ಪ್ಲೋರಿಡಾ : ಡಬಲ್ ಸೆಂಚುರಿ ಸ್ಟಾರ್. ಟೀಮ್ ಇಂಡಿಯಾದ ಉಪ ನಾಯಕ ರೋಹಿತ್ ಶರ್ಮಾ ಮತ್ತೊಂದು ವಿಶ್ವ ದಾಖಲೆ ಮಾಡಿದ್ದಾರೆ.
ಅಮೆರಿಕಾದ ಪ್ಲೋರಿಡಾದ ಲಾಡರ್ ಹಿಲ್ನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟಿ20 ಮ್ಯಾಚ್ನಲ್ಲಿ ರೋಹಿತ್ ಶರ್ಮಾ ಭರ್ಜರಿ ಬ್ಯಾಟಿಂಗ್ ನಡೆಸಿದ್ದಾರೆ. ಇಂದಿನ ಮ್ಯಾಚ್ನಲ್ಲಿ ರೋಹಿತ್ 3 ಸಿಕ್ಸರ್ಗಳನ್ನು ಬಾರಿಸಿದ್ದಾರೆ. ಈ ಮೂಲಕ ಇಂಟರ್ನ್ಯಾಷನಲ್ ಟಿ20ಯಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟ್ಸ್ಮನ್ ಅನ್ನೋ ದಾಖಲೆ ಬರೆದಿದ್ದಾರೆ.
ಭಾರತದ ಈ ಪ್ರವಾಸಕ್ಕೂ ಮುನ್ನೆ ವೆಸ್ಟ್ ಇಂಡೀಸ್ನ ಕ್ರಿಸ್ಗೇಲ್ 105 ಸಿಕ್ಸ್ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರು. 103 ಸಿಕ್ಸರ್ ಬಾರಿಸಿರೋ ನ್ಯೂಜಿಲೆಂಡ್ನ ಮಾರ್ಟಿನ್ ಗಪ್ಟಿಲ್ 2ನೇ ಪ್ಲೇಸ್ನಲ್ಲಿದ್ದರು. ಮೊದಲ ಮ್ಯಾಚ್ನಲ್ಲಿ 2 ಸಿಕ್ಸರ್ ಬಾರಿಸಿದ್ದ ರೋಹಿತ್ ಶರ್ಮಾ 2ನೇ ಸ್ಥಾನಕ್ಕೆ ಜಿಗಿದಿದ್ದರು. ಈ ಮ್ಯಾಚ್ನಲ್ಲಿ 2 ಸಿಕ್ಸ್ ಬಾರಿಸುತ್ತಿದ್ದಂತೆ ಸಿಕ್ಸರ್ ಕಿಂಗ್ ಪಟ್ಟ ಅಲಂಕರಿಸಿದರು. ಒಟ್ಟು 107 ಸಿಕ್ಸರ್ ಗಳೊಂದಿಗೆ ಟಿ20ಐನಲ್ಲಿ ರೋಹಿತ್ ಶರ್ಮಾ ಅತೀ ಹೆಚ್ಚು ಸಿಕ್ಸರ್ ಬಾರಿಸಿದವರ ಪಟ್ಟಿಯಲ್ಲಿ ನಂಬರ್ 1 ಸ್ಥಾನಕ್ಕೆ ಬಂದಂತಾಗಿದೆ.
ಇನ್ನು ರೋಹಿತ್ ಶರ್ಮಾ 51 ಬಾಲ್ಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್ ಮೂಲಕ 67 ರನ್ ಗಳಿಸಿ ಥಾಮಸ್ಗೆ ವಿಕೆಟ್ ಒಪ್ಪಿಸಿದ್ರು.