದ್ದ ಸಹನಾ ಮೂರ್ತಿ ನಿರ್ದೇಶಿಸಿದ್ದು, ಸೋಮಣ್ಣ ನಿರ್ಮಿಸಿದ್ದಾರೆ. ಆಕಾಂಕ್ಷಾ ಶರ್ಮಾ ನಾಯಕಿಯಾಗಿ ನಟಿಸಿರೋ ಈ ಚಿತ್ರದಲ್ಲಿ ಸಾಧುಕೋಕಿಲಾ, ಚಿಕ್ಕಣ್ಣ ಸೇರಿದಂತೆ ದೊಡ್ಡ ತಾರಾಗಣವಿದೆ. ಅರ್ಜುನ್​ ಜನ್ಯಾ ಸಂಗೀತ, ಸಂತೋಷ್​ ರೈ ಪತಾಜೆ ಕ್ಯಾಮೆರಾ ಕೈಚಳಕವಿರಲಿದೆ. ತ್ರಿವಿಕ್ರಮನ ಜೊತೆ ಕುಣಿದಾಡಿರುವ ಶಿವಣ್ಣ, ಚಿತ್ರದ ಪ್ರಮೋಷನ್ಸ್​​ಗೆ ಕಿಕ್​ ಸ್ಟಾರ್ಟ್​​ ಕೊಟ್ಟಿದ್ದಾರೆ.

ರಾಕೇಶ್​​​ ಅರುಂಡಿ, ಫಿಲ್ಮ್ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES