Saturday, May 18, 2024

ಬಿಡಿಎ ಅಧ್ಯಕ್ಷರ ವಿರುದ್ಧ ಲೀಗಲ್ ಫೈಟ್‌ಗಿಳಿದ ಎಂಫಾರ್ ಕಂಪನಿ

ಬೆಂಗಳೂರು : ಬಿಡಿಎ ಕಾಂಪ್ಲೆಕ್ಸ್ ಗಳ ನಿರ್ಮಾಣದಲ್ಲಿ ಲೂಟಿಗಿಳಿದಿದ್ದ ಗುತ್ತಿಗೆ ಕಂಪನಿಗಳಿಗೆ ಶಾಕ್ ಹೊಡೆದಿದೆ. ಲಾಬಿಗೆ ಮಣಿದು ಬಿಡಿಎಗೆ ಕೋಟಿ ಕೋಟಿ ಲಾಸ್ ಮಾಡಲು ಹೊರಟಿದ್ದ ಅಧಿಕಾರಿಗಳಿಗೂ ಚಳಿ ಬಿಟ್ಟಿದೆ.  ಆರು ಬಿಡಿಎ ಕಾಂಪ್ಲೆಕ್ಸ್ ಗಳ ಮರು ಅಭಿವೃದ್ದಿಗೆ ಬಿಡಿಎ ಟೆಂಡರ್ ಕರೆದಿತ್ತು. ಟೆಂಡರ್ ಪ್ರಕಾರ ಕಾಂಪ್ಲೆಕ್ಸ್‌ಗಳಿಂದ ಬರೋ ಆದಾಯದಲ್ಲಿ 70% ಎಂಫಾರ್ ಕಂಪನಿಗಂತೆ. ಬಿಡಿಎಗೆ ಮಾತ್ರ 30% ಆದಾಯವಂತೆ. ಅದೂ 30 ವರ್ಷಗಳ ಲೀಸ್ ಪೀರಿಯೆಡ್. ಇಂಥ ಅವೈಜ್ಞಾನಿಕ ಪ್ರಾಜೆಕ್ಟ್ ಗೆ ಕೈಹಾಕಿ ಬಿಡಿಎ ಅಧಿಕಾರಿಗಳು ಛೀಮಾರಿ ಹಾಕಿಸಿಕೊಂಡ್ರು. ಈ ಗೋಲ್‌ಮಾಲ್ ತಡೆಗಟ್ಟಲು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಮುಂದಾಗಿದ್ದು, ಬಿಡಿಎಗೆ ಆದಾಯದಲ್ಲಿ ಕನಿಷ್ಠ 45% ಸಿಗಬೇಕು ಅಂತಾ ತಡೆ ಹಾಕಿದ್ರು. ಇದರ ವಿರುದ್ಧ ಎಂಫಾರ್ ಕಂಪನಿ ಕಾನೂನು ಹೋರಾಟಕ್ಕೆ ಮುಂದಾಗಿದ್ದು, ಲೀಗಲ್ ನೋಟೀಸ್ ಕೂಡ ಕಳಿಸಿದೆ.

2018ರಲ್ಲಿ ಸದಾಶಿವನಗರ, ಆರ್.ಟಿ.ನಗರ, ಆಸ್ಟಿನ್ ಟೌನ್, HSR ಲೇಔಟ್, ವಿಜಯನಗರ, ಕೋರಮಂಗಲದಲ್ಲಿ ಕಮರ್ಶಿಯಲ್ ಕಾಂಪ್ಲೆಕ್ಸ್ ಮರು ಅಭಿವೃದ್ದಿಗೆ ಬಿಡಿಎ ಕೈ ಹಾಕಿತ್ತು. ಆಗ ಯಾರದ್ದೋ ಲಾಬಿಗೆ ಮಣಿದು ಬಿಡಿಎ ಅಧಿಕಾರಿಗಳು ಟೆಂಡರ್ ಮಾಡಿಕೊಂಡಿದ್ರು. ಈ ಆರು ಕಡೆ ನಿರ್ಮಾಣ ಆಗ್ತಿರೋ ಕಾಂಪ್ಲೆಕ್ಸ್ ಜಾಗ ಸುಮಾರು ಆರು ಎಕರೆಯಷ್ಟಿದೆ. ಸರಿ ಸುಮಾರು ಐದು ಸಾವಿರ ಕೋಟಿ ಬೆಲೆ ಬಾಳುವ ಜಾಗ. ಇಂಥಾ ಅಮೂಲ್ಯ ಜಾಗವನ್ನು ಗುತ್ತಿಗೆ ಕಂಪನಿಗಳಿಗೆ ಕೊಟ್ಟು ಬಿಡಿಎ ಮೂರ್ಖತನ ತೋರ್ತಿದೆ.

ಆರು ಕಾಂಪ್ಲೆಕ್ಸ್‌ಗಳ ಮರು ಅಭಿವೃದ್ದಿಗೆ ಸಾವಿರ ಕೋಟಿ ಖರ್ಚಾಗಬಹುದು. ಹಾಳು ಹೌಸಿಂಗ್ ಪ್ರಾಜೆಕ್ಟ್‌ಗಳನ್ನು ಮಾಡಿ ಸಾವಿರಾರು ಕೋಟಿ ಲಾಸ್ ಮಾಡೋ ಬದಲು, ಹೈಟೆಕ್ ಟಚ್ ಕೊಡೋ ಕೆಲಸವನ್ನು ಬಿಡಿಎನೇ ಮಾಡಬಹುದು. ಅದ್ಯಾವುದನ್ನೂ ಬಿಡಿಎ ಅಧಿಕಾರಿಗಳು ಮಾಡ್ತಾನೇ ಇಲ್ಲ.ಈಗಲಾದ್ರೂ ಎಚ್ಚೆತ್ತುಕೊಂಡು ಪ್ರಾಧಿಕಾರದ ಬೊಕ್ಕಸ ತುಂಬಿಸಲು ಕ್ರಮ ಕೈಗೊಳ್ಳಬೇಕು.

RELATED ARTICLES

Related Articles

TRENDING ARTICLES