Thursday, November 7, 2024

ಪಕ್ಷೇತರ ಅಭ್ಯರ್ಥಿಯೇ ನಾಪತ್ತೆ..!

ಶಿವಮೊಗ್ಗ: ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಮೊದಲನೇ ಹಂತದ ಮತದಾನ ನಿನ್ನೆಯಷ್ಟೇ ನಡೆದಿದೆ. ಎರಡನೇ ಹಂತದ ಮತದಾನ 23 ರಂದು ನಡೆಯಲಿದ್ದು, ಶಿವಮೊಗ್ಗದ ಪಕ್ಷೇತರ ಅಭ್ಯರ್ಥಿಯೂಸುಫ್​ ಖಾನ್​ ನಾಪತ್ತೆಯಾಗಿದ್ದಾರೆ. ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು ಯೂಸುಫ್ ಖಾನ್ ಅವರು ಮಧ್ಯರಾತ್ರಿ ನಾಪತ್ತೆಯಾಗಿರುವುದು ಹಲವು ಸಂಶಯಗಳಿಗೆಡೆ ಮಾಡಿದೆ.

ಯೂಸುಫ್​ ನಾಪತ್ತೆಯಾಗಿರುವ ಬಗ್ಗೆ ಅವರ ಪುತ್ರ ತುಂಗಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಯೂಸುಫ್​ ಕಾಣೆಯಾಗುವ ಮುನ್ನ ಹತ್ತೇ ನಿಮಿಷದಲ್ಲಿ ವಾಪಸ್‌ ಬರುವುದಾಗಿ ಹೇಳಿ ಹೊರಟಿದ್ದರು. ಆದರೆ ಮರಳಿ ಬಾರದಿರುವುದರಿಂದ ಅವರ ಪುತ್ರ ದೂರು ದಾಖಲಿಸಿದ್ದಾರೆ. ತುಂಗಾನಗರ ಠಾಣೆ ಪೊಲೀಸರು ಕಾಣೆಯಾದ ಅಭ್ಯರ್ಥಿಗಾಗಿ ಹುಡುಕಾಟ ನಡೆಸಿದ್ದಾರೆ.

ರಾಜ್ಯದಲ್ಲಿ 23ರಂದು ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ನಡೆಯಲಿದ್ದು, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜನರು ಅಂದು ಮತ ಚಲಾಯಿಸಲಿದ್ದಾರೆ. ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಅವರ ತವರೂರು ಶಿವಮೊಗ್ಗದಲ್ಲಿ ಅವರ ಪುತ್ರ ಬಿ. ವೈ. ರಾಘವೇಂದ್ರ ಅವರು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಮೈತ್ರಿ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಸ್ಪರ್ಧಿಸಲಿದ್ದಾರೆ.

RELATED ARTICLES

Related Articles

TRENDING ARTICLES