ಪೋರ್ಟ್ ಆಫ್ ಸ್ಪೇನ್: ಪ್ರವಾಸಿ ಭಾರತ ತಂಡದ ವಿರುದ್ಧದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ವಿಂಡೀಸ್ ದೈತ್ಯ ಕ್ರಿಸ್ ಗೇಲ್ರವರು ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ರು. ಇದು ಅವರ 301ನೆ ಏಕದಿನ ಪಂದ್ಯವಾಗಿದ್ದು ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಪಂದ್ಯವನ್ನು ಮತ್ತಷ್ಟು ಸ್ಮರಣೀಯವನ್ನಾಗಿಸಿದ್ರು.
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಕೆರಿಬಿಯನ್ ತಂಡಕ್ಕೆ ಆರಂಭಿಕ ದಾಂಡಿಗ ಗೇಲ್ ಭದ್ರ ಬುನಾದಿ ಹಾಕಿದ್ರು. ಯೂನಿವರ್ಸಲ್ ಬಾಸ್ ಗೇಲ್, ಸಿಕ್ಸರ್ ಸಿಡಿಸುವುದ್ರ ಮೂಲಕ ತಮ್ಮ ವಯಕ್ತಿಕ ಖಾತೆ ತೆರೆದ್ರು. ಆರಂಭದಿಂದಲೇ ಅಬ್ಬರಿಸಿದ ಅವ್ರು ಭಾರತೀಯ ಬೌಲರ್ಗಳನ್ನು ಬೆಂಡೆತ್ತಿದ್ರು. ಮೈದಾನದ ಮೂಲೆ ಮೂಲೆಗೂ ಚೆಂಡನ್ನಟ್ಟಿದ ಗೇಲ್ ಬೌಂಡರಿ ಸಿಕ್ಸರ್ಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ರು. ಕೇವಲ 41 ಎಸೆತಗಳಿಗೆ 72 ರನ್ಗಳನ್ನು ಗಳಿಸಿದ ಅವ್ರು ಭಾರತೀಯ ಬೌಲರ್ಗಳನ್ನು ಪರದಾಡುವಂತೆ ಮಾಡಿದ್ರು. ಅವರ ಇನ್ನಿಂಗ್ಸ್ನಲ್ಲಿ 5 ಭರ್ಜರಿ ಸಿಕ್ಸರ್ ಹಾಗೂ 8 ಬೌಂಡರಿಗಳು ಸೇರಿದ್ದವು. ಅಂತಿಮವಾಗಿ ಖಲೀಲ್ ಅಹ್ಮದ್ ಅವ್ರ ಬೌಲಿಂಗ್ನಲ್ಲಿ ವಿರಾಟ್ ಕೊಹ್ಲಿ ಅವರಿಗೆ ಕ್ಯಾಚ್ ನೀಡಿ ನಿರ್ಗಮಿಸಿದ ಕ್ರಿಸ್ ಗೇಲ್ ಅವರಿಗೆ ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ಹೊಡೆದ್ರು. ಅಲ್ಲದೇ ಟೀಮ್ ಇಂಡಿಯಾ ಪ್ಲೇಯರ್ಸ್ ಕೂಡ ಯೂನಿವರ್ಸಲ್ ಬಾಸ್ ಗೇಲ್ ಅವರಿಗೆ ಅಭಿನಂದನೆ ಸಲ್ಲಿಸಿದ್ರು.
ಇನ್ನು ಇಂದು ತನ್ನ 301ನೇ ಏಕದಿನ ಪಂದ್ಯವನ್ನಾಡಿದ ಗೇಲ್ ಅವರಿಗೆ ವಿಂಡೀಸ್ ಕ್ರಿಕೆಟ್ ಮಂಡಳಿ ಸ್ಪೆಷಲ್ ಗಿಫ್ಟ್ ನೀಡಿದೆ. ಈ ಹಿಂದೆ ಕ್ರಿಸ್ ಗೇಲ್ರವರು ಜೆರ್ಸಿ ನಂಬರ್ 45 ಅನ್ನು ಧರಿಸಿ ಆಡ್ತಿದ್ರು. ಆದ್ರೆ ಇಂದಿನ ಪಂದ್ಯಕ್ಕಾಗಿ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ತಮ್ಮ ಲೆಜೆಂಡ್ ಆಟಗಾರನಿಗೆ 301ನೇ ನಂಬರಿನ ಜೆರ್ಸಿಯನ್ನು ಉಡುಗೊರೆಯನ್ನಾಗಿ ನೀಡಿತು. ಈ ಕುರಿತಂತೆ ವಿಂಡೀಸ್ ಕ್ರಿಕೆಟ್ ಮಂಡಳಿ ಟ್ವೀಟ್ ಮಾಡಿದ್ದು, ವಿಶೇಷ ಪಂದ್ಯಕ್ಕೆ ವಿಶೇಷ ಜೆರ್ಸಿ ಎಂದು ಟ್ವೀಟ್ ಮಾಡಿದೆ.