ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕರೆಂಟ್ ಬಿಲ್ ಹೆಚ್ಚಳ ಆಯ್ತು ಇದೀಗ ನೀರಿನ ದರ ಏರಿಕೆಯಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ.
8 ವರ್ಷದ ಬಳಿಕ ಕಾವೇರಿ ನೀರಿನ ದರ ಪರಿಷ್ಕರಣೆಗೆ ಅಸ್ತು ಎನ್ನುತ್ತಾ ಸರ್ಕಾರ..? ನೀರಿನ ದರ ಪರಿಷ್ಕರಣೆಗೆ ಮತ್ತೆ ಪ್ರಸ್ತಾವನೆ ಸಲ್ಲಿಸಿದ BWSSB ಗೃಹ ಬಳಕೆಯ ನೀರಿನ ದರ ಶೇ.16ರಷ್ಟು ಹೆಚ್ಚಳ ಪ್ರಸ್ತಾವನೆ ಮಾಡಲಾಗಿದ್ದು, ವಾಣಿಜ್ಯ ಬಳಕೆಗೆ ಶೇ.21 ರಷ್ಟು ದರ ಹೆಚ್ಚಳ ಮಾಡಿದ್ದಾರೆ.
ಇನ್ನು, ಜಲಮಂಡಳಿ ನಿರ್ವಹಣೆ ವೆಚ್ಚ ಸರಿದೂಗಿಸಲು ನೀರಿನ ದರ ಪ್ರಸ್ತಾವನೆ ಮಾಡಲಾಗಿದ್ದು, ಬೆಂಗಳೂರಿನಲ್ಲಿ 2014ರಿಂದಲೂ ನೀರಿನ ದರ ಏರಿಕೆ ಮಾಡಿಲ್ಲ. ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟರೆ ನೀರಿನ ದರ ಪರಿಷ್ಕರಣೆ ಫಿಕ್ಸ್ ಮಾಡಿದ್ದು, ಈಗಾಗಲೇ ನಾಲ್ಕೈದು ಬಾರಿ BWSSB ಪ್ರಸ್ತಾವನೆ ಸಲ್ಲಿಸಿದೆ. ಇದೀಗ 5ನೇ ಬಾರಿ ದರ ಪರಿಷ್ಕರಣೆ ಮಾಡುವಂತೆ ಪ್ರಸ್ತಾಪಿಸಲಾಗಿದ್ದು, BWSSB ಪ್ರಸ್ತಾವನೆಗೆ ಗ್ರೀನ್ ಸಿಗ್ನಲ್ ಕೊಟ್ಟೇ ಬಿಡುತ್ತಾ ಸರ್ಕಾರ ಎಂದು ಕಾದು ನೋಡಬೇಕಿದೆ.