Wednesday, January 22, 2025

ರಾಜಧಾನಿ ಸಮೀಪವೇ ಮೇಳೈಸಿದ ಸುಂದರ ಜಲಪಾತ..!

ಚಿಕ್ಕಬಳ್ಳಾಪುರ : ಕಳೆದ ಎರಡ್ಮೂರು ದಿನಗಳಿಂದ ಸುರಿದ ಧಾರಾಕಾರ ಮಳೆಗೆ, ಜಲಾಶಯ ತುಂಬಿ ಕೋಡಿ ಹರಿಯುತ್ತಿದೆ. ಭೂಮಟ್ಟದಿಂದ ಸುಮಾರು ನೂರು ಅಡಿಗಳಷ್ಟು ಮೇಲಿನಿಂದ, ಜಲಾಶಯ ತುಂಬಿ ಕೋಡಿ ಹರಿಯುತ್ತಿದ್ದು, ಮೇಲಿನಿಂದ ನೀರು ಕೆಳಗೆ ಧುಮ್ಮಿಕ್ಕೋ ಸೌಂದರ‍್ಯ ನೋಡಲು ಎರಡು ಕಣ್ಣುಗಳೇ ಸಾಲದು. ಇನ್ನು ಶ್ರೀನಿವಾಸಸಾಗರ ಸಾಗರ ಜಲಾಶಯ ತುಂಬಿ ಕೋಡಿ ಹರಿಯುತ್ತಿರುವ ಸುದ್ದಿ ಕೇಳಿದ ಸುತ್ತಮುತ್ತಲ ಗ್ರಾಮಸ್ಥರು, ಮುಗಿಬಿದ್ದು ಜಲಾಶಯದ ನೀರಿನಲ್ಲಿ ಮಿಂದೇಳುತ್ತಿದ್ದಾರೆ.

ಇನ್ನು ಶ್ರೀನಿವಾಸ ಸಾಗರ ಜಲಾಶಯ‌ ಬೆಂಗಳೂರಿನ ಹೆಚ್.ಎನ್.ವ್ಯಾಲಿಯ ಶುದ್ಧೀಕರಿಸಿದ‌ ಕೊಳಚೆ ನೀರಿನ ಜೊತೆಗೆ ಮಳೆಯಿಂದ ತುಂಬಿ ಕೋಡಿಯಾಗಿ ಹರಿಯುತ್ತೆ ಅನ್ನೋದನ್ನ ಅರಿತ ಸ್ಥಳೀಯರು ಹಾಗೂ ಬೆಂಗಳೂರಿನ ಜನ, ನಂದಿಗಿರಿಧಾಮದ ಬದಲು ಈಗ ಶ್ರೀನಿವಾಸಸಾಗರ ಜಲಾಶಯದತ್ತ ಆಗಮಿಸುತ್ತಿದ್ದಾರೆ. ಇದ್ರಿಂದ ಜಲಾಶಯದ ಬಳಿ ಜನ ಜಾತ್ರೆ ಸೇರುತ್ತಿದ್ದಾರೆ.

ಒಟ್ನಲ್ಲಿ ಬೆಂಗಳೂರಿನ ಕೊಳಚೆ ನೀರಿನಿಂದ ತುಂಬಿದ್ದ ಶ್ರೀನಿವಾಸ ಸಾಗರ ಕೆರೆ ನೀರು ಹಾಗೂ ಮಳೆ ನೀರು ಹರಿದ ಪರಿಣಾಮ ಜಲಾಶಯ ತುಂಬಿ ಹರಿಯುತ್ತಿವುದರಿಂದ ಜನ ಮರಳು ಜಾತ್ರೆ ಮರಳೋ ಅನ್ನೋ ಹಾಗೇ ಜನ ನೀರಿನಲ್ಲಿ ಮಿಂದೇಳುತ್ತಿದ್ದಾರೆ.

 

RELATED ARTICLES

Related Articles

TRENDING ARTICLES