Friday, May 17, 2024

ಆಸ್ಕರ್​ನತ್ತ ರಾಕಿಭಾಯ್.. 100 ಪುಷ್ಪ = ಒಂದು KGF

ಕೆಜಿಎಫ್ 400 ಗ್ರಾಂ ಚಿನ್ನವಾದ್ರೆ, ಕೆಜಿಎಫ್ ಎರಡನೇ ಚಾಪ್ಟರ್ 40ಕೆಜಿ ಚಿನ್ನ. ಇದ್ರಲ್ಲಿ ಯಾವುದೇ ಡೌಟ್ ಇಲ್ಲ. ಕನ್ನಡ ಸಿನಿಮಾಗಳ ಬಗ್ಗೆ ಲಘುವಾಗಿ ಮಾತಾಡ್ತಿದ್ದ ಮಂದಿ ಈಗ ಬರ್ನಲ್​ನ ಹುಡಿಕಿಕೊಂಡು ಹೋಗುವಂತಾಗಿದೆ. ಇಂಟರ್​ನ್ಯಾಷನಲ್ ಕ್ರಿಕೆಟರ್ಸ್​ನಿಂದ ಹಿಡಿದು, ಸೂಪರ್ ಸ್ಟಾರ್ ರಜಿನಿವರೆಗೆ ಎಲ್ಲೆಲ್ಲೂ ಕರುನಾಡ ಗೋಲ್ಡನ್ ಸ್ಟೋರಿಯದ್ದೇ ಸದ್ದು.

ಇಡೀ ದೇಶ ಮೆಚ್ಚೋ ಅಂತಹ ಸಿನಿಮಾ ಮಾಡ್ತೀವಿ. ಅಷ್ಟೇ ಅಲ್ಲ, ಶಿಳ್ಳೆ ಚಪ್ಪಾಳೆ ಸಮೇತ ಸೆಲ್ಯೂಟ್ ಹೊಡೆಯೋ ಹಾಗೆ ಮಾಡ್ತೀವಿ ಅಂತಿದ್ರು ರಾಕಿಭಾಯ್ ಯಶ್. ಅದೀಗ ನಿಜವಾಗಿದೆ. ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ ಸ್ವಾಭಿಮಾನಿ ಕನ್ನಡಿಗ ಯಶ್. ಇದು ಕೆಜಿಎಫ್ ಅನ್ನೋ ಒಂದು ಸಿನಿಮಾದಿಂದ ಸಾಧ್ಯವಾಗಿದೆ ಅಂದ್ರೆ, ನಿಜಕ್ಕೂ ಅದ್ಭುತ, ಅಮೋಘ, ಅದ್ವಿತೀಯ.

ವಿಶ್ವದಾದ್ಯಂತ ಕರುನಾಡ ಚಿನ್ನದ ಕಥೆಯನ್ನ ಹೊಳೆಯುವಂತೆ ಮಾಡಿದ ಶ್ರೇಯ ಪ್ರಶಾಂತ್ ನೀಲ್, ಯಶ್ ಹಾಗೂ ವಿಜಯ್ ಕಿರಗಂದೂರು ಅನ್ನೋ ಈ ತ್ರಿಮೂರ್ತಿಗಳಿಗೆ ಸಲ್ಲುತ್ತದೆ. ಕಾರಣ ಅವ್ರ ವರ್ಷಗಳ ತಪಸ್ಸಿನ ಫಲವಿದು. ಬೆವರು, ರಕ್ತ, ಕಣ್ಣೀರಿನ ಪ್ರತಿಫಲವಿದು. ಇಟ್ಟ ಗುರಿಯತ್ತ ದಿಟ್ಟ ಹೆಜ್ಜೆ ಹಾಕಿದ ಸಾಹಸಗಾಥೆಯಿದು.

ಮೊದಲ ದಿನ ಪ್ಯಾನ್ ಇಂಡಿಯಾದಾದ್ಯಂತ ಬರೋಬ್ಬರಿ 134.5 ಕೋಟಿ ಗಳಿಸಿದ್ದ ಕೆಜಿಎಫ್ ಚಾಪ್ಟರ್ 2, ಎರಡನೇ ದಿನದ ಅಂಕಿ ಅಂಶಗಳ ಪ್ರಕಾರ 240 ಕೋಟಿಯ ಗರಿ ದಾಟಿದೆ. ಇದು ನಿಜಕ್ಕೂ ಕನ್ನಡ ಸಿನಿಮಾದ ಅಶ್ವಮೇಧಯಾಗ ಅಂದ್ರೆ ತಪ್ಪಾಗಲ್ಲ. ಬಾಹುಬಲಿ, ತ್ರಿಬಲ್ ಆರ್ ಸಿನಿಮಾಗಳ ಕಲೆಕ್ಷನ್​ನ ಮೀರಿಸಿ ಮುನ್ನುಗ್ಗುತ್ತಿರೋ ಕನ್ನಡದ ಮಾಸ್ಟರ್​ಪೀಸ್​ ಅಕ್ಷರಶಃ ಪ್ಯಾನ್ ಇಂಡಿಯಾ ತೂಫಾನ್.

ಪಕ್ಕದ ಟಾಲಿವುಡ್​ನಿಂದ ತಯಾರಾದ ಪುಷ್ಪ ಅನ್ನೋ ಸಿನಿಮಾ, ರಿಲೀಸ್​ಗೂ ಮುನ್ನ ನಡೆದ ಇವೆಂಟ್ ಒಂದರಲ್ಲಿ ಉಪ್ಪೆನ ಡೈರೆಕ್ಟರ್ ಬುಚ್ಚಿಬಾಬು ಒಂದು ವಿವಾದಾತ್ಮಕ ಹೇಳಿಕೆ ನೀಡಿದ್ರು. ಹತ್ತು ಕೆಜಿಎಫ್​ಗಳು ಒಂದು ಪುಷ್ಪಕ್ಕೆ ಸಮ ಅಂದಿದ್ರು. ಆದ್ರೀಗ ಸಿನಿಮಾದ ರೇಂಜ್, ಕ್ರೇಜ್ ನೋಡಿದ್ರೆ ಕೆಜಿಎಫ್ ಅನ್ನೋ ಸುಂಟರಗಾಳಿಗೆ ಪುಷ್ಪ ತೂರಿಕೊಂಡು ಹೋಗಿದೆ.

ಅದಕ್ಕೆ ನಮ್ಮ ಯಶ್ ಡೈಹಾರ್ಡ್​ ಫ್ಯಾನ್ ಒಬ್ರು ಕೌಂಟರ್ ಕೂಡ ನೀಡಿದ್ದು, ಅದ್ಯಾವನೋ ಹತ್ತು ಕೆಜಿಎಫ್ ಒಂದು ಪುಷ್ಪಗೆ ಸಮ ಅಂದಿದ್ದ. ಆದ್ರೆ ಈಗ ಬಂದು ಕೆಜಿಎಫ್ ನೋಡೋಕೆ ಹೇಳಿ, ನೂರು ಪುಷ್ಪ ಈಸ್ ಈಕ್ವಲ್ ಟು ಒಂದು ಕೆಜಿಎಫ್ ಅಂತ ಹೆಮ್ಮೆಯಿಂದ ಕಾಲರ್ ಎತ್ತಿ ಹೇಳಿದ್ದಾರೆ. ಇದು ಎಲ್ರೂ ಒಪ್ಪಲೇಬೇಕಾದ ನಗ್ನ ಸತ್ಯವೂ ಹೌದು.

ಕನ್ನಡಿಗರಷ್ಟೇ ಅಲ್ಲ, ಪಕ್ಕದ ತೆಲುಗು, ತಮಿಳು, ಮಲಯಾಳಂ, ಸಾಲದು ಅಂತ ಬಾಲಿವುಡ್ ಮಂದಿ ಕೂಡ ನಮ್ಮ ಕೆಜಿಎಫ್ನ ಇದೊಂದು ಮಹೋನ್ನತ ಸಿನಿಮಾ ಅಂತ ಒಪ್ಪಿಕೊಂಡಿದ್ದಾರೆ. ಅಪ್ಪಿಕೊಳ್ತಿದ್ದಾರೆ. ಬಾಕ್ಸ್ ಆಫೀಸ್​ನಲ್ಲಿ ಸೌಂಡ್ ಮಾಡಿಸ್ತಿದ್ದಾರೆ. ವೀಕ್ಷಕರಷ್ಟೇ ಅಲ್ಲ, ವಿಮರ್ಶಕರೂ ಸಿನಿಮಾ ನೋಡಿ ಥ್ರಿಲ್ ಆಗಿ, ಇದಕ್ಕೆ ರಿವ್ಯೂ ಬೇಕಿಲ್ಲ. ಮಾನ್​ಸ್ಟರ್ ಬ್ಲಾಕ್ ಬಸ್ಟರ್ ಅಂತಿದ್ದಾರೆ. ಇನ್ನೂ ಕೆಲವರು ಇದು ಆಸ್ಕರ್​ಗೆ ನಾಮನಿರ್ದೇಶನಗೊಳ್ಳಬೇಕು ಅಂತ ಅಭಿಪ್ರಾಯ ಪಡ್ತಿದ್ದಾರೆ.

ಮೇಕಿಂಗ್​ನಲ್ಲಿ ಹೊಸತನವಿದೆ. ಪಾತ್ರಗಳ ನಿರೂಪಣೆಯಲ್ಲಿ ವಿಭಿನ್ನತೆ ಇದೆ, ಬ್ಯಾಗ್ರೌಂಡ್ ಮ್ಯೂಸಿಕ್, ಸಿನಿಮಾಟೋಗ್ರಫಿ ನೆಕ್ಸ್ಟ್ ಲೆವೆಲ್​ಗಿದೆ ಅಂದಾಗ ಇಂತಹ ಮೈಲಿಗಲ್ಲು ಸಿನಿಮಾ ಆಸ್ಕರ್​ಗೆ ಆಯ್ಕೆ ಆಗೋದ್ರಲ್ಲಿ ತಪ್ಪೇ ಇಲ್ಲ.

ಇಂಟರ್​ನ್ಯಾಷನಲ್ ಕ್ರಿಕೆಟರ್ ಬಾಯಲ್ಲಿ ಯಶ್ ಡೈಲಾಗ್

ಕೆಜಿಎಫ್ ಡೈಲಾಗ್ಸ್ ಕೇಳ್ತಿದ್ರೆ ಮೈ ರೋಮಾಂಚನಗೊಳ್ಳಲಿದೆ. ಒಂದೊಂದು ಡೈಲಾಗ್ ಕೂಡ ಶಿಳ್ಳೆ ಚಪ್ಪಾಳೆ ಗಿಟ್ಟಿಸುತ್ತೆ. ಪ್ರೇಕ್ಷಕರು ಹುಚ್ಚೆದ್ದು ಕುಣಿಯುವಂತೆ ಮಾಡಿವೆ ಯಶ್ ಬರೆದ ಮಾಸ್ & ಕ್ಲಾಸ್ ಡೈಲಾಗ್ಸ್. ಅವ್ರು ಬರೆದ್ರು ಅನ್ನೋದಕ್ಕಿಂತ ಅವ್ರ ಬಾಯಿಂದ ಒಂದು ರೇಂಜ್​ನ ಗತ್ತಿನಲ್ಲಿ ಕೇಳೋದೇ ಮಜಾ.

ಇದೀಗ ಕೆಜಿಎಫ್ ಡೈಲಾಗ್ಸ್ ಸಿಕ್ಕಾಪಟ್ಟೆ ಟ್ರೆಂಡ್ ಆಗ್ತಿದ್ದು, ಸಾಕಷ್ಟು ಮಂದಿ ರೀಲ್ಸ್ ಮಾಡಲಾರಂಭಿಸಿದ್ದಾರೆ. ಶ್ರೀಸಾಮಾನ್ಯರು, ಫ್ಯಾನ್ಸ್ ರೀಲ್ಸ್ ಮಾಡೋದು ಸರ್ವೇ ಸಾಮಾನ್ಯ. ಆದ್ರೆ ಇಂಟರ್​ನ್ಯಾಷನಲ್ ಕ್ರಿಕೆಟರ್ ಕೂಡ ಅದನ್ನ ರೀಲ್ಸ್ ಮಾಡಿರೋದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡ್ತಿದೆ.

ಆಸ್ಟ್ರೇಲಿಯನ್ ಕ್ರಿಕೆಟರ್ ಡೇವಿಡ್ ವಾರ್ನರ್ ವಿಶ್ವ ದರ್ಜೆಯ ಕ್ರಿಕೆಟರ್. ಇವ್ರು ಐಪಿಎಲ್​ನಿಂದ ನಮ್ ಇಂಡಿಯಾದಲ್ಲೂ ಸಿಕ್ಕಾಪಟ್ಟೆ ಫೇಮಸ್. ಅದ್ರಲ್ಲೂ ನಮ್ಮ ಕೆಜಿಎಫ್ ಚಿತ್ರದ ಯಶ್ ಹೊಡೆಯೋ ವೈಲೆನ್ಸ್ ಡೈಲಾಗ್ ಹೊಡೆಯೋ ಮೂಲಕ ರೀಲ್ಸ್ ಮಾಡಿ ಹಾಕಿರೋದು ಸಖತ್ ಇಂಪ್ರೆಸ್ಸೀವ್ ಅನಿಸಿದೆ.

ಸೂಪರ್ ಸ್ಟಾರ್ ರಜಿನೀಕಾಂತ್​ ಕೂಡ ಕೆಜಿಎಫ್ ಚಾಪ್ಟರ್ 2ಗೆ ಕ್ಲೀನ್ ಬೋಲ್ಡ್ ಆಗಿದ್ದಾರೆ ಅನ್ನೋದು ಡಬಲ್ ಸಂಭ್ರಮ. ಹೌದು.. ಚೆನ್ನೈನಲ್ಲಿ ಸಿನಿಮಾ ನೋಡಿರೋ ತಲೈವಾ ರಜಿನಿ, ನಿರ್ಮಾಪಕರಿಗೆ ಕರೆ ಮಾಡಿ ಶುಭಾಶಯ ತಿಳಿಸಿದ್ದಾರೆ. ಇದಕ್ಕಿಂತ ಗೆಲುವು ಮತ್ತೇನಿದೆ ಅಲ್ಲವೇ..? ಇಷ್ಟಕ್ಕೂ ರಜಿನಿ ಹೇಳಿದ್ದೇನು ಅಂತೀರಾ..? ಜಸ್ಟ್ ವಾಚ್.

ರಜಿನಿ: ಹೆಲೋ…

ವಿಜಯ್ ಕಿರಗಂದೂರು: ಹೆಲೋ..ಸರ್​​​..?

ರಜಿನಿ: ನಾನು ರಜಿನೀಕಾಂತ್ ಮಾತಾಡ್ತಿದ್ದೀನಿ ವಿಜಯ್ ಅವ್ರೇ

ವಿಜಯ್ ಕಿರಗಂದೂರು: ಸರ್.. ಸರ್​​ಪ್ರೈಸಿಂಗ್ ಆಗಿದೆ

ರಜಿನಿ: ಹಾ ಹಾ ಹಾ.. ಸಿನಿಮಾ ನೋಡಿದೆ. ಬಹಳ ಚೆನ್ನಾಗಿ ಮಾಡಿದ್ದೀರಿ. ತುಂಬಾ ಖುಷಿ ಆಯ್ತು

ವಿಜಯ್ ಕಿರಗಂದೂರು: ನೀವು ನಮ್ಮ ಕೆಲಸವನ್ನು ಮೆಚ್ಚಿರೋದು ನಿಜಕ್ಕೂ ಸಂತೋಷ ಆಗ್ತಿದೆ ಸರ್

ರಜಿನಿ: ಒಳ್ಳೆಯ ಸಿನಿಮಾಗಳು ಬಂದಾಗ ಪ್ರೋತ್ಸಾಹ ಕೊಡಬೇಕು. ಅದು ನಮ್ಮ ಕರ್ತವ್ಯ. ನಿಮಗೂ ನಿಮ್ಮ ಇಡೀ ತಂಡಕ್ಕೆ ಶುಭಾಶಯಗಳು.

ವಿಜಯ್ ಕಿರಗಂದೂರು: ಇದು ನಮಗೆ ಸಿಕ್ಕ ಬಹಳ ದೊಡ್ಡ ಕಾಂಪ್ಲಿಮೆಂಟ್ ಸರ್. ನಿಮಗೆ ಆಭಾರಿ ಆಗಿದ್ದೇವೆ.

ಕ್ಯಾನ್ಸರ್ ಜೊತೆ ಭಾರತೀಯರ ದಿಲ್ ಗೆದ್ದ ಸಂಜಯ್ ದತ್

ಸಂಜಯ್ ದತ್.. ಅವ್ರ ಅಭಿಮಾನಿಗಳ ಪಾಲಿಗೆ ಆತ ಸೂಪರ್ ಸ್ಟಾರ್. ಒಂದು ವರ್ಗದ ಮಂದಿಗೆ ಈತನೊಬ್ಬ ದೇಶದ್ರೋಹಿ. ಕಾನೂನು ಸಮರಗಳನ್ನ ಎದುರಿಸಿ, ಸೆರೆವಾಸ ಮಾಡಿ ಬಂದ ರಿಯಲ್ ಫೈಟರ್. ಆದ್ರೆ ಕ್ಯಾನ್ಸರ್ ಅನ್ನೋ ಸುರಳಿಗೆ ಸಿಲುಕಿ ಸಿಕ್ಕಾಪಟ್ಟೆ ನೊಂದರು, ಬೆಂದರು ಸಂಜಯ್ ದತ್.

ಕೆಜಿಎಫ್ ಶೂಟಿಂಗ್ ಸಮಯದಲ್ಲೇ ಕ್ಯಾನ್ಸರ್​ ಅನ್ನೋ ಮಹಾಮಾರಿಯ ಬಲೆಗೆ ಸಿಲುಕಿ ಒದ್ದಾಡಿದ್ದು ಸುಳ್ಳಲ್ಲ. ಆದ್ರೆ ಅವ್ರ ಆತ್ಮ ವಿಶ್ವಾಸ ಹಾಗೂ ಅಪಾರ ಜೀವನೋತ್ಸಾಹದ ಮುಂದೆ ಕ್ಯಾನ್ಸರ್ ಮಂಕಾಯ್ತು. ಲಂಡನ್​ನಲ್ಲಿ ಟ್ರೀಟ್​ಮೆಂಟ್ ಕೂಡ ಪಡೆದು ಸ್ವದೇಶಕ್ಕೆ ವಾಪಸ್ಸಾಗಿದ್ರು. ಬೆಂಗಳೂರಿಗೆ ಬಂದಾಗ ಪವರ್ ಟಿವಿ ಪ್ರಶ್ನೆಗೇ ಉತ್ತರಿಸಿದ ಸಂಜುಬಾಬಾ, ನಿಮ್ಮೆಲ್ಲರ ಪ್ರಾರ್ಥನೆ ಫಲಿಸಿದೆ. ನಾನೀಗ ಅದ್ರಿಂದ ಮುಕ್ತನಾಗಿದ್ದೇನೆ ಅಂದ್ರು.

ಇನ್ ಫ್ಯಾಕ್ಟ್.. ಪವರ್​ಫುಲ್ ಹೀರೋ ಎದುರು ಪವರ್​ಫುಲ್ ವಿಲನ್ ಇದ್ರೇನೇ ಆ ಹೀರೋ ಖದರ್ ಹತ್ತು ಮಂದಿಗೆ ವ್ಹಾವ್ ಅನಿಸೋದು. ಇಲ್ಲಿ ಕೆಜಿಎಫ್ ಚಿತ್ರದಲ್ಲೂ ಅದೇ ಆಯ್ತು. ರಾಕಿಭಾಯ್ ಎದುರು ಅಧೀರನಾಗಿ ಅಬ್ಬರಿಸಿ, ಬೊಬ್ಬಿರಿದರು ಸಂಜಯ್ ದತ್. ಇದೀಗ ಅವ್ರು ಕ್ಯಾನ್ಸರ್ ಜೊತೆ ಭಾರತೀಯರ ಮನಸ್ಸು ಕೂಡ ಗೆದ್ದಿದ್ದಾರೆ. ಈ ಚಿತ್ರ ಅವ್ರಿಗೆ ಎಲ್ಲಿಲ್ಲದ ಗೌರವ ಹೆಚ್ಚಿಸಿ, ಕರಿಯರ್​ಗೆ ಮಹತ್ವದ ಟ್ವಿಸ್ಟ್ ನೀಡಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES