2025ರ ಆವೃತ್ತಿಯ ಐಪಿಎಲ್ಗೆ ತಯಾರಿಗಳು ಆರಂಭವಾಗಿದ್ದು.ಬಿಸಿಸಿಐ ನಿಯಮದಂತೆ ತಂಡದ ಧಾರಣ ಪಟ್ಟಿಯನ್ನು ಇಂದು ಎಲ್ಲಾ ತಂಡಗಳು ಬಿಡುಗಡೆ ಮಾಡಿದ್ದು. ತಂಡವಾರು ಯಾರನ್ನು ಉಳಿಸಿಕೊಂಡಿದೆ ಎಂಬುದನ್ನು ಈ ಕೆಳಗಿನ ಪಟ್ಟಿಯಲ್ಲಿ ನೀಡಲಾಗಿದೆ
ತಂಡದಲ್ಲಿ ಉಳಿದುಕೊಂಡಿರು ಆಟಗಾರರ ಪಟ್ಟಿ ಈ ಕೆಳಗಿನಂತಿದೆ.
- RCB ಬೆಂಗಳೂರು : ಈ ಬಾರಿ ಕಪ್ ಗೆಲ್ಲಲೆ ಬೇಕು ಎಂದು ಹಠ ತೊಟ್ಟಿರುವ ಆರ್ಸಿಬಿ ತನ್ನ ತಂಡದಲ್ಲಿನ ಬಹುತೇಕ ಎಲ್ಲಾ ಆಟಗಾರರನ್ನು ಕೈಬಿಟ್ಟಿದೆ. ಕೇವಲ ವಿರಾಟ್ ಕೊಹ್ಲಿ, ರಜತ್ ಪಟಿದಾರ್, ಯಶ್ ದಯಾಳ್ ರನ್ನು ಉಳಿಸಿಕೊಂಡಿರುವ ಆರ್ಸಿಬಿ ಮೆಗಾ ಹರಾಜಿನಲ್ಲಿ ಘಟಾನುಘಟಿ ಆಟಾಗಾರರನ್ನು ಖರೀಧಿಸುವ ಯೋಜನೆಯನ್ನು ರೂಪಿಸಿದೆ.
- RR ರಾಜಸ್ಥಾನ್ ರಾಯಲ್ಸ್: ಕನ್ನಡಿಗ ರಾಹುಲ್ ದ್ರಾವಿಡ್ ಸಾರಥ್ಯದಲ್ಲಿ ಮುನ್ನಡೆಯುತ್ತಿರುವ ರಾಜಸ್ಥಾನ್ ತಂಡ ನಾಯಕ ಸಂಜು ಸ್ಯಾಮ್ಸನ್ ಸೇರಿದಂತೆ ಯಶಸ್ವಿ ಜೈಸ್ವಾಲ್, ರಿಯಾನ್ ಪರಾಗ್, ಸಂದೀಪ್ ಶರ್ಮಾ, ಶಿಮ್ರಾನ್ ಹೆಟ್ಮಾಯರ್ ಹಾಗೂ ಧೃವ್ ಜುರೇಲ್ ಆಟಗಾರರನ್ನು ಉಳಿಸಿಕೊಂಡಿದೆ.
- PKKS ಪಂಜಾಬ್ ಕಿಂಗ್ಸ್ : ಅಚ್ಚರಿಯ ರೀತಿಯಲ್ಲಿ ಪ್ರೀತಿ ಜಿಂತಾ ಹೊಡೆತನದ ಪಂಜಾಬ್ ತಮ್ಮ ತಂಡದಲ್ಲಿನ ಎಲ್ಲಾ ಆಟಗಾರರಿಗೆ ಕೋಕ್ ನೀಡಿ ಕೇವಲ ಶಶಾಂಕ್ ಸಿಂಗ್ ಮತ್ತು ಪ್ರಭಾಸಿಮ್ರಾನ್ ಸಿಂಗ್ರನ್ನು ಉಳಿಸಿಕೊಂಡಿದೆ.
- GT ಗುಜಾರತ್ ಟೈಟನ್ಸ್ : ಚೊಚ್ಚಲ ಆವೃತ್ತಿಯಲ್ಲೆ ಕಪ್ ಗೆದ್ದು ಶುಭಾರಂಭ ಮಾಡಿದ್ದ ಗುಜರಾತ್ ತಂಡ ಈಬಾರಿ ಶುಭ್ಮನ್ ಗಿಲ್, ರಶೀದ್ ಖಾನ್, ಸಾಯಿ ಸುದರ್ಶನ್, ರಾಹುಲ್ ತೆವಾಟಿಯಾ ಮತ್ತು ಶಾರುಖ್ ಖಾನ್ ಆಟಗಾರರನ್ನು ಉಳಿಸಿಕೊಂಡಿದೆ.
- SRH ಹೈದರಾಬಾದ್ : ಕಳೆದ ಟೂರ್ನಿಯಲ್ಲಿ ರನ್ ಮಳೆ ಹರಿಸಿದ್ದ ಹೈದರಾಬಾದ್ ತಂಡ ಈ ಬಾರಿ ಹೆನ್ರಿಚ್ ಕ್ಲಾಸೆನ್, ಪ್ಯಾಟ್ ಕಮಿನ್ಸ್, ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್ ಮತ್ತು ನಿತೀಶ್ ಕುಮಾರ್ರನ್ನು ಉಳಿಸಿಕೊಂಡಿದ್ದು. ಈ ಬಾರಿ ಕಪ್ ಎತ್ತಲು ಉತ್ಸುಕವಾಗಿದೆ.
- LSG ಲಖ್ನೋ : ಲಖ್ನೋ ತಂಡ ಈ ಬಾರಿ KL ರಾಹುಲ್ರನ್ನು ಹರಾಜಿಗೆ ಬಿಟ್ಟಿದ್ದು, ಉಳಿದಂತೆ ಕೋಲಸ್ ಪುರನ್ , ಮಯಾಂಕ್ ಯಾದವ್, ರವಿ ಬಿಷ್ಣೋಯ್, ಮೊಹ್ಸಿನ್ ಖಾನ್ ಮತ್ತು ಆಯುಷ್ ಬದೋನಿರನ್ನು ಉಳಿಸಿಕೊಂಡಿದೆ.
- DC ಡೆಲ್ಲಿ ಕ್ಯಾಪಿಟಲ್ಸ್ : ಅಚ್ಚರಿಯ ರೀತಿಯಲ್ಲಿ ಈ ಬಾರಿ ಡೆಲ್ಲಿ ತಂಡದಿಂದ ರಿಷಬ್ ಪಂತ್ ಹೊರಗೆ ಬಂದಿದ್ದು. ಉಳಿದಂತೆ ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಟ್ರಿಸ್ಟಾನ್ ಸ್ಟಬ್ಸ್, ಅಭಿಷೇಕ್ ಪೊರೆಲ್ ರನ್ನು ತಂಡ ಉಳಿಸಿಕೊಂಡಿದೆ.
- CSK ಚೆನೈ ಸೂಪರ್ಕಿಂಗ್ಸ್ : ಐದು ಬಾರಿ ಕಪ್ ಎತ್ತಿರುವ ಚೆನೈ ತಂಡ ಈ ಬಾರಿಯು ಮಾಜಿ ನಾಯಕ ಧೋನಿಯವರನ್ನು ಉಳಿಸಿಕೊಂಡಿದೆ. ಈ ಬಾರಿ ತಂಡದಲ್ಲಿ ಉಳಿದಿರುವ ಆಟಗಾರರು ರುತುರಾಜ್ ಗಾಯಕ್ವಾಡ್, ಮತೀಶಾ ಪತಿರಾನ, ಎಂ.ಎಸ್.ಧೋನಿ, ರವೀಂದ್ರ ಜಡೇಜ್, ಶಿವಂ ದುಬೆರನ್ನು ಉಳಿಸಿಕೊಂಡಿದೆ.
- KKR ಕೊಲ್ಕತ್ತಾ : ಕಳೆದ ಬಾರಿ ಪ್ರಶಸ್ತಿ ಗೆದ್ದಿರುವ ತಂಡ KKR ಈ ಭಾರಿ ರಿಂಕು ಸಿಂಗ್, ವರುಣ್ ಚಕ್ರವರ್ತಿ, ಸುನಿಲ್ ನರೈನ್, ಹರ್ಷಿತ್ ರಾಣಾ ಮತ್ತು ರಮಣದೀಪ್ ಸಿಂಗ್ರನ್ನು ಉಳಿಸಿಕೊಂಡಿದೆ.
- MI ಮುಂಬೈ ಇಂಡಿಯನ್ಸ್ : ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಕಳೆದ ಕೆಲವು ಆವೃತ್ತಿಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದೆ. ತಂಡದಲ್ಲಿ ಘಟಾನುಘಟಿ ಆಟಗಾರರ ದಂಡೆ ಇದ್ದರೂ ಅಂಬಾನಿ ತಂಡ ಸೋಲಿನ ಸುಳಿಯಲ್ಲಿ ಸಿಲುಕಿದೆ. ಈ ಬಾರಿ ಮುಂಬೈ ತಂಡ ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾರನ್ನು ಉಳಿಸಿಕೊಂಡಿದೆ. ಅಚ್ಚರಿಯ ರೀತಿಯಲ್ಲಿ ಇಶಾನ್ ಕಿಶನ್ರನ್ನು ತಂಡದಿಂದ ಕೈ ಬಿಟ್ಟಿದೆ.