Sunday, December 22, 2024

ಓವರ್ ಟೇಕ್ ಮಾಡಲು ಹೋಗಿ ರಸ್ತೆ ಪಕ್ಕದ ಚರಂಡಿಗೆ ಇಳಿದ ಆಂಬುಲೆನ್ಸ್

ಮಂಡ್ಯ: ಓವರ್ ಟೇಕ್ ಮಾಡಲು ಹೋಗಿ ರಸ್ತೆ ಪಕ್ಕದ ಚರಂಡಿಗೆ ಇಳಿದ ಆಂಬುಲೆನ್ಸ್ ಮದ್ದೂರು ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದೆ.

ಚನ್ನಪಟ್ಟಣ ತಾಲ್ಲೂಕಿನ ಕೋತಮಾರನಹಳ್ಳಿಯ ರೋಗಿ ಗೋಪಾಲ್ ಅವರನ್ನು ಸಾಗಿಸುತ್ತಿದ್ದ ಆಂಬುಲೆನ್ಸ್ ಮಂಡ್ಯ ಮಿಮ್ಸ್ ಗೆ ತೆರಳತ್ತಿತ್ತು, ಜೇನು ಕಡಿತದಿಂದ ಚನ್ನಪಟ್ಟಣ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದ ಗೋಪಾಲ್ , ಇಂದು ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಮಿಮ್ಸ್ ಗೆ ತೆರಳುತ್ತಿದ್ದ ಗೋಪಾಲ್. ಮದ್ದೂರು ಪಟ್ಟಣದ ಬಸ್ ನಿಲ್ದಾಣದ ಬಳಿ ಲಾರಿ ಓವರ್ ಟೇಕ್ ಮಾಡಲು ಹೋದಾಗ ಈ ಘಟನೆ ಸಂಭವಿಸಿದೆ.

ರೋಗಿ ಮತ್ತು ಸಂಬಂಧಿಕರನ್ನು ಆಂಬುಲೆನ್ಸ್ ವಾಹನದಿಂದ ಸ್ಥಳೀಯರು ಹುಷಾರಾಗಿ ಕೆಳಗಿಳಿಸಿದ್ದಾರೆ. ರೋಗಿ ಮತ್ತು ಸಂಬಂಧಿಕರನ್ನು ಸ್ಥಳೀಯರು ಆಟೋದಲ್ಲಿ ಮಂಡ್ಯಗೆ ಕಳುಹಿಸಿದರು. ಆದರೆ ಘಟನೆಯಿಂದ 15 ನಿಮಿಷಕ್ಕೂ ಹೆಚ್ಚು ಕಾಲ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿತ್ತು.

RELATED ARTICLES

Related Articles

TRENDING ARTICLES