ಉತ್ತರ ಪ್ರದೇಶ ಚುನಾವಣಾ ಕಣ ಸಿಕ್ಕಾಪಟ್ಟೆ ರಂಗೇರಿದೆ.. ನಾನಾ ನೀನಾ ಅಂತ ಕೇಸರಿ ಕಲಿಗಳು ಒಂದ್ಕಡೆ ಜಿದ್ದಾಜಿದ್ದಿಗೆ ಬಿದ್ದಿದ್ರೆ, ನಾವು ಒಂದು ಕೈ ನೋಡೇ ಬಿಡ್ತೀವಿ ಅಂತ ಅಖಿಲೇಶ್ ಯಾದವ್ ಬಿಗ್ ಫೈಟ್‌ಗಿಳಿದಿದ್ದಾರೆ.. ಈ ಹಿನ್ನೆಲೆಯಲ್ಲಿ ಮತದಾರರ ಓಲೈಕೆ ಕಸರತ್ತು ಮಾಡ್ತಿದ್ದಾರೆ.. ಸಮಾಜವಾದಿ ಪಾರ್ಟಿ ಭರ್ಜರಿ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಸತ್ಯವಾದ ಮಾತು, ಮುರಿಯದ ಭರವಸೆ ಎಂಬ ಟ್ಯಾಗ್‌ಲೈನ್‌ನೊಂದಿಗೆ ‘ಸಮಾಜವಾದಿ ವಚನ ಪತ್ರ’ ಎಂದು ಕರೆಯಲಾಗುವ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ. ನಾಲ್ಕು ವರ್ಷಗಳಲ್ಲಿ ಅಂದರೆ 2025 ರ ವೇಳೆಗೆ ಎಲ್ಲಾ ರೈತರನ್ನು ಋಣಮುಕ್ತರನ್ನಾಗಿ ಮಾಡಲಾಗುವುದು ಮತ್ತು ಹೆಚ್ಚಿನ ಬಡ ರೈತರಿಗೆ ಅನುಕೂಲವಾಗುವಂತೆ ‘ಕೃಣ್ ಮುಕ್ತಿ’ ಕಾನೂನನ್ನು ಮಾಡಲಾಗುವುದು ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ..
ಲಖಿಂಪುರ ಖೇರಿ ಹಿಂಸಾಚಾರದ ಬಗ್ಗೆ ಪ್ರಸ್ತಾಪ ಮಾಡಿದ ಮಮತಾ ಬ್ಯಾನರ್ಜಿ, ರೈತರು ಪ್ರತಿಭಟನೆ ನಡೆಸುತ್ತಿದ್ದರೆ, ಬಿಜೆಪಿ ಕೇಂದ್ರ ಸಚಿವರ ಪುತ್ರ ಅವರ ಮೇಲೆ ವಾಹನ ಹತ್ತಿಸಿ, ಕೊಲ್ಲುತ್ತಾನೆ. ಬಿಜೆಪಿಗರಿಗೆ ನಾಚಿಕೆಯೆಂಬುದೇ ಇಲ್ಲ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಿಮ್ಮ ಅಮೂಲ್ಯ ಮತವನ್ನು ಭಾರತೀಯ ಜನತಾ ಪಾರ್ಟಿಗೆ ಹಾಕುವ ಮೂಲಕ ವ್ಯರ್ಥ ಮಾಡಬೇಡಿ ಎಂದು ಮಮತಾ ಬ್ಯಾನರ್ಜಿ ಉತ್ತರ ಪ್ರದೇಶದ ಜನತೆಗೆ ಕರೆ ನೀಡಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಚುನಾಯಿತರಾದರೆ, ಲವ್ ಜಿಹಾದ್ ಪ್ರಕರಣಗಳಲ್ಲಿ ₹1 ಲಕ್ಷ ರೂಪಾಯಿ ದಂಡದೊಂದಿಗೆ ಕನಿಷ್ಠ 10 ವರ್ಷಗಳ ಜೈಲು ಶಿಕ್ಷೆಯನ್ನು ಖಚಿತಪಡಿಸುತ್ತದೆ ಎಂದು ‘ಲೋಕ ಕಲ್ಯಾಣ ಸಂಕಲ್ಪ ಪತ್ರ’ ಹೇಳುತ್ತದೆ. ಪ್ರಣಾಳಿಕೆಯು ನೀರಾವರಿಗಾಗಿ ರೈತರಿಗೆ ಉಚಿತ ವಿದ್ಯುತ್ ಭರವಸೆ ನೀಡುತ್ತದೆ. ಬಿಜೆಪಿಯು ಕನಿಷ್ಠ ಬೆಂಬಲ ಬೆಲೆಯಲ್ಲಿ ಗೋಧಿ ಮತ್ತು ಭತ್ತದ ಖರೀದಿಯನ್ನು ಬಲಪಡಿಸುತ್ತದೆ ಎಂದು ಹೇಳುತ್ತದೆ. ಇದು ರಾಣಿ ಲಕ್ಷ್ಮೀ ಬಾಯಿ ಯೋಜನೆಯಡಿಯಲ್ಲಿ ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತ ಸ್ಕೂಟಿಗಳನ್ನು ನೀಡುತ್ತದೆ.
ಮತ್ತೊಂದೆಡೆ, ಕಾಂಗ್ರೆಸ್ ನಾಯಕರು ಉತ್ತರ ಪ್ರದೇಶದ ಗಲ್ಲಿ ಗಲ್ಲಿಗಳಲ್ಲಿ ಭರ್ಜರಿ ರೋಡ್ ಶೋಗಳನ್ನು ನಡೆಸುವ ಮೂಲಕ ಮತದಾರರ ಓಲೈಕೆಗೆ ಕಸರತ್ತು ಮಾಡುತ್ತಿದ್ದಾರೆ.
ಇನ್ನು, ಪ್ರಧಾನಿ ನರೇಂದ್ರ ಮೋದಿ ವರ್ಚುಯಲ್ ಸಭೆಗಳ ಕಡೆ ಮುಖಮಾಡಿದ್ದಾರೆ. ಅವರು ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ಪಂಜಾಬ್‌ನಲ್ಲಿ ವರ್ಚುವಲ್ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡ್ತಿದ್ದಾರೆ.. ಒಟ್ನಲ್ಲಿ.. ಪಂಚರಾಜ್ಯ ಗೆಲ್ಲಲು ಮೋದಿ ಟೀಂ ಭರ್ಜರಿ ಕಸರತ್ತು ಮಾಡ್ತಿದೆ..ಆದರೆ ಮತದಾರರು ಯಾರಿಗೆ ಒಲಿಯಲಿದ್ದಾರೆಂಬುದು ಫಲಿತಾಂಶದ ನಂತವೇ ಗೊತ್ತಾಗಲಿದೆ.