Friday, May 17, 2024

ಕೋಲಾರ ಜಿಲ್ಲೆಯಲ್ಲಿ 60 ಪೊಲೀಸ್ ಪೇದೆಗಳಿಗೆ ಕೊರೋನಾ

ಕೋಲಾರ : ಕೊರೋನಾ ಸೋಂಕು ದಿನೇ ದಿನೇ ಏರಿಕೆಯಾಗುತ್ತಿದೆ. ಪಾಸಿಟಿವಿಟಿ ರೇಟ್ ದಿಢೀರ್ ಅಂತಾ ಶೇಕಡ 15ಕ್ಕೆ‌ ಹೋಗಿದೆ. ಆದರೆ ಇದೀಗ ಕೋಲಾರ ಜಿಲ್ಲೆಯಲ್ಲಿ ಪೊಲೀಸರಲ್ಲಿ ಕೊರೋನಾ ಸೋಂಕು ಉಲ್ಬಣಗೊಂಡಿದೆ.

ಕೋಲಾರ ಜಿಲ್ಲೆಯಿಂದ ಮೇಕೆದಾಟು ಪಾದಯಾತ್ರೆ ಬಂದೋಬಸ್ತ್ ಗೆ ಹೋಗಿದ್ದ ಪೊಲೀಸರಿಗೆಲ್ಲಾ ಕೊರೋನಾ ಸೋಂಕು ಬಂದಿದೆ. ಒಂಥರಾ ಜಿಲ್ಲೆಯಲ್ಲಿ ಮೇಕೆದಾಟು ಪಾದಯಾತ್ರೆ ಕೊರೊನಾ ಯಾತ್ರೆಯಾಗಿದೆ. ಜಿಲ್ಲೆಯ‌ ಪೊಲೀಸ್ ಠಾಣೆಗಳ 60ಕ್ಕೂ ಹೆಚ್ಚು ಪೊಲೀಸರಿಗೆ ಸೊಂಕು ತಗುಲಿದೆ.

ಕೆಜಿಎಫ್ ಪೊಲೀಸ್ ಜಿಲ್ಲೆಯಿಂದ ತರಳಿದ್ದ 111 ಜನ ಪೊಲೀಸರ ಪೈಕಿ 40 ಜನ ಸಿಬ್ಬಂದಿಗೆ ಪಾಸಿಟಿವ್ ಬಂದಿದೆ. ಕೋಲಾರ ಪೊಲೀಸ್ ಜಿಲ್ಲೆಯಿಂದ 134 ಪೊಲೀಸ್ ಸಿಬ್ಬಂದಿ ತೆರಳಿದ್ದರು. ಈ ಪೈಕಿ 20 ಜನ ಪೊಲೀಸ್ ಸಿಬ್ಬಂದಿಗೆ ಸೋಂಕು ಬಂದಿದೆ. ಸಂಕ್ರಾಂತಿ ಹಬ್ಬದ ದಿನದಿಂದ ಕೊರೋನಾ ಟೆಸ್ಟ್ ಮಾಡಿಸಿಕೊಂಡಾಗ ಸೋಂಕು ಪತ್ತೆಯಾಗಿದೆ. ಇದರಿಂದ ಮೇಕೆದಾಟು ಪಾದಯಾತ್ರೆ ಬಂದೋಬಸ್ತ್ ಗೆ ಹೋಗಿದ್ದ ಪೊಲೀಸರ ಕುಟುಂಬಸ್ಥರಲ್ಲಿ ಆತಂಕ ಹೆಚ್ಚಾಗಿದೆ. ಮೊದಲ ಹಂತದಲ್ಲಿ 235 ಪೊಲೀಸ್ ಸಿಬ್ಬಂದಿಗಳಿಗೆ ಕೊರೊನಾ ಟೆಸ್ಟ್ ಮಾಡಲಾಗಿದ್ದು, ನಂತರ ಪೊಲೀಸ್ ಕುಟುಂಬಸ್ಥರಿಗೆ ಕೊರೊನಾ ಟೆಸ್ಟ್ ಮಾಡಲು ಆರೋಗ್ಯ ಇಲಾಖೆ ಮುಂದಾಗಿದೆ‌.

RELATED ARTICLES

Related Articles

TRENDING ARTICLES