Friday, May 17, 2024

ಸೀತಾಯಣ ಚಿತ್ರಕ್ಕೆ ಪವರ್ ಟಿವಿ ರೇಟಿಂಗ್: 3/5

ಸ್ಯಾಂಡಲ್​​ವುಡ್​​ಗೆ ಲೇಟ್​​ ಆದ್ರೂ ಲೇಟೆಸ್ಟ್​ ಆಗಿ ಸುಪ್ರೀಂ ಹೀರೋ ಶಶಿಕುಮಾರ್​ ಪುತ್ರ ಅಕ್ಷಿತ್​​ ಶಶಿಕುಮಾರ್​​ ಗ್ರ್ಯಾಂಡ್​​ ಎಂಟ್ರಿ ಕೊಟ್ಟಿದ್ದಾರೆ. ಸೀತಾಯಣ ಚಿತ್ರದ ಮೂಲಕ ಕನ್ನಡಕ್ಕೊಬ್ಬ ಶೈನಿಂಗ್​ ಸ್ಟಾರ್​​ ಸಿಕ್ಕಿದ್ದಾರೆ. ಯೆಸ್​ಚೊಚ್ಚಲ ಸಿನಿಮಾದಲ್ಲೇ ಸಿಕ್ಸರ್ ಮೇಲೆ ಸಿಕ್ಸರ್​ ಬಾರಿಸಿದ್ದಾರೆ ಅಕ್ಷಿತ್​​. ಹಾಗಾದ್ರೆ, ಜನ ಮೆಚ್ಚಿದ ಸೀತಾಯಣ ಸಿನಿಮಾದ ಕಥೆಯೇನು..? ಜೂನಿಯರ್ ಸುಪ್ರೀಂ ಹೀರೋ ಖದರ್ ಹೇಗಿದೆ ಅಂತೀರಾ..? ಜಸ್ಟ್ ಹ್ಯಾವ್ ಎ ಲುಕ್.

ಚಿತ್ರ: ಸೀತಾಯಣ

ನಿರ್ದೇಶನ: ಪ್ರಭಾಕರ್​ ಆರಿಪಾಕ

ನಿರ್ಮಾಣ: ಲಲಿತಾ ರಾಜ್ಯಲಕ್ಷ್ಮಿ

ಸಂಗೀತಾ: ಪದ್ಮನಾಭ್​​​ ಭಾರಧ್ವಜ್​

ಕ್ಯಾಮೆರಾ: ದುರ್ಗಪ್ರಸಾದ್ ಕೊಳ್ಳಿ

ತಾರಾಗಣ: ಅಕ್ಷಿತ್​ ಶಶಿಕುಮಾರ್​​, ಅನಹಿತ ಭೂಷಣ್​​, ವಿಕ್ರಮ್​ ಶರ್ಮಾ, ಮಧು ನಂದನ್​​, ಅಜಯ್​ ಘೋಶ್​​, ಬಿತ್ತರಿ ಸತ್ತಿ ಮುಂತಾದವರು.

ಸೀತಾಯಣ  ಸ್ಟೋರಿಲೈನ್

ಟೈಟಲ್​ ಇರೋ ತರಹ ಇದೇನು ಪುರಾಣದ ರಾಮ, ಸೀತೆಯ ಕಥೆಯಲ್ಲ. ಲೈಫ್​​ನಲ್ಲಿ ಅಪ್ಪನ ಆಲದಮರಕ್ಕೆ ಜೋತು ಬೀಳದೆ ತನ್ನದೇ ಸ್ಟಾರ್ಟ್​ ಅಪ್​​ ಬ್ಯುಸಿನೆಸ್​ ಮಾಡ್ಬೇಕು ಅನ್ನೋದು ಹೀರೋ ರಾಹುಲ್​ನ ಪ್ಲ್ಯಾನ್​​​. ಇದಕ್ಕಾಗಿ ಬ್ಯಾಂಕ್​ ಲೋನ್​​ಗೆ ಅಪ್ಲೇ  ಮಾಡ್ತಾನೆ. ಇದ್ರ ಜೊತೆಗೆ ಸೀತಾಗೆ ಮೊದಲ ಲುಕ್​ನಲ್ಲೇ ಚಾಕ್ಲೆಟ್​ ಬಾಯ್ ರಾಹುಲ್​ ಮೇಲೆ ಕ್ರಶ್​​ ಆಗುತ್ತೆ. ಬ್ಯಾಂಕ್​​ ಮ್ಯಾನೇಜರ್​ ಮಗಳಾದ ಸೀತಾಗೂ, ನಾಯಕನಿಗೂ  ಮೂರು ಗಂಟು ಬೀಳೋದೇನೂ ಲೇಟ್​​ ಆಗಲ್ಲ ಬಿಡಿ. ಎಲ್ಲವೂ ಆಲ್​ರೈಟ್​​ ಅನ್ನೋವಾಗ ಸೀತಾ ಪ್ರಗ್ನೆಂಟ್​ ಆಗ್ತಾಳೆ. ಇದರಲ್ಲಿ ಸರ್ಪ್ರೈಸ್​ ಏನಿದೆ ಅಂತೀರಾ..? ಕಹಾನಿ ಮೇ ಟ್ವಿಸ್ಟ್​​ ಅಲ್ಲೇ ಇರೋದು. ಅಪ್ಪ  ಆಗೋ ಅದೃಷ್ಠವಿಲ್ಲದ ಹೀರೋ ಗುಡ್​​ ನ್ಯೂಸ್​ ಕೊಟ್ಟಿದ್ದೇಗೆ..? ಒಂದ್​​ ಕಡೆ ಹೆಂಡತಿ ಮೇಲೆ ಅನುಮಾನ. ಮತ್ತೊಂದ್ಕಡೆ ಆತನ ನ್ಯೂನ್ಯತೆಯ ಮೇಲಿರೋ ಕೋಪ. ಒಟ್ಟಾರೆ, ಈ ಎಲ್ಲಾ ಕನ್ಫ್ಯೂಶನ್​​ ಬ್ಯಾಂಕಾಕ್​​ ಭೂಗತ ಲೋಕಕ್ಕೆ ಕರ್ಕೊಂಡು ಹೋಗುತ್ತೆ. ಡ್ರಗ್ಸ್​​​ ಮೇಲೆ ಟ್ರಾವೆಲ್​​ ಆಗೋ ಕಥೆಗೆ ಪಟಾಯ ನಾಡಲ್ಲಿ ಥ್ರಿಲ್ಲಿಂಗ್​​ ಕ್ಲೈಮ್ಯಾಕ್ಸ್​​ ಸಿಗುತ್ತೆ. ಅದ್ಹೇಗೆ ಅನ್ನೋದನ್ನ ನೀವು ತೆರೆಮೇಲೆಯೇ ನೋಡ್ಬೇಕು.

ಸೀತಾಯಣ  ಆರ್ಟಿಸ್ಟ್ ಪರ್ಫಾಮೆನ್ಸ್

ಅಕ್ಷಿತ್​ ಶಶಿಕುಮಾರ್​. ಸುಪ್ರೀಂ ಹೀರೋ ತನಯ ಅಕ್ಷಿತ್​​, ಚೊಚ್ಚಲ ಚಿತ್ರದಲ್ಲೇ​​ ಮಸ್ತ್​ ಆ್ಯಕ್ಟಿಂಗ್​ ಮಾಡಿದ್ದಾರೆ. ತಂದೆಗೆ ತಕ್ಕ ಮಗ ಅನ್ನೋದನ್ನ 100% ಪ್ರೂವ್​ ಮಾಡಿದ್ದಾರೆ. ಆ್ಯಕ್ಟಿಂಗ್​​, ಆ್ಯಕ್ಷನ್​​​​​ ಸೀಕ್ವೆನ್ಸ್​​​​, ಎಮೋಷನ್ಸ್​​ ಎಲ್ಲಾ ಡಿಪಾರ್ಟ್​​ಮೆಂಟ್​​​ಗಳಲ್ಲೂ ವ್ಹಾವ್ ಅನಿಸ್ತಾರೆ. ಅಂತೂ ಕನ್ನಡಕ್ಕೊಬ್ಬ ಪ್ರಾಮಿಸಿಂಗ್​ ಹೀರೋ ಸಿಕ್ಕಿದ್ದಾರೆ. ಅಕ್ಷಿತ್​​ಗೆ ಸೀತಾಯಣ ಮೊದಲ ಸಿನಿಮಾ. ಹಾಗಾಗಿ ಚಿತ್ರರಸಿಕರಿಗೆ ಸಿಕ್ಕಾಪಟ್ಟೆ ಕೂತೂಹಲವಿತ್ತು. ಮೊದಲ ಸಿನಿಮಾ ಆಗಿರೋದ್ರಿಂದ, ಸಿಲ್ವರ್​ ಸ್ಕ್ರೀನ್​ ಮೇಲೆ ಹೇಗೆ ಮ್ಯಾಜಿಕ್​ ಮಾಡ್ತಾರೋ ಅನ್ನೋ ಪ್ರಶ್ನೆ ಕಾಡಿತ್ತು. ಆದ್ರೆ, ಅಕ್ಷಿತ್​​ ಪ್ರತಿ ಫ್ರೇಮಿನಲ್ಲೂ ಸ್ಟಾರ್​ ನಟನಂತೆ ಮಿಂಚಿದ್ದಾರೆ. ಹಾವ, ಭಾವ, ಬಾಡಿ ಲಾಂಗ್ವೇಜ್​​ ಎಲ್ಲವೂ ಪಾತ್ರಕ್ಕೆ ತಕ್ಕಂತೆ ಸರಿದೂಗಿಸಿದ್ದಾರೆ.

ನಾಯಕಿಯಾಗಿ ಅನಹಿತ ಸಿನಿಮಾದ ಗ್ಲಾಮರ್ ಹೆಚ್ಚಿಸಿದ್ದಾರೆ. ಬಬ್ಲಿ ಬಬ್ಲಿಯಾಗಿ ಕಾಣಿಸೋ ಅನಹಿತಗೆ ಇದು ಮೊದಲ ಸಿನಿಮಾ. ಅನಹಿತ ಯಾವ ಸೀನ್​ಗೂ ಸರ್ಕಸ್​​ ಮಾಡಿದ್ದಾರೆ ಅಥ್ವಾ ಸೈಕಲ್ ಹೊಡೆದಿದ್ದಾರೆ ಅನಿಸಲ್ಲ. ಅಷ್ಟು ಲೀಲಾಜಾಲವಾಗಿ ಪ್ರೇಕ್ಷಕನಿಗೆ ಇಷ್ಟವಾಗೋ ರೀತಿ ನಮ್ಮದೇ ಮನೆಯ ಮುದ್ದಿನ ಮಗಳಂತೆ ಕಾಣ್ತಾರೆ.

ಅಕ್ಷಿತ್​​ಗೆ ಸ್ನೇಹಿತನಾಗಿ ಮಧು ನಂದನ್​​ ಸಾಥ್​​ ಕೊಟ್ಟಿದ್ದಾರೆ. ಚಿತ್ರದ ಕೊನೆಯವರೆಗೂ ಮಧುನಂದನ್​​ ಹೀರೋ ಬೆನ್ನಿಗೆ ನಿಲ್ಲುತ್ತಾರೆ. ಗೆಳೆಯನಿಗಾಗಿ ತನ್ನ ಪ್ರೀತಿಯ ಹೆಂಡತಿಯನ್ನೂ ತ್ಯಾಗ  ಮಾಡಲು ಮಧುನಂದನ್​ ಸಿದ್ಧ. ನಾಯಕಿಯ ತಂದೆಯಾಗಿ  ಅಜಯ್​​ ಘೋಶ್​​ ರೆಸ್ಪಾನ್ಸಿಬಲ್​​ ಫಾದರ್​ ಪಾತ್ರ. ಜೊತೆಗೆ ಅವಳ ಎಮೋಷನ್ಸ್​​ಗಳನ್ನು ರೆಸ್ಪೆಕ್ಟ್​ ಮಾಡೋ ಪ್ರೀತಿಯ ತಂದೆಯಾಗಿ ಎಲ್ಲರಿಗೂ ಇಷ್ಟವಾಗ್ತಾರೆ.

ಸೀತಾಯಣ ಪ್ಲಸ್ ಪಾಯಿಂಟ್ಸ್ :

  1. ಚಿತ್ರದ ಥ್ರಿಲ್ಲಿಂಗ್​ ಎಲಿಮೆಂಟ್ಸ್
  2. ಅಕ್ಷಿತ್​​​​ ಪ್ರಾಮಿಸಿಂಗ್​ ಅಭಿನಯ
  3. ನೀರಸ ಎನಿಸದ ಕಥೆ
  4. ಬ್ಯಾಂಕಾಕ್​​ ಲೊಕೇಷನ್ಸ್​​
  5. 5.ಥ್ರಿಲ್ಲಿಂಗ್​ ಕ್ಲೈಮ್ಯಾಕ್ಸ್​
  6. ಕಾಮಿಡಿ ಕಚಗುಳಿ

ಸೀತಾಯಣ ಮೈನಸ್ ಪಾಯಿಂಟ್ಸ್

ಟಾಪ್​ ಒನ್​​ ಸಿನಿಮಾ ಆಗಿದ್ರೂ, ತಪ್ಪು ಹುಡುಕೋದು ಸಿಕ್ಕಾಪಟ್ಟೆ ಸುಲಭದ ಕೆಲಸ ಅಲ್ಲವೇ..? ಆದ್ರೆ, ಮೊದಲ ಪ್ರಯತ್ನದಲ್ಲೇ ಪ್ರೇಕ್ಷಕರ ದಿಲ್​ ಗೆಲ್ಲೋದು ತಮಾಷೆಯ ಮಾತಲ್ಲ. ಚಿತ್ರದ ಮ್ಯೂಸಿಕ್​​ ರೀಚ್​ ಆಗಿಲ್ಲ. ತಾರಾಗಣ​ ದೊಡ್ಡ ಮಟ್ಟದಲ್ಲಿದ್ದಿದ್ರೆ ಅಥ್ವಾ ಕನ್ನಡದ ಕಲಾವಿದರೇ ಇದ್ದಿದ್ರೆ, ಗೆಲುವಿನ ಹಾದಿ ಇನ್ನೂ ಸುಲಭವಾಗ್ತಿತ್ತು ಅನ್ನೋದು ನಮ್ಮ ಲೆಕ್ಕಾಚಾರ. ಇಷ್ಟು ಹೊರತುಪಡಿಸಿದ್ರೆ, ವೀಕೆಂಡ್​ಗೆ ಒಂದೊಳ್ಳೆ ಸಿನಿಮಾ ನೋಡಬೇಕು ಅನ್ನೋರು ಫ್ಯಾಮಿಲಿ ಜೊತೆ ಕೂತು ನೋಡಬಹುದಾದ ವಂಡರ್​​ಫುಲ್​​ ಚಿತ್ರ ಈ ಸೀತಾಯಣ.

ಸೀತಾಯಣ ಚಿತ್ರಕ್ಕೆ ಪವರ್ ಟಿವಿ ರೇಟಿಂಗ್: 3/5

ಸೀತಾಯಣ ಫೈನಲ್ ಸ್ಟೇಟ್​ಮೆಂಟ್

ಸ್ಯಾಂಡಲ್​ವುಡ್​​ ಸ್ಟಾರ್​ ಕಿಡ್​​ಗಳೆಲ್ಲಾ ಅದ್ಧೂರಿ ಚಿತ್ರಗಳ ಮೂಲಕ ಗ್ರ್ಯಾಂಡ್​ ಎಂಟ್ರಿ ಕೊಟ್ರು. ಆದ್ರೆ, ನಮ್​ ಸುಪ್ರೀಂ ಹೀರೋ ಅಕ್ಷಿತ್​​ಕುಮಾರ್​ ಸಖತ್​ ಪ್ಲ್ಯಾನ್​ ಮಾಡಿ, ಗಟ್ಟಿ ಕಥೆಯೊಂದಿಗೆ ಗಾಂಧಿನಗರಕ್ಕೆ ಬಲವಾದ ಪ್ರಯೋಗದಿಂದ ಕಾಲಿಟ್ಟಿದ್ದಾರೆ. ಹೌದು. ಜನರ ನಿರೀಕ್ಷೆ ಸುಳ್ಳಾಗಿಲ್ಲ. ಅಭಿನಯವನ್ನು ಚೆನ್ನಾಗಿ ಕಲಿತು, ಅದ್ಭುತ ಕಲಾವಿದನಾಗಿಯೇ ಅಕ್ಷಿತ್​​ ಶಶಿಕುಮಾರ್​​ ಹೊರ ಹೊಮ್ಮಿದ್ದಾರೆ.

ಇಂದಿನ ಯುವಪೀಳಿಗೆ ಡ್ರಗ್ಸ್​​ಗೆ ಅಡಿಕ್ಟ್​ ಆಗಿರೋದು ಹೊಸ ವಿಷ್ಯ ಏನಲ್ಲ. ಈ ಚಿತ್ರದಲ್ಲಿ ಡ್ರಗ್ಸ್​​ ಬಗ್ಗೆಯೂ ಹೇಳಲಾಗಿದೆ. ಚಿತ್ರದ ಸಸ್ಪೆನ್ಸ್​ನ ಕೊನೆಯವರೆಗೂ ಉಳಿಸಿಕೊಂಡಿರೋ ಸದಭಿರುಚಿಯ ಸಿನಿಮಾ ಇದು. ಚಿತ್ರದ ಸಂಭಾಷಣೆ ಹಿತವಾಗಿದೆ. ರೊಮ್ಯಾಂಟಿಕ್​​ ಸಾಂಗ್​​ನಲ್ಲಿರೋ ರೋಮ್ಯಾನ್ಸ್​ ಸೀನ್ಸ್​ಗಳು ಮುಜುಗರ ಅನಿಸೋದಿಲ್ಲ. ಅಕ್ಷಿತ್​​ ಡೈಲಾಗ್ಸ್​​ ಹೊಡೀತಿದ್ರೆ ಮಾಸ್​​ ಹೀರೋ ಆಗಿ ಮಿಂಚ್ತಾರೆ. ಅಮುಲ್​​ಬೇಬಿ ತರಹ ಕಂಡ್ರೂ ಸೂಪರ್​ ಹೀರೋ ತರಹ ಆ್ಯಕ್ಟ್​ ಮಾಡಿದ್ದಾರೆ. ಒಟ್ನಲ್ಲಿ ಫುಲ್​ ಆಫ್​​ ಎಂಟರ್ಟೈನ್​ಮೆಂಟ್​​ ಸಿನಿಮಾ ಸೀತಾಯಣ.

ರಾಕೇಶ್​​ ಆರುಂಡಿ, ಫಿಲ್ಮ್ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES