Friday, May 17, 2024

ಬಹು ಉಪಕಾರಿ ಈ ಅಲೋವೆರಾ…!

ಅಲೋವೆರಾ ಅಂದರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಆಯುರ್ವೇದದಲ್ಲಿ ಬಹಳ ಬೇಡಿಕೆಯಿರುವ ಅಲೋವೆರಾ ಗಿಡದಲ್ಲಿ ಎಷ್ಟೊಂದು ಪ್ರಯೋಜನಗಳಿವೆ. ಇತ್ತೀಚಿನ ದಿನಗಳಲ್ಲಿ ಅಲೋವೆರಾ ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.

ಇದರಲ್ಲಿ ವಿಟಮಿನ್ ಎನ್, ಎಫ್, ಸಿ ಮತ್ತು ಬಿ ಹೇರಳವಾಗಿದೆ. ಈ ಅಲೋವೆರಾದಲ್ಲಿ ಸುಮಾರು ನೂರಕ್ಕೂ ಅಧಿಕ ಔಷಧೀಯಗುಣಗಳಿದ್ದು ಇದನ್ನ ಕೇವಲ ಸೌಂದರ್ಯ ವೃದ್ಧಿಗಾಗಿ ಉಪಯೋಗಿಸುತ್ತಾರೆ ಅಂದುಕೊಂಡರೆ ಅದು ನಿಮ್ಮ ತಪ್ಪುತಿಳುವಳಿಕೆ. ಯಾಕಂದ್ರೆ, ಅಸಿಡಿಟಿ ಸಮಸ್ಯೆಯಿರುವವರು ಲೋಳೆಸರದ ದ್ರವವನ್ನು ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸೇವಿಸುವುದರಿಂದ ಅಸಿಡಿಟಿ ಸಮಸ್ಯೆ ಕಡಿಮೆಯಾಗುತ್ತದೆ.

ಚರ್ಮದ ರಕ್ಷಣೆಯಲ್ಲಿ ಇದು ಮೊದಲ ಸ್ಥಾನ ಪಡೆದು ಕೊಂಡಿದೆಯಾದರೂ ದೇಹವನ್ನ ತಂಪಾಗಿಸುವ ಎಲ್ಲಾ ಲಕ್ಷಣಗಳನ್ನು ಕೂಡ ಇದು ಹೊಂದಿದೆ. ನಿಮ್ಮ ಕಣ್ಣುಗಳ ಕೆಳಗೆ ಚರ್ಮವು ಸಾಮಾನ್ಯಕ್ಕಿಂತ ಡಾರ್ಕ್ ಆಗಿ ಕಾಣಿಸಿಕೊಂಡಾಗ ಅಲೋವೆರ ಜೆಲ್ ದಿನಾ ಹಚ್ಚುವುದರಿಂದ ಕಣ್ಣುಗಳ ಹೊಳಪು ಹೆಚ್ಚುತ್ತದೆ. ಅತಿಯಾದ ಒತ್ತಡ, ನಿದ್ರೆಯ ಕೊರತೆ, ಕೆಫಿನ್ ಅತಿಯಾಗಿ ಸೇವಿಸುವುದು ಮುಂತಾದ ಹಲವಾರು ಅಂಶಗಳಿಂದ ಇದು ಉಂಟಾಗುತ್ತದೆ. ಈ ಕಣ್ಣಿನ ಸುತ್ತ ಉಂಟಾದ ಕಪ್ಪು ವಲಯವನ್ನು ನಿವಾರಿಸಲು ನಿಮ್ಮ ಕಣ್ಣುಗಳ ಕೆಳಗೆ ಅಲೊವೆರ ಜಲ್ ಅನ್ನು ಬಳಸುವುದು ಸುರಕ್ಷಿತವಾಗಿದೆ.ಇದನ್ನು ನಿಮ್ಮ ಕಣ್ಣುಗಳ ಕೆಳಗೆ ಹಚ್ಚಿ ಮತ್ತು ರಾತ್ರಿಯಿಡೀ ಅದನ್ನು ಹಾಗೆಯೇ ಬಿಟ್ಟು ಮಾರನೆಯದಿನ ತಣ್ಣೀರಿನಿಂದ ತೊಳೆಯಿರಿ. ನೀವೂ ಕೂಡ ಒಮ್ಮೆ ಟ್ರೈ ಮಾಡಿ ನೋಡಿ.

ಸಿಂಧೂರ,ಪವರ್ ​ಟಿವಿ

RELATED ARTICLES

Related Articles

TRENDING ARTICLES