Saturday, May 18, 2024

ಹೆರಿಗೆ ವಾರ್ಡ್​ನಲ್ಲಿ ವೈದ್ಯರ ಕೊರತೆ | ಹೆರಿಗೆ ಮಾಡುವ ವೈದ್ಯರಿಗೂ ಒಕ್ಕರಿಸಿದ ಕೊರೋನಾ

ವಿಜಯಪುರ: ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ಹೆರಿಗೆ ಮಾಡಿಸಲು ವೈದ್ಯರ ಕೊರತೆ ಎದುರಾಗಿದೆ. ಸ್ತ್ರೀ ರೋಗ ಹಾಗೂ ಅರವಳಿಕೆ ತಜ್ಞರಿಗೂ ಕೊರೋನಾ ಸೋಂಕು ತಗುಲಿದೆ, ಇದರಿಂದ ಹೆರಿಗೆ ವಾರ್ಡ್​ನಲ್ಲಿ ಸಮಸ್ಯೆ ಉಲ್ಬಣಗೊಂಡಿದೆ. ಕಳೆದ ಐದು ತಿಂಗಳಿಂದ ಈಚೆಗೆ ಜಿಲ್ಲಾಸ್ಪತ್ರೆಯಲ್ಲಿ ತಾಯಿ ಮತ್ತು ಮಕ್ಕಳ ಚಿಕಿತ್ಸೆಯ ವಾರ್ಡ್​ ಆರಂಭಗೊಂಡಿದೆ. ಇದೇ ವೇಳೆ ಕೊರೋನಾ ಜಿಲ್ಲಾದ್ಯಂತ ಹಬ್ಬಿದ ಕಾರಣ, ಖಾಸಗಿ ಹೆರಿಗೆ ಆಸ್ಪತ್ರೆಯ ಗರ್ಭಿಣಿಯರು ಇದೇ ಆಸ್ಪತ್ರೆ ದಾಖಲಾಗುತ್ತಿದ್ದಾರೆ. ಇದರಿಂದ ವೈದ್ಯರ ಕೊರೊತೆಯೂ ಹೆಚ್ಚಾಗಿದೆ.

ಈ ಮೊದಲು ನಿತ್ಯ 30-40 ಹೆರಿಗೆಗಳು ಆಗುತ್ತಿದ್ದವು. ಅವುಗಳಲ್ಲಿ ಹೆಚ್ಚಾಗಿ ಸಿಜೇರಿಯನ್ ಮೂಲಕವೇ ಆಗುವ ಕಾರಣ ಇಲ್ಲಿನ ವೈದ್ಯರಿಗೆ ಬಿಡುವೇ ಇಲ್ಲದಂತಾಗಿತ್ತು. ಇದರ ನಡುವೆ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇಬ್ಬರು ಸ್ತ್ರೀ ರೋಗ ತಜ್ಞರು, ಮೂವರು ಅರವಳಿಕೆ ತಜ್ಞರು ಹಾಗೂ ಓರ್ವ ಪೆಥಾಲಾಜಿಸ್ಟ್​​ಗೆ ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಸಮಸ್ಯೆ ಉಂಟಾಗಿದೆ. ಹೆಚ್ಚುವರಿಯಾಗಿ ಜಿಲ್ಲೆಯ ವಿವಿಧ ತಾಲ್ಲೂಕು ಕೇಂದ್ರಗಳಿಂದಲೂ ವೈದ್ಯರನ್ನು ಎರವಲು ಸೇವೆಗೆ ನಿಯೋಜಿಸಲಾಗಿದೆ. ಆದರೆ ರಾತ್ರಿ ವೇಳೆ ಹೆರಿಗೆ ನೋವು ಕಾಣಿಸಿಕೊಂಡರೆ, ಇಲ್ಲವೇ ತುರ್ತು ಹೆರಿಗೆಗೆ ಬರುವ ಗರ್ಭಿಣಿಯರಿಗೆ ಬೇರೆ ಆಸ್ಪತ್ರೆಗೆ ಹೋಗುವಂತೆ ಸೂಚನೆ ನೀಡಲಾಗುತ್ತಿದೆ. ಇನ್ನೂ ಬೇರೆ ವೈದ್ಯರನ್ನು ಆದಷ್ಟು ಬೇಗ ನೇಮಕ ಮಾಡಬೇಕು ಎಂಬುದು ರೋಗಿಗಳ ಸಂಬಂಧಿಕರ ಬೇಡಿಕೆಯಾಗಿದೆ.

RELATED ARTICLES

Related Articles

TRENDING ARTICLES