Sunday, December 22, 2024

ಗಾಂಜಾದ ಮತ್ತೇರಿಸಿಕೊಂಡು ನಡು ರಸ್ತೆಯಲ್ಲಿ ಪುಂಡರ ಗಲಾಟೆ

ಹಾಸನ: ಜಿಲ್ಲೆಯಲ್ಲಿ ಕುಡಿದು ಗಲಾಟೆ ಮಾಡುವ ಪುಂಡರ ಹಾವಳಿ ಹೆಚ್ಚಾಗಿದ್ದು, ನಡು ರಸ್ತೆಯಲ್ಲಿ ನಿಂತು ಯುವಕರ ಎರಡು ಗುಂಪು ರಾತ್ರಿ ಕಿತ್ತಾಡಿಗೊಂಡಿರುವುದು, ನಗರದ ಪಂಚಮುಖಿ ವೃತ್ತದಲ್ಲಿ ನಡೆದಿದೆ.‌

ರಸ್ತೆಯ ಮಧ್ಯೆ ನಿಂತು ಎರಡು ಗುಂಪಿನ ಯುವಕರು ಅವಾಝ್ ಹಾಕುತ್ತಾ, ಕೈ ಕೈ ಮಿಲಾಯಿಸುತ್ತಾ ಕಿತ್ತಾಡಿಕೊಳ್ಳುತ್ತಾರೆ, ಅಲ್ಲದೆ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗೆ ರೌಡಿಸಂ ಪೋಸ್ ಕೊಟ್ಟು ಹೆದರಿಸುವ ಪ್ರಯತ್ನ ಮಾಡುತ್ತಾರೆ. ಈ ಘಟನೆಯ ದೃಶ್ಯವೆಲ್ಲವನ್ನೂ ಸ್ಥಳೀಯರೊಬ್ಬರು ತಮ್ಮ ಮನೆಯ ಮೇಲೆ ‌ನಿಂತು ರೆಕಾರ್ಡ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರತಿನಿತ್ಯವೂ‌ ಕುಡಿದು ಪುಂಡರು ಇದೇ ರೀತಿ ಗಲಾಟೆ ಮಾಡುತ್ತಿರುತ್ತಾರೆ, ಕೇಳಿದರೆ ನಮ್ಮ ಮೆಲೇಯೇ ಹಲ್ಲೆ ಮಾಡೋದಕ್ಕೆ ಬರುತ್ತಾರೆ ಎಂದು ಸ್ಥಳಿಯರು ಆರೋಪಿಸುತ್ತಿದ್ದಾರೆ.

ಕುಡಿಯುವುದಷ್ಟೇ ಅಲ್ಲದೇ ಗಾಂಜಾದ ಮತ್ತೇರಿಸಿಕೊಂಡು ಗಲಾಟೆ ಮಾಡುತ್ತಾರೆ. ಸಂಬಂಧಪಟ್ಟವರು ಕ್ರಮಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸುತ್ತಿದ್ದಾರೆ. ಹಾಸನ ನಗರ, ಚನ್ನರಾಯಪಟ್ಟಣ ತಾಲ್ಲೂಕು ಸೇರಿದಂತೆ ಜಿಲ್ಲಾದ್ಯಂತ ಕುಡಿದು ಗಲಾಟೆ ಮಾಡುವ ಪ್ರಕರಣಗಳು ಹೆಚ್ಚಾಗಿದ್ದು, ಈಗಾಗಲೇ ಇಂತಹವುಗಳಿಂದಲೇ ಐದು‌ ಮಂದಿ‌ ಸಾವನ್ನಪ್ಪಿದ್ದಾರೆ‌. ಇಂತಹ ಘಟನೆಗಳಿಗೆ ಪೊಲೀಸ್ ಇಲಾಖೆ ಕಡಿವಾಣ ಹಾಕಬೇಕಾಗಿದೆ.

RELATED ARTICLES

Related Articles

TRENDING ARTICLES