ನವದೆಹಲಿ: ಪ್ರಸ್ತುತ ಟೀಮ್ ಇಂಡಿಯಾ ಕೋಚ್ ಆಗಿರುವ ರವಿಶಾಸ್ತ್ರಿಯವರ ಅವಧಿ ಮುಕ್ತಾಯಗೊಳ್ಳಲಿದ್ದು, ಹೀಗಾಗಿ ಇತ್ತೀಚಿಗೆ ಬಿಸಿಸಿಐ ಕೋಚ್ ಹುದ್ದೆಗೆ ಅರ್ಜಿ ಕರೆದಿತ್ತು. ಹೀಗಾಗಿ ರವಿಶಾಸ್ತ್ರಿ ಸೇರಿದಂತೆ ಆಸ್ಟ್ರೇಲಿಯಾದ ಟಾಮ್ ಮೂಡಿ, ನ್ಯೂಜಿಲೆಂಡ್ನ ಮಾಜಿ ಕೋಚ್ ಮೈಕ್ ಹೆಸ್ಸೋನ್, ಶ್ರೀಲಂಕಾದ ಮಾಜಿ ಆಟಗಾರ ಮಹೇಲಾ ಜಯವರ್ಧನೆ, ಭಾರತದ ಮಾಜಿ ಆಲ್ರೌಂಡರ್ ರಾಬಿನ್ ಸಿಂಗ್, ಜಿಂಬಾಬ್ವೆಯ ಮಾಜಿ ಕೋಚ್ ಲಾಲ್ಚಾಂದ್ ರಜಪೂತ್ ಮತ್ತಿರರು ಅರ್ಜಿ ಸಲ್ಲಿಸಿದ್ದರು.
ಇದೀಗ ಅರ್ಇಯನ್ನು ಪರಿಶೀಲನೆ ನಡೆಸಿರುವ ಕೋಚ್ ಆಯ್ಕೆ ಸಮಿತಿ ರವಿಶಾಸ್ತ್ರಿ, ಅಫಘಾನಿಸ್ತಾನದ ಫಿಲ್ ಸಿಮನ್ಸ್, ಮೈಕ್ ಹೆಸ್ಸೋನ್, ಟಾಮ್ ಮೂಡಿ, ರಾಬಿನ್ ಸಿಂಗ್, ಲಾಲ್ಚಾಂದ್ ರಜಪೂತ್ರವರ ಹೆಸರನ್ನು ಸಂದರ್ಶನಕ್ಕಾಗಿ ಅಂತಿಮಗೊಳಿಸಿದೆ. ಈ ಆರು ಜನ್ರಲ್ಲಿ ಟೀಮ್ ಇಂಡಿಯಾ ಕೋಚ್ ಯಾರಗಲಿದ್ದಾರೆ ಎಂದು ಕಾದು ನೋಡಬೇಕಾಗಿದೆ.