Friday, December 27, 2024

‘ನಾನು ಜೀವನವಿಡಿ ಈ ದಿನಕ್ಕೆ ಕಾಯ್ತಿದ್ದೆ’ : ಸುಷ್ಮಾ ಸ್ವರಾಜ್ ಕೊನೆಯ ಟ್ವೀಟ್..!

ನವದೆಹಲಿ : ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಇನ್ನು ನೆನಪು ಮಾತ್ರ. ಇದ್ದಕ್ಕಿದ್ದಂತೆ ಸುಷ್ಮಾ ಸ್ವರಾಜ್ ಎಲ್ಲರನ್ನು ಅಗಲಿದ್ದಾರೆ.‌ರಾಷ್ಟ್ರ ರಾಜಕಾರಣ ಕಂಡ ಈ ಧೀಮಂತ ನಾಯಕಿ ಇನ್ನಿಲ್ಲ ಅನ್ನುವ ಕಹಿ ಸತ್ಯವನ್ನು ಅರಗಿಸಿಕೊಳ್ಳಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ. 

ಇನ್ನು ಅವರು ನಿಧನರಾಗುವ ಕೇವಲ 3 ಗಂಟೆಯ ಮೊದಲು ಟ್ವೀಟ್ ಮೂಲಕ ಪ್ರಧಾನಿ‌ ನರೇಂದ್ರ ಮೋದಿಯವರಿಗೆ ಧನ್ಯವಾದ ಸಲ್ಲಿಸಿದ್ದರು.
ಸಂಸತ್ತಿನಲ್ಲಿ ಜಮ್ಮು-ಕಾಶ್ಮೀರದ ವಿಭಜನೆ ಮತ್ತು ಪುನರ್ ರಚನೆ ಮಸೂದೆ ಅಂಗೀಕಾರ ಸಿಕ್ಕ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿದ್ದ ಅವರು, “ಪ್ರಧಾನಿಮಂತ್ರಿ ಜೀ…ನಿಮಗೆ ಧನ್ಯವಾದಗಳು. ನಾನು ನನ್ನ ಜೀವನವಿಡಿ ಈ ಒಂದು ದಿನಕ್ಕಾಗಿ ಕಾಯುತ್ತಿದ್ದೆ. ಥ್ಯಾಂಕ್ಯು ವೆರಿ ಮಚ್’ ಅಂತ ಟ್ವೀಟ್ ಮಾಡಿದ್ದರು.‌ ಈ ಮೂಲಕ ಕಲಂ 370 ಮತ್ತು 35 (ಎ) ರದ್ದಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದರು.

RELATED ARTICLES

Related Articles

TRENDING ARTICLES