Wednesday, January 22, 2025

ಕಸದ ತೊಟ್ಟಿಯಲ್ಲಿ ನವಜಾತ ಶಿಶು ಪತ್ತೆ..!

ಉಡುಪಿ : ನಗರದ ಸರ್ಕಾರಿ ಆಸ್ಪತ್ರೆಯ ಎದುರಿನ ಕಸದ ತೊಟ್ಟಿಯಲ್ಲಿ ನವಜಾತ ಶಿಶು ಪತ್ತೆಯಾಗಿದೆ. 

ಕೂಸಮ್ಮ ಶಂಭು ಶೆಟ್ಟಿ ಮತ್ತು ಹಾಜಿ ಅಬ್ದುಲ್ಲಾ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಎದುರು ಇರುವ ಹೋಟೆಲ್ ಬಳಿಯ ತ್ಯಾಜ್ಯದ ತೊಟ್ಟಿಗೆ ನವಜಾತ ಹೆಣ್ಣು ಮಗುವನ್ನು ಎಸೆದು ಹೋಗಿದ್ದಾರೆ. ಇಂದು ಬೆಳಗ್ಗೆ ನಗರ ಸಭೆಯ ಸ್ವಚ್ಚತಾ ಸಿಬ್ಬಂದಿ ಹೊಟೇಲ್‌ನವರು ಎಸೆದ ಬಾಳೆ ಎಲೆಯ ತ್ಯಾಜ್ಯ ಸಂಗ್ರಹಿಸಲು ಬಂದಾಗ ಮಗುವನ್ನು ಕಂಡಿದ್ದಾರೆ.

ತ್ಯಾಜ್ಯ ತುಂಬಿದ್ದ ಪೆಯಿಂಟ್ ಡಬ್ಬಿಯ ಒಳಗೆ ಬಾಳೆ ಎಲೆಯ ಮಧ್ಯೆ ಆಗಷ್ಟೇ ಜನ್ಮ ತಾಳಿದ ಶಿಶು ಕೂಗುವುದನ್ನು ಗಮನಿಸಿದ ಕಾರ್ಮಿಕರು ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಬಂದ ಒಳಕಾಡು ಅವರು ಅಲ್ಲೆ ಇರುವ ಆಸ್ಪತ್ರೆಗೆ ಶಿಶುವನ್ನು ಆರೈಕೆಗೆ ತೆಗೆದುಕೊಂಡು ಹೋಗಿದ್ದಾರೆ. ಮಗು ಸದ್ಯ ಆರೋಗ್ಯವಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

RELATED ARTICLES

Related Articles

TRENDING ARTICLES