ಕೊಪ್ಪಳ: ಸಚಿವ ಉಮೇಶ್ ಕತ್ತಿ ರಾಜೀನಾಮೆ ಕೊಡದಿದ್ರೆ ಹೋರಾಟ ಮಾಡ್ತಿವಿ ಎಂದು ಕೊಪ್ಪಳದಲ್ಲಿ ಮಾಜಿ ಸಚಿವ ಶಿವರಾಜ ತಂಗಡಗಿ ಆಗ್ರಹಿಸಿದ್ದಾರೆ.
ಕೃಷಿ ಕಾಯ್ದೆ ತಿದ್ದುಪಡಿ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಇಂದು ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಸಿದ್ದಾಪೂರ ಗ್ರಾಮದಲ್ಲಿ ಮಾಜಿ ಸಚಿವ ಶಿವರಾಜ್ ತಂಗಡಗಿ ಆಗ್ರಹಿಸಿದರು. ಟ್ರಾಕ್ಟರ್ ಮಾರ್ಚ್ ರ್ಯಾಲಿಯಲ್ಲಿ ಮಾತನಾಡಿದ ತಂಗಡಗಿ ಉಮೇಶ್ ಕತ್ತಿ ರಾಜೀನಾಮೆಗೆ ಆಗ್ರಹಿಸಿದರು.
ಸಚಿವ ರಾಜೀನಾಮೆ ಕೊಡದೆ ಹೋದರೆ ಉಗ್ರ ಹೋರಾಟ ಮಾಡುತ್ತೇವೆ. ಸಾಮಾನ್ಯ ಜನರು ಬದಕಬಾರದು ಅನ್ನೋ ಉದ್ದೇಶಕ್ಕೆ ಕತ್ತಿ ಹೇಳಿದ್ದಾರೆ. ಇದು ಯಾವ ನ್ಯಾಯ. ಕೂಲಿ ಕಾರ್ಮಿಕ ಕೂಡಾ ಇಂದು ಬೈಕ್ ಹೊಂದಿದಾರೆ. ಬಿ.ಪಿ.ಎಲ್ ಕಾರ್ಡ್ ರದ್ದು ಮಾಡಿದರೆ ಮನೆ ಮನೆಗೆ ಹೋಗಿ ಹೋರಾಟ ಮಾಡುತ್ತೇವೆ. ಬಿಜೆಪಿಯವರ ಮನೆ ಮನೆಗೆ ಹೋಗಿ ಹೋರಾಟ ಮಾಡ್ತೀವಿ ಬಿ.ಪಿ.ಎಲ್ ಕಾರ್ಡ್ ತಗೆದರೆ ಸಾಮಾನ್ಯರು ಹೇಗೆ ಬದುಕುಬೇಕು. ಉಮೇಶ್ ಕತ್ತಿ ನನ್ನ ಸ್ನೇಹಿತರು ಬಹಳ ಕಷ್ಟ ಪಟ್ಟು ಸಚಿವರಾಗಿದ್ದಾರೆ. ಯಾಕೆ ಇಂತಹ ನಿರ್ಧಾರ ತಗೋತಾರೆ ಗೊತ್ತಿಲ್ಲ ಎಂದರು. ಉಮೇಶ್ ಕತ್ತಿ ಬಡವರ ಪರ ಇರಲಿ ಎಂದು ಕತ್ತಿಗೆ ಸಲಹೆ ನೀಡಿದರು.
ಶುಕ್ರಾಜ ಕುಮಾರ ಕೊಪ್ಪಳ