Friday, May 17, 2024

ಡ್ರಗ್ಸ್​​ ತಯಾರಿಕಾ ಜಾಲ ಪತ್ತೆ

ಬೆಂಗಳೂರು: ಬೆಂಗಳೂರಿನಲ್ಲಿ ಡ್ರಗ್ಸ್ ತಯಾರಿಸುತ್ತಿದ್ದ ನೈಜೀರಿಯಾ ಮೂಲದ ಪ್ರಜೆಯನ್ನು ಪೊಲೀಸರ ಬಂಧಿಸಿದ್ದಾರೆ. ಬಂಧಿತ ಮನೆಯಲ್ಲಿಯೇ ಪ್ರೆಷರ್ ಕುಕ್ಕರ್​​ನಲ್ಲಿ ಸಿಂಥೆಟಿಕ್ ಡ್ರಗ್ಸ್ ತಯಾರಿಸುತ್ತಿದ್ದ. ಕುಕ್ಕರ್​​​ನಲ್ಲಿ ಡ್ರಗ್ಸ್ ತಯಾರಿಸಿ ವಿದೇಶಗಳಿಗೆ ಮಾರಾಟ ಮಾಡುತ್ತಿರುವ ವಿಷಯ ಬೆಳಕಿಗೆ ಬಂದಿದೆ. ವಾಸವಿದ್ದ ಮನೆಯನ್ನೇ ಡ್ರಗ್ಸ್ ತಯಾರಿಕೆ ಫ್ಯಾಕ್ಟರಿ ಮಾಡಿಕೊಂಡಡಿದ್ದ.

ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯಿಂದ ಸುಮಾರು 1ಕೋಟಿ ಮೌಲ್ಯದ ಡ್ರಗ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಕೊಕೇನ್ & ಎಂಡಿಎಂಎ ಹಾಗೂ ಕೆಮಿಕಲ್ಸ್ ತಯಾರಿಸಲು ಬಳಸುತ್ತಿದ್ದ ರಾಸಾಯನಿಕ & ಕೆಮಿಕಲ್ಸ್‌ಗಳು, 950 ಗ್ರಾಂ ಕೊಕೇನ್, 50 ಗ್ರಾಂ ಎಂಡಿಎಂಎ ಕ್ರಿಸ್ಟೆಲ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಡ್ರಗ್ಸ್ ತಯಾರಿಕೆಗಾಗಿ ಕುಕ್ಕರ್ ಮಾರ್ಪಾಡು ಮಾಡಿಕೊಂಡಿದ್ದ. ಮನೆಯಲ್ಲಿದ್ದ 2 ಮೊಬೈಲ್ ಫೋನ್, 1 ಡಿಜಿಟಲ್ ತೂಕದ ಯಂತ್ರ, 1 ಹೊಂಡಾ ಡಿಯೋ ಸಹ ವಶಕ್ಕೆ ಪಡೆಯಲಾಗಿದೆ.

RELATED ARTICLES

Related Articles

TRENDING ARTICLES