ಬೆಂಗಳೂರು : ಕರುನಾಡ ರಾಜರತ್ನ ಪುನೀತ್ ರಾಜ್ ಕುಮಾರ್ ಅಗಲಿ ಇಷ್ಟು ದಿನಗಳಾದ್ರೂ ಕಂಠೀರವ ಸ್ಟುಡಿಯೋದಲ್ಲಿರುವ ಅವರ ಸಮಾಧಿಗೆ ಪ್ರತಿ ದಿನವೂ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಜನರು ಬರುತ್ತಲೇ ಇದ್ದಾರೆ . ಹೀಗೆ ಇಲ್ಲೊಬ್ಬ ಅಭಿಮಾನಿಯು ಅವರ ಸಮಾಧಿಯ ದರ್ಶನ ಪಡೆಯಲು ಹಿಮಾಲಯದಿಂದ ಬಂದಿದ್ದಾನೆ.
ಗುರು ಪ್ರಕಾಶ್ ಇವರು ಅಪ್ಪು ಅವರ ಕಟ್ಟಾ ಅಭಿಮಾನಿಯಾಗಿದ್ದು ಅಪ್ಪು ನಿಧನದ ವಿಷಯ ತಿಳಿದು ಬಹಳ ನೋವಿನಲ್ಲಿದ್ದರು. ಆದ್ದರಿಂದ ಅವರ ಸಮಾಧಿಯ ದರ್ಶನ ಪಡೆಯಬೇಕೆಂಬ ಬಯಕೆಯಿಂದ ಹಿಮಾಲಯದಿಂದ ಸೈಕಲ್ನಲ್ಲಿ ಬಂದು ಪುನೀತ್ ಸಮಾಧಿಯ ದರ್ಶನ ಪಡೆದಿದ್ದಾರೆ.
ಸುಮಾರು 45 ದಿನಗಳ ಕಾಲ ಕಷ್ಟಪಟ್ಟು ಸೈಕಲ್ನಲ್ಲಿ ಪ್ರಯಾಣ ಮಾಡಿ, ಇಂದು ಪುನೀತ್ ರಾಜ್ ಕುಮಾರ್ಅವ್ರ ಸಮಾಧಿಯ ಬಳಿ ಬಂದು ಸಮಾಧಿಗೆ ನಮಸ್ಕರಿಸಿ, ಪುನೀತ್ ರಾಜ್ ಕುಮಾರ್ ಅವರನ್ನು ಸ್ಮರಿಸಿದರು. ಗುರು ಪ್ರಕಾಶ್ ಹೀಗೆ ಬಹಳ ದೂರದಿಂದ ಸೈಕಲ್ನಲ್ಲಿ ಸವಾರಿ ಮಾಡಿ ಬರುವ ಮೂಲಕ ಅಪ್ಪು ಅವರ ಬಗ್ಗೆ ತಮಗಿರುವ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.