Monday, May 13, 2024

‘ಬಜೆಟ್ ಮಂಡನೆಯ ಸಂಪೂರ್ಣ ವಿವರ’

ಬೆಂಗಳೂರು: ನಿರ್ಮಲಾ ಸೀತಾರಾಮನ್ ವಿತ್ತ ಸಚಿವೆಯಾದ ನಂತರ ಮೂರನೇ ಬಾರಿಗೆ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಈ ಬಾರಿಯ ಬಜೆಟ್ ಮಂಡನೆಯು ವಿಶೇಷವಾಗಿದೆ ಎಂದು ಹೇಳಬಹುದು. ‘ಮೇಡ್ ಇನ್ ಇಂಡಿಯಾ’ ಟ್ಯಾಬ್ ನಲ್ಲಿ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ನಮೋ ಸರ್ಕಾರದ 9 ನೇ ಬಜೆಟ್ ಮಂಡನೆ ಇದಾಗಿದೆ. ಕೊರೋನಾ ಸಂಕಷ್ಟದ ನಡುವೆಯು ಬಜೆಟ್ ಮಂಡನೆ. ಬಜೆಟ್ ಮಂಡನೆಗೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ವಿರೋಧದ ನಡುವೆಯು  ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡುತ್ತಿದ್ದಾರೆ.

2021ರ ಬಜೆಟ್‌ನಲ್ಲಿ ಯಾವ ವಲಯಕ್ಕೆ ಎಷ್ಟು ಅನುದಾನ

  • ಆರೋಗ್ಯ ಕ್ಷೇತ್ರಕ್ಕೆ ಕೇಂದ್ರ ಸರ್ಕಾರದಿಂದ ಬಂಪರ್‌ ಅನುದಾನ
  • ಕೃಷಿ ಇಲಾಖೆ ಮೂಲ ಸೌಕರ್ಯ ವೃದ್ಧಿಗೆ ಕೇಂದ್ರ ಸರ್ಕಾರದಿಂದ ಕ್ರಮ
  • ದೇಶದಲ್ಲಿ ಸಾಂಕ್ರಾಮಿಕ ರೋಗ ತಡೆಯಲು ಸರ್ವ ಪ್ರಯತ್ನ
  • ಆತ್ಮ ನಿರ್ಭರ್‌ ಯೋಜನೆಗೆ 64,180 ಸಾವಿರ ಕೋಟಿ ಮೀಸಲು
  • 602 ಜಿಲ್ಲೆಗಳಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ
  • ಜಲ ಜೀವನ್‌ ಮಿಷನ್‌ ಯೋಜನೆಯಡಿ ಕುಡಿಯುವ ನೀರು
  • 86 ಕೋಟಿ ಮನೆಗಳಿಗೆ ಕುಡಿಯುವ ನೀರು ಸಂಪರ್ಕ
  • ದೇಶದಲ್ಲಿ 17 ಸಾವಿರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆ
  • ದೇಶದ ಹಲವೆಡೆ ತುರ್ತು ಆರೋಗ್ಯ ಕೇಂದ್ರಗಳ ಸ್ಥಾಪನೆ
  • ಕೋವಿಡ್‌ ಲಸಿಕೆಗಾಗಿ 35 ಸಾವಿರ ಕೋಟಿ ವಿನಿಯೋಗ
  • 500 ನಗರಗಳು ಅಮೃತ ನಗರಗಳು ಎಂದು ಘೋಷಣೆ
  • ದೇಶದಲ್ಲಿ 3 ವರ್ಷದಲ್ಲಿ 7 ಜವಳಿ ಪಾರ್ಕ್‌ಗಳ ನಿರ್ಮಾಣ
  • 2 ವರ್ಷದಲ್ಲಿ 2 ಜವಳಿ ಪಾರ್ಕ್‌ಗಳ ನಿರ್ಮಾಣ ಗುರಿ
  • 15 ವರ್ಷ ಹಳೆಯದಾದ ವಾಹನಗಳು ಸ್ಕ್ರ್ಯಾಪ್‌ಗೆ
  • ಮೊದಲು ಸರ್ಕಾರಿ ವಾಹನಗಳನ್ನ ಗುಜರಿಗೆ ಹಾಕುವ ಯೋಜನೆ
  • ಹೆದ್ದಾರಿಗಳ ಮೂಲ ಸೌಕರ್ಯ ಒದಗಿಸಲು ಖಾಸಗಿ ಭಾಗಿತ್ವ
  • ಹೆದ್ದಾರಿಗಳ ಮೂಲಸೌಕರ್ಯಕ್ಕೆ ಖಾಸಗಿ ಬಂಡವಾಳ ಆಕರ್ಷಣೆ
  • ಭಾರತ್‌ ಮಾಲಾ ಯೋಜನೆಯಲ್ಲಿ 2800 ಕಿಲೋಮೀಟರ್‌ ಅಭಿವೃದ್ಧಿ
  • ಈ ವರ್ಷ ಭಾರತ ಮಾಲಾ ಯೋಜನೆಯಡಿ 500 ಕಿ.ಮೀ. ಅಭಿವೃದ್ಧಿ
  • ಚುನಾವಣೆ ನಡೆಯುವ ಕೇರಳ, ತಮಿಳುನಾಡು, ಪಶ್ಚಿಮಬಂಗಾಳ ಅಸ್ಸಾಂ, ಪುದುಚೇರಿ ರಾಜ್ಯಗಳಿಗೆ ಬಂಪರ್‌ ಕೊಡುಗೆ
  • ಚುನಾವಣೆ ದೃಷ್ಟಿಯಿಂದ ಹಲವು ಯೋಜನೆಗಳ ಘೋಷಣೆ
  • ಮಧುರೈ ಮತ್ತು ಕೇರಳ ಸಂಪರ್ಕಿಸುವ ಹೆದ್ದಾರಿ ಅಭಿವೃದ್ಧಿ
  • ಮುಂಬೈ- ಕನ್ಯಾಕುಮಾರಿ ಕಾರಿಡಾರ್‌
  • ಕೊಲ್ಕೊತ್ತಾ – ಸಿಲುಗಿರಿ ಹೆದ್ದಾರಿ ಯೋಜನೆಗೆ ಗ್ರೀನ್‌ ಸಿಗ್ನಲ್
  • 30 ಸಾವಿರ ಕೋಟಿ ವೆಚ್ಚದಲ್ಲಿ ದೇಶದಲ್ಲಿ ಹೆದ್ದಾರಿಗಳ ಅಭಿವೃದ್ಧಿ
  • ಅಸ್ಸಾಂಗೆ 19 ಸಾವಿರ ಕೋಟಿ ರೂ ಅಭಿವೃದ್ಧಿ ಪ್ಯಾಕೇಜ್
  • ರೈಲ್ವೆಯಲ್ಲಿ ಮಿಷನ್‌ 2030 ಯೋಜನೆ ಘೋಷಣೆ
  • 18. 615 ಕೋಟಿ ಹೆದ್ದಾರಿಗಳ ಅಭಿವೃದ್ಧಿಗೆ ಮೀಸಲು
  • ಕೇರಳದಲ್ಲಿ 65 ಸಾವಿರ ಕೋಟಿ ವೆಚ್ಚದಲ್ಲಿ ಹೆದ್ದಾರಿ ಅಭಿವೃದ್ಧಿ
  • ರೈಲ್ವೆ ಸಾರಿಗೆಯಲ್ಲಿ ಪ್ರಯಾಣಿಕರ ಸೇಫ್ಟಿಗೆ ಹೆಚ್ಚು ಒತ್ತು
  • ರೈಲ್ವೆ ಇಲಾಖೆ ಆಧುನಿಕರಣಕ್ಕೆ ಕೇಂದ್ರ ಸರ್ಕಾರ ಪ್ಲಾನ್‌
  • ಅಸ್ಸಾಂನಲ್ಲಿ 34 ಸಾವಿರ ಕೋಟಿ ವೆಚ್ಚದಲ್ಲಿ ಹೆದ್ದಾರಿ ಅಭಿವೃದ್ಧಿ
  • ನಗರಗಳಲ್ಲಿ ಮೂಲ ಸೌಕರ್ಯಕ್ಕೆ ಹೆಚ್ಚಿನ ಅನುದಾನ
  • ಶೇ.100 ರಷ್ಟು ವಿದ್ಯುದೀಕರಣಕ್ಕೆ ಸರ್ಕಾರ ಪ್ಲಾನ್‌
  • 10.055 ಕೋಟಿ ರೂಪಾಯಿ ರೈಲ್ವೆ ಇಲಾಖೆಗೆ ಮೀಸಲು
  • ಕೊಚ್ಚಿ ಮೇಟ್ರೋ ಫೇಸ್‌-2 ಯೋಜನೆ ಮುಂದುವರಿದ ಭಾಗ್ಕಕೆ ಅನುದಾನ
  • ಬೆಂಗಳೂರು ಮೆಟ್ರೋ ಫೇಸ್‌-2 ಮತ್ತು ಫೇಸ್‌ 3ಗೆ ಅನುದಾನ
  • ಬೆಂಗಳೂರು ಮೆಟ್ರೋ ವಿಸ್ತರಣೆಗೆ 14,780 ಕೋಟಿ ರೂಪಾಯಿ
  • ಬೆಂಗಳೂರು ಮೆಟ್ರೋ ಮತ್ತೆರಡು ಮಾರ್ಗಗಳ ಘೋಷಣೆ
  • ನಮ್ಮ ಮೆಟ್ರೋ 58.19 ಕಿಲೋ ಮೀಟರ್‌ ವಿಸ್ತರಣೆಗೆ ಪ್ಲಾನ್
  • ಬಂದರುಗಳ ಅಭಿವೃದ್ಧಿಗೆ ಕೇಂದ್ರದಿಂದ ಅನುದಾನ
  • 2 ಸಾವಿರ ವೆಚ್ಚದಲ್ಲಿ 7 ಯೋಜನೆಗಳ ಜಾರಿ
  • ಬಂದರುಗಳ ಅಭಿವೃದ್ಧಿಯಲ್ಲಿ ಖಾಸಗಿಗೆ ಅವಕಾಶ
  • ಬಂದರುಗಳ ಅಭಿವೃದ್ಧಿಗೆ 1.600 ಕೋಟಿ ರೂ ಮೀಸಲು
  • ಬಜೆಟ್‌ನಲ್ಲಿ 5 ಶಿಪ್ಪಿಂಗ್‌ಯಾರ್ಡ್‌ಗಳ ಘೋಷಣೆ
  • ಶುದ್ಧ ವಿದ್ಯುತ್‌ ಉತ್ಪಾದನೆಗೆ ಕೇಂದ್ರದಿಂದ ಕ್ರಮ
  • ನವೀಕರಿಸಬಹುದಾದ ವಿದ್ಯುತ್‌ಗೆ ಹೆಚ್ಚು ಆದ್ಯತೆ
  • ಉಜ್ವಲ ಯೋಜನೆ ವಿಸ್ತರಣೆ 8 ಕೋಟಿಯಿಂದ ಮತ್ತಷ್ಟು ಹೆಚ್ಚಳ
  • 100 ಜಿಲ್ಲೆಗಳಿಗೆ ಉಜ್ವಲ ಯೋಜನೆ ವಿಸ್ತರಣೆ
  • 8 ಕೋಟಿಯಿಂದ 9 ಕೋಟಿಗೆ ಉಜ್ವಲ ಯೋಜನೆ ವಿಸ್ತರಣೆ
  • 9 ಕೋಟಿ ಕುಟುಂಬಗಳಿಗೆ ಉಜ್ವಲ ಯೋಜನೆ ವಿಸ್ತರಣೆ
  • ಗ್ಯಾಸ್‌ ಪೈಪ್‌ಲೈನ್‌ ಯೋಜನೆ ವಿಸ್ತರಿಸಿದ ನಿರ್ಮಲಾ ಸೀತಾರಾಮ್‌
  • ಜಮ್ಮು-ಕಾಶ್ಮೀರಕ್ಕೆ ಗ್ಯಾಸ್‌ಪೈಪ್‌ ಲೈನ್‌ ಯೋಜನೆ ವಿಸ್ತರಣೆ
  • ಅಂತರಾಷ್ಟ್ರೀಯ ಮಟ್ಟದ ಫಿನ್‌ಟೆಕ್‌ ಹಬ್‌ ಘೋಷಣೆ
  • ಷೇರು ಮಾರುಕಟ್ಟೆಗೆ ಸಂಬಂಧಿಸಿದ ಕಾನೂನುಗಳ ಬದಲಾವಣೆ
  • 1 ಸಾವಿರ ಹೊಸ ಗ್ಯಾಸ್‌ ಏಜೆನ್ಸಿಗಳ ಸ್ಥಾಪನೆಗೆ ನಿರ್ಧಾರ
  • ವಿಮೆ ಕ್ಷೇತ್ರದಲ್ಲಿ ಎಫ್‌ಡಿಐ ಮಿತಿ ಹೆಚ್ಚಳಕ್ಕೆ ತೀರ್ಮಾನ
  • ಖಾಸಗಿ ಹೂಡಿಕೆ ಶೇ.49ರಿಂದ ಶೇ. 74ಕ್ಕೆ ಏರಿಕೆ
  • ಬ್ಯಾಂಕುಗಳಿಗೆ ಮತ್ತಷ್ಟು ಸರ್ಕಾರಿ ಹಣದ ಹರಿವು
  • ಬ್ಯಾಂಕ್‌ಗಳಿಲ್ಲಿನ ಡೆಪಾಸಿಟ್‌ ರಕ್ಷಣೆಗೆ ಕ್ರಮ
  • 5 ಲಕ್ಷದವರೆಗೆ ಬ್ಯಾಂಕ್‌ಗಳಲ್ಲಿನ ಠೇವಣಿಗೆ ಭದ್ರತೆ
  • 1 ಲಕ್ಷ ಇದ್ದ ಠೇವಣಿ ಭದ್ರತೆಯನ್ನ 5 ಲಕ್ಷಕ್ಕೆ ಏರಿಕೆ
  • ನಷ್ಟದಲ್ಲಿರುವ ಬ್ಯಾಂಕುಗಳ ಗ್ರಾಹಕರಿಗೆ ಅನುಕೂಲ
  • ಬ್ಯಾಂಕ್‌ಗಳಿಗೆ 2 ಸಾವಿರ ಕೋಟಿ ರೂಪಾಯಿ ಅನುದಾನ
  • ಬ್ಯಾಂಕಿಂಗ್‌ ಸಿಸ್ಟಂ ಉನ್ನತಿಕರಣಕ್ಕೆ ಸರ್ಕಾರ ನಿರ್ಧಾರ
  • ಸಣ್ಣ ಕಂಪನಿಗಳ ವ್ಯವಹಾರದ ಮಿತಿಯಲ್ಲಿ ಹೆಚ್ಚಳ
  • 50 ಲಕ್ಷದಿಂದ 2 ಕೋಟಿಗೆ ಏರಿಕೆ ಮಾಡಿದ ಕೇಂದ್ರ
  • ಸರ್ಕಾರಿ ಸ್ವಾಮ್ಯದ ಕಂಪನಿಗಳಲ್ಲಿ ಬಂಡವಾಳ ಹಿಂತೆಗೆತ
  • ಎಲ್‌ಐಸಿಯಲ್ಲಿ ಬಂಡವಾಳ ಹಿಂತೆಗೆತ ಘೋಷಣೆ
  • 2 ಸರ್ಕಾರಿ ಬ್ಯಾಂಕುಗಳಲ್ಲಿ ಬಂಡವಾಳ ಹಿಂತೆಗೆತ
  • ಏರ್‌ ಇಂಡಿಯಾದಲ್ಲಿ ಬಂಡವಾಳ ಸಂಪೂರ್ಣ ಹಿಂತೆಗೆತ
  • ಏರ್‌ ಇಂಡಿಯಾ ಖಾಸಗಿಯವರಿಗೆ ಮಾರಾಟ
  • ಬಿಇಎಂಎಲ್‌, ಐಡಿಬಿಐ ಬ್ಯಾಂಕ್‌ನಲ್ಲಿ ಬಂಡವಾಳ ಹಿಂತೆಗೆತ
  • ಕೃಷಿ ತಿದ್ದುಪಡಿ ಕಾಯ್ದೆಯನ್ನ ಸಮರ್ಥಿಸಿಕೊಂಡ ಕೇಂದ್ರ ಸರ್ಕಾರ
  • ರೈತರ ಬೆಳೆಗೆ ಹೆಚ್ಚಿನ ಬೆಲೆ ಸಿಗಲಿದೆ ಎಂದು ಸಮರ್ಥನೆ
  • ರೈತರ ಬೆಲೆಗೆ ಬೆಂಬಲ ನೀಡಲು ಕೇಂದ್ರ ಸರ್ಕಾರ ಸಿದ್ಧ
  • ರೈತರ ಅಕೌಂಟ್‌ಗೆ ನೇರವಾಗಿ ಹಣ ಸಂದಾಯಕ್ಕೆ ಬದ್ಧ
  • ಕೃಷಿ ಉತ್ಪನ್ನಗಳಿಗೆ ಎಂಎಸ್‌ಪಿ ನೀಡಲು ಒಪ್ಪಿಗೆ
  • ಉದ್ಯಮ ಸರಳೀಕರಣಕ್ಕೆ ಕೇಂದ್ರದಿಂದ ಕ್ರಮ
  • ಎಂಎಸ್‌ಪಿ ಅಡಿಯಲ್ಲೇ ರೈತರಿಂದ ಉತ್ಪನ್ನ ಖರೀದಿ
  • ಗೋಧಿ ಬೆಂಬಲ ಬೆಲೆ ಹೆಚ್ಚಿಸಿದ್ದೇವೆ ಎಂದ ನಿರ್ಮಲಾ ಸೀತಾರಾಮ್‌
  • ಗೋಧಿಗಾಗಿ 33 ಸಾವಿರ ಕೋಟಿ ಬೆಂಬಲ ಬೆಲೆ ಕೊಟ್ಟಿದ್ದೇವೆ
  • 42 ಲಕ್ಷ ಜನ ಗೋಧಿ ಬೆಳೆಯುವ ರೈತರಿಗೆ ಇದ್ರಿಂದ ಅನುಕೂಲ ಆಗಿದೆ.
  • ಅಕ್ಕಿಗೂ ಬೆಂಬಲ ಬೆಲೆ ಹೆಚ್ಚಿಸಿದ್ದೇವೆ- ನಿರ್ಮಲಾ ಸೀತಾರಾಮ್‌
  • ಅಕ್ಕಿಗೆ 1.40 ಸಾವಿರ ಕೋಟಿ ರೂಪಾಯಿ ಬೆಂಬಲ ಬೆಲೆ
  • ಬೇಳೆಕಾಳುಗಳ ಖರೀದಿಗೆ 10,500 ಕೋಟಿ ಮೀಸಲು
  • ಆಹಾರ ಧಾನ್ಯಗಳ ಖರೀದಿಗೆ 1.41, 400 ಕೋಟಿ ವೆಚ್ಚ
  • ಕೃಷಿ ಇಲಾಖೆ ಸಾಲ ಗುರಿ- 6.7 ಲಕ್ಷ ರೂಪಾಯಿ
  • 22 ಬೆಳೆಗೆ ಬೆಳೆ ವಿಮೆ ಯೋಜನೆ ವಿಸ್ತರಣೆ
  • ಎಪಿಎಂಸಿಗಳ ಆಧುನಿಕರಣಕ್ಕೆ ಸರ್ಕಾರ ನಿರ್ಧಾರ
  • ರೈತರಿಗೆ ಸಾಲ ನೀಡಲು 16.5 ಕೋಟಿ ಅನುದಾನ
  • ಎಪಿಎಂಸಿಯಲ್ಲಿ ಜಿಡಿಟಲ್‌ ಬ್ಯಾಂಕಿಂಗ್‌ ಸಿಸ್ಟಂ
  • ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿಗೆ 40 ಸಾವಿರ ಕೋಟಿ ರೂಪಾಯಿ ಮೀಸಲು
  • 5 ಮೀನುಗಾರಿಗೆ ಬಂದರುಗಳ ಅಭಿವೃದ್ಧಿ
  • ತಮಿಳುನಾಡಿನಲ್ಲಿ ವಿಶೇಷ ಮೀನುಗಾರಿಕೆ ಯೋಜನೆ
  • ಒಂದು ದೇಶ ಒಂದು ರೇಷನ್‌ ಕಾರ್ಡ್ ಯೋಜನೆ ಜಾರಿ ಇದ್ರಿಂದ ದೇಶದ ವಲಸೆ ಕಾರ್ಮಿಕರಿಗೆ ಅನುಕೂಲವಾಗಲಿದೆ.69 ಕೋಟಿ ಜನರಿಗೆ ಈ ಯೋಜನೆಯಿಂದ ಲಾಭ.
  • ಎಲ್ಲಾ ಅಸಂಘಟಿತ ಕಾರ್ಮಿಕರಿಗೆ ಸಮಾನ ವೇತನ ಕಾಯ್ದೆ ಜಾರಿ
  • ದೇಶದಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ
  • ದೇಶದಲ್ಲಿ 100 ಸೈನಿಕ ಶಾಲೆಗಳ ಸ್ಥಾಪನೆ
  • ದೇಶದಲ್ಲಿ 15 ಸಾವಿರ ಹೊಸ ಶಾಲೆಗಳ ಸ್ಥಾಪನೆ
  • ಬುಡಕಟ್ಟು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಕ್ರಮ
  • ಬುಡಕಟ್ಟು ಪ್ರದೇಶಗಳಲ್ಲಿ ಮತ್ತಷ್ಟು ಶಾಲೆಗಳು ಆರಂಭ
  • ಎಸ್‌ಸಿ, ಎಸ್ಟಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ
  • ಎಸ್‌ಸಿ, ಎಸ್ಟಿ ಉದ್ಯಮಿಗಳಿಗೆ ಪ್ರೋತ್ಸಾಹ
  • ಲೇಹ್‌ನಲ್ಲಿ ಸದ್ಯದಲ್ಲೇ ಸೆಂಟ್ರಲ್‌ ವಿಶ್ವವಿದ್ಯಾಲಯ ಸ್ಥಾಪನೆ
  • ಗಿರಿಜನ ಪ್ರದೇಶಗಳಲ್ಲಿ ಏಕಲವ್ಯ ಶಾಲೆಗಳ ನಿರ್ಮಾಣ
  • 750 ಏಕಲವ್ಯ ಶಾಲೆಗಳ ನಿರ್ಮಾಣಕ್ಕೆ ನಿರ್ಧಾರ
  • ರಾಷ್ಟ್ರೀಯ ಭಾಷಾ ಅನುದಾನ ಮಿಷನ್‌ ಘೋಷಣೆ
  • ಡಿಸೆಂಬರ್‌ನಲ್ಲಿ ಭಾರತದ ಮಾನವರಹಿತ ಗಗನಯಾನ
  • ಬಾಹ್ಯಾಕಾಶಕ್ಕೆ ಮಾನವರಹಿತ ಗನನಯಾನ
  • ರಷ್ಯಾದಲ್ಲಿ ಭಾರತದ 4 ಗಗನಯಾತ್ರಿಗಳಿಗೆ ತರಬೇತಿ
  • ಮೊಟ್ಟ ಮೊದಲು ಜಿಡಿಟಲ್‌ ಜನಗಣತಿಗೆ ಯೋಜನೆ
  • 3768 ಕೋಟಿ ರೂ ವೆಚ್ಚದಲ್ಲಿ ಜನಗಣತಿ
  • ಅಸ್ಸಾಂ, ಪಶ್ಚಿಮಬಂಗಾಳ ಟೀ ಕಾರ್ಮಿಕರಿಗಾಗಿ 300 ಕೋಟಿ ರೂ ಯೋಜನೆ
  • ಪೋರ್ಚುಗೀಸರ ವಿಮೋಚನೆ ದಿನ ಆಚರಣೆಗೆ 300 ಕೋಟಿ
  • ಗೋವಾ ಸರ್ಕಾರಕ್ಕೆ 300 ಕೋಟಿ ಅನುದಾನ ನಿಗದಿ
  • ಮುಂದಿನ 3 ತಿಂಗಳಲ್ಲಿ ಮಾರುಕಟ್ಟೆಗಳಿಂದ 80 ಸಾವಿರ ಕೋಟಿ ಸಂಗ್ರಹ
  • 2021-22ರೊಳಗೆ ವಿತ್ತೀಯ ಕೊರತೆ ಜಿಡಿಪಿಯ 6.8ರಷ್ಟು ನಿರೀಕ್ಷೆ
  • ಆಹಾರ ನಿಗಮಕ್ಕೆ ನೀಡಲಾಗುತ್ತಿದ್ದ ಸಾಲ ರದ್ದು
  • ರಾಷ್ಟ್ರೀಯ ಭದ್ರತಾ ಸಾಮಾಜಿಕ ನಿಧಿಯಿಂದ ನೀಡುತ್ತಿದ್ದ ಸಾಲ ರದ್ದು
  • ಸರ್ಕಾರದ ಆದಾಯಕ್ಕೆ ಕೊರೋನಾದಿಂದ ಹೊಡೆತ ಬಿದ್ದಿದೆ
  • ನೇರ ತೆರಿಗೆಯಲ್ಲಿ ಬದಲಾವಣೆ
  • ಹಿರಿಯ ನಾಗರಿಕರಿಗೆ ಬಿಗ್ ರಿಲೀಫ್‌. 75 ವರ್ಷ ಮೇಲ್ಪಟ್ಟ ವೃದ್ಧರಿಗೆ ರಿಲೀಫ್‌. ಪಿಂಚಣಿದಾರರಿಗೂ ಗುಡ್‌ ನ್ಯೂಸ್‌ ಕೊಟ್ಟ ಕೇಂದ್ರ.75 ವರ್ಷಕ್ಕೂ ಮೇಲ್ಪಟ್ಟ ಪಿಂಚಣಿದಾರರಿಗೆ ತೆರಿಗೆ ಇಲ್ಲ. ಪೆನ್ಷನ್‌ ಮತ್ತು ಠೇವಣಿ ಮೇಲೆ ಬಡ್ಡಿಗೆ ಟ್ಯಾಕ್ಸ್ ಇಲ್ಲ
  • 15 ಲಕ್ಷಕ್ಕೂ ಹೆಚ್ಚು ತೆರಿಗೆ ವಂಚನೆ ಆದ್ರೆ ಮಾತ್ರ ಕೇಸ್
  • ಅನಿವಾಸಿ ಭಾರತೀಯರಿಗೆ ಏಕ ತೆರಿಗೆ ಪದ್ಧತಿ ಜಾರಿ
  • ತೆರಿಗೆ ಪ್ರಕರಣಗಳ ಮರುತನಿಖೆ ಅವಧಿ 3 ವರ್ಷಕ್ಕೆ ಇಳಿಕೆ
  • ರಿಯಲ್‌ ಎಸ್ಟೇಟ್‌ಗೆ ಬಿಗ್‌ ರಿಲೀಫ್‌ ಕೊಟ್ಟ ಕೇಂದ್ರ
  • ಕಾರ್ಮಿಕರಿಗೆ ಬಾಡಿಗೆ ಮನೆ ನೀಡುವವರಿಗೆ ತೆರಿಗೆ ವಿನಾಯ್ತಿ
  • ಚಾರಿಟೇಬಲ್‌ ಟ್ರಸ್ಟ್‌ಗೆ ತೆರಿಗೆ ವಿನಾಯ್ತಿ
  • ಸ್ಟಾರ್ಟಪ್‌ಗಳಿಗೆ ತೆರಿಗೆ ರಜೆ ಘೋಷಣೆ
  • ಇನ್ನೊಂದು ವರ್ಷ ತೆರಿಗೆ ಘೋಷಿಸಿದ ಕೇಂದ್ರ ಸರ್ಕಾರ
  • ಜಿಎಸ್‌ಟಿ ತೆರಿಗೆ ಸರಳಿಕರಣಕ್ಕೆ ಕೇಂದ್ರ ಸರ್ಕಾರ ಕ್ರಮ
  • ಕಂಪನಿಗಳು ತಡವಾಗಿ ಪಿಎಫ್‌ ಕಟ್ಟುವಂತಿಲ್ಲ
  • ಅಬಕಾರಿ ಸುಂಕದಲ್ಲಿ ಭಾರೀ ಬದಲಾವಣೆ
  • 400 ತೆರಿಗೆ ವಿನಾಯ್ತಿಗಳ ಬಗ್ಗೆ ಪರಿಶೀಲನೆ
  • ಎಲೆಕ್ಟ್ರಾನಿಕ್ಸ್ ವಸ್ತುಗಳ ಅಬಕಾರಿ ಸುಂಕ ಹೆಚ್ಚಳ
  • ಶೇ.2.5ರಷ್ಟು ಅಬಕಾರಿ ಸುಂಕ ಹೆಚ್ಚಿಸಿದ ಕೇಂದ್ರ
  • ಮೊಬೈಲ್‌ ಬಿಡಿಭಾಗಗಳ ಆಮದು ಸುಂಕ ಕಡಿತ
  • ಜವಳಿ, ಉಕ್ಕು ಉತ್ಪನ್ನಗಳ ಮೇಲಿನ ಅಬಕಾರಿ ಸುಂಕ ಹೆಚ್ಚಳ
  • ಎಲೆಕ್ಟ್ರಾನಿಕ್ಸ್ ವಸ್ತುಗಳ ಬೆಲೆ ದುಬಾರಿ
  • ಚಿನ್ನದ ಮೇಲೆ ಆಮದು ಸುಂಕ ಹೆಚ್ಚಳ ಇಲ್ಲ
  • ಚಿನ್ನದ ಮೇಲೆ ಶೇ. 12.5ರಷ್ಟು ತೆರಿಗೆ ಮುಂದುವರಿಕೆ
  • ಆಟೋ ಉತ್ಪನ್ನಗಳ ಮೇಲೆ ತೆರಿಗೆ ಹೆಚ್ಚಳ
  • ಬಣ್ಣಗಳ ಬೆಲೆ ಕಡಿಮೆ ಆಗಲಿದೆ
  • ರೇಷ್ಮೆ, ಸೋಲಾರ್, ಇನ್ವರ್ಟರ್ಗಳ ಬೆಲೆ ಏರಿಕೆ

 

RELATED ARTICLES

Related Articles

TRENDING ARTICLES