Wednesday, January 22, 2025

ನಾಯಿ ಮೇಲಿನ ಆಸೆಗೆ ಬೋನಿನಲ್ಲಿ ಸೆರೆಯಾಯಿತು 3 ಚಿರತೆ

ಚಾಮರಾಜನಗರ : ತನ್ನಿಷ್ಟ ನಾಯಿ ಬೇಟೆಗೆ ಸಿಕ್ಕೇ ಬಿಟ್ಟಿತೆಂಬ ಖುಷಿಯಲ್ಲಿ ಚಿರತೆಗಳು ಬಂದು ಬಂದು ಬೋನಿಗೆ ಬೀಳುತ್ತಿದ್ದವು, ಆದರೆ ಇಂದು ಕೂಡ ಸೇರಿದಂತೆ 7 ದಿನದಲ್ಲಿ ಮೂರು ಚಿರತೆಗಳು ಬೋನಿಗೆ ಬಂದು ಸಿಲುಕಿ ಹಾಕಿಕೊಂಡಿರುವ ಘಟನೆ ಚಾಮರಾಜನಗರ ತಾಲೂಕಿನಲ್ಲಿ ನಡೆದಿದೆ.

ಚಾಮರಾಜನಗರ ತಾಲೂಕಿನ ಹೊನ್ನಹಳ್ಳಿ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ಅಂದಾಜು 1.5-2 ವರ್ಷದ ಹೆಣ್ಣು ಚಿರತೆಯೊಂದು ಇಂದು ಮುಂಜಾನೆ ನಾಯಿಯಾಸೆಗೆ ಬೋನಿನಲ್ಲಿ ಸೆರೆಯಾಗಿದೆ‌. ಚಿರತೆಯು ಆರೋಗ್ಯವಾಗಿದ್ದು ಯಾವುದೇ ಗಾಯಗಳಾಗಿಲ್ಲವಾದ್ದರಿಂದ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.

ಇನ್ನು, ದಿನಾಂಕ 3 ರಂದು ಚಾಮರಾಜನಗರ ತಾಲೂಕಿನ ಮೂಡ್ನಾಕೂಡು, 8 ರಂದು ವೀರನಪುರ ಗ್ರಾಮದಲ್ಲಿ ಆಹಾರದಾಸೆಯಾಗಿ ಚಿರತೆಗಳು ಸೆರೆಯಾಗಿದ್ದವು‌. ಒಟ್ಟಾರೆ ಕಳೆದ 5 ತಿಂಗಳುಗಳಲ್ಲಿ 7 ಚಿರತೆಗಳು ಅರಣ್ಯ ಇಲಾಖೆಯ ಬೋನಿಗೆ ಬಿದ್ದಿವೆ. ಒಟ್ಟಾರೆ ಭಯಭೀತರಾಗಿದ್ದ ಚಾಮರಾಜನಗರ ತಾಲ್ಲೂಕಿನ ಹಲವು ಗ್ರಾಮದ ರೈತರು ಚಿರತೆಗಳ ಸೆರೆಯಾಗಿರುವುದರಿಂದ ನಿಟ್ಟುಸಿರು ಬಿಟ್ಟಿದ್ದಾರೆ.

RELATED ARTICLES

Related Articles

TRENDING ARTICLES