Saturday, May 11, 2024

301ನೇ ಪಂದ್ಯದಲ್ಲಿ ಕ್ರಿಸ್​​​​ ಗೇಲ್​ ಭರ್ಜರಿ ಬ್ಯಾಟಿಂಗ್​: ವಿಂಡೀಸ್​ ಕ್ರಿಕೆಟ್​ ಮಂಡಳಿಯಿಂದ ಸ್ಪೆಷಲ್​ ಗಿಫ್ಟ್​​​​​

ಪೋರ್ಟ್​​ ಆಫ್​ ಸ್ಪೇನ್​: ಪ್ರವಾಸಿ ಭಾರತ ತಂಡದ ವಿರುದ್ಧದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ವಿಂಡೀಸ್​ ದೈತ್ಯ ಕ್ರಿಸ್​ ಗೇಲ್​​ರವರು ಸ್ಫೋಟಕ ಬ್ಯಾಟಿಂಗ್​​ ಪ್ರದರ್ಶಿಸಿದ್ರು. ಇದು ಅವರ 301ನೆ ಏಕದಿನ ಪಂದ್ಯವಾಗಿದ್ದು ಸಿಡಿಲಬ್ಬರದ ಬ್ಯಾಟಿಂಗ್​ ಮೂಲಕ ಪಂದ್ಯವನ್ನು ಮತ್ತಷ್ಟು ಸ್ಮರಣೀಯವನ್ನಾಗಿಸಿದ್ರು.

ಟಾಸ್​ ಗೆದ್ದು ಬ್ಯಾಟಿಂಗ್​​ ಆರಂಭಿಸಿದ ಕೆರಿಬಿಯನ್​ ತಂಡಕ್ಕೆ ಆರಂಭಿಕ ದಾಂಡಿಗ ಗೇಲ್​ ಭದ್ರ ಬುನಾದಿ ಹಾಕಿದ್ರು. ಯೂನಿವರ್ಸಲ್​​ ಬಾಸ್​​​ ಗೇಲ್​​, ಸಿಕ್ಸರ್​ ಸಿಡಿಸುವುದ್ರ ಮೂಲಕ ತಮ್ಮ ವಯಕ್ತಿಕ ಖಾತೆ ತೆರೆದ್ರು. ಆರಂಭದಿಂದಲೇ ಅಬ್ಬರಿಸಿದ ಅವ್ರು ಭಾರತೀಯ ಬೌಲರ್​ಗಳನ್ನು ಬೆಂಡೆತ್ತಿದ್ರು. ಮೈದಾನದ ಮೂಲೆ ಮೂಲೆಗೂ ಚೆಂಡನ್ನಟ್ಟಿದ ಗೇಲ್​​​ ಬೌಂಡರಿ ಸಿಕ್ಸರ್​​ಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ರು. ಕೇವಲ 41 ಎಸೆತಗಳಿಗೆ 72 ರನ್​ಗಳನ್ನು ಗಳಿಸಿದ ಅವ್ರು ಭಾರತೀಯ ಬೌಲರ್​ಗಳನ್ನು ಪರದಾಡುವಂತೆ ಮಾಡಿದ್ರು. ಅವರ ಇನ್ನಿಂಗ್ಸ್​​​​​ನಲ್ಲಿ 5 ಭರ್ಜರಿ ಸಿಕ್ಸರ್​​​ ಹಾಗೂ 8 ಬೌಂಡರಿಗಳು ಸೇರಿದ್ದವು. ಅಂತಿಮವಾಗಿ ಖಲೀಲ್​ ಅಹ್ಮದ್​​ ಅವ್ರ ಬೌಲಿಂಗ್​ನಲ್ಲಿ ವಿರಾಟ್​​ ಕೊಹ್ಲಿ ಅವರಿಗೆ ಕ್ಯಾಚ್​​ ನೀಡಿ ನಿರ್ಗಮಿಸಿದ ಕ್ರಿಸ್​ ಗೇಲ್​ ಅವರಿಗೆ ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ಹೊಡೆದ್ರು. ಅಲ್ಲದೇ ಟೀಮ್​ ಇಂಡಿಯಾ ಪ್ಲೇಯರ್ಸ್​​​ ಕೂಡ ಯೂನಿವರ್ಸಲ್​ ಬಾಸ್​ ಗೇಲ್​ ಅವರಿಗೆ ಅಭಿನಂದನೆ ಸಲ್ಲಿಸಿದ್ರು.

ಇನ್ನು ಇಂದು ತನ್ನ 301ನೇ ಏಕದಿನ ಪಂದ್ಯವನ್ನಾಡಿದ ಗೇಲ್​ ಅವರಿಗೆ ವಿಂಡೀಸ್​​ ಕ್ರಿಕೆಟ್​​ ಮಂಡಳಿ ಸ್ಪೆಷಲ್​ ಗಿಫ್ಟ್​​ ನೀಡಿದೆ. ಈ ಹಿಂದೆ ಕ್ರಿಸ್​ ಗೇಲ್​​ರವರು ಜೆರ್ಸಿ ನಂಬರ್​​​ 45 ಅನ್ನು ಧರಿಸಿ ಆಡ್ತಿದ್ರು. ಆದ್ರೆ ಇಂದಿನ ಪಂದ್ಯಕ್ಕಾಗಿ ವೆಸ್ಟ್​​ ಇಂಡೀಸ್​ ಕ್ರಿಕೆಟ್​ ಮಂಡಳಿ ತಮ್ಮ ಲೆಜೆಂಡ್​ ಆಟಗಾರನಿಗೆ 301ನೇ ನಂಬರಿನ ಜೆರ್ಸಿಯನ್ನು ಉಡುಗೊರೆಯನ್ನಾಗಿ ನೀಡಿತು. ಈ ಕುರಿತಂತೆ ವಿಂಡೀಸ್ ಕ್ರಿಕೆಟ್ ಮಂಡಳಿ ಟ್ವೀಟ್ ಮಾಡಿದ್ದು, ವಿಶೇಷ ಪಂದ್ಯಕ್ಕೆ ವಿಶೇಷ ಜೆರ್ಸಿ ಎಂದು ಟ್ವೀಟ್ ಮಾಡಿದೆ.

RELATED ARTICLES

Related Articles

TRENDING ARTICLES