Sunday, May 12, 2024

  ಈ ಆರು ಜನ್ರಲ್ಲಿ ಯಾರಾಗಲಿದ್ದಾರೆ ಟೀಮ್​ ಇಂಡಿಯಾ ಕೋಚ್​?

ನವದೆಹಲಿ: ಪ್ರಸ್ತುತ ಟೀಮ್​ ಇಂಡಿಯಾ ಕೋಚ್​ ಆಗಿರುವ ರವಿಶಾಸ್ತ್ರಿಯವರ ಅವಧಿ ಮುಕ್ತಾಯಗೊಳ್ಳಲಿದ್ದು, ಹೀಗಾಗಿ ಇತ್ತೀಚಿಗೆ ಬಿಸಿಸಿಐ ಕೋಚ್​ ಹುದ್ದೆಗೆ ಅರ್ಜಿ ಕರೆದಿತ್ತು. ಹೀಗಾಗಿ ರವಿಶಾಸ್ತ್ರಿ ಸೇರಿದಂತೆ ಆಸ್ಟ್ರೇಲಿಯಾದ ಟಾಮ್​ ಮೂಡಿ, ನ್ಯೂಜಿಲೆಂಡ್​ನ ಮಾಜಿ ಕೋಚ್​ ಮೈಕ್​ ಹೆಸ್ಸೋನ್​, ಶ್ರೀಲಂಕಾದ ಮಾಜಿ ಆಟಗಾರ ಮಹೇಲಾ ಜಯವರ್ಧನೆ, ಭಾರತದ ಮಾಜಿ ಆಲ್​ರೌಂಡರ್​ ರಾಬಿನ್​ ಸಿಂಗ್​, ಜಿಂಬಾಬ್ವೆಯ ಮಾಜಿ ಕೋಚ್​​ ಲಾಲ್​ಚಾಂದ್​ ರಜಪೂತ್​​​ ಮತ್ತಿರರು ಅರ್ಜಿ ಸಲ್ಲಿಸಿದ್ದರು.

ಇದೀಗ ಅರ್ಇಯನ್ನು ಪರಿಶೀಲನೆ ನಡೆಸಿರುವ ಕೋಚ್​ ಆಯ್ಕೆ ಸಮಿತಿ ರವಿಶಾಸ್ತ್ರಿ, ಅಫಘಾನಿಸ್ತಾನದ ಫಿಲ್​ ಸಿಮನ್ಸ್​​, ಮೈಕ್​​​ ಹೆಸ್ಸೋನ್​, ಟಾಮ್​​ ಮೂಡಿ, ರಾಬಿನ್​ ಸಿಂಗ್​​, ಲಾಲ್​ಚಾಂದ್​ ರಜಪೂತ್​​​ರವರ ಹೆಸರನ್ನು ಸಂದರ್ಶನಕ್ಕಾಗಿ ಅಂತಿಮಗೊಳಿಸಿದೆ. ಈ ಆರು ಜನ್ರಲ್ಲಿ ಟೀಮ್​​ ಇಂಡಿಯಾ ಕೋಚ್​ ಯಾರಗಲಿದ್ದಾರೆ ಎಂದು ಕಾದು ನೋಡಬೇಕಾಗಿದೆ.

RELATED ARTICLES

Related Articles

TRENDING ARTICLES